Advertisement

Ningaloo Eclipse ; ಆಸ್ಟ್ರೇಲಿಯಾ ,ಇಂಡೋನೇಷ್ಯಾದಲ್ಲಿ ಗೋಚರಿಸಿದ ಸೂರ್ಯ ಗ್ರಹಣ

02:55 PM Apr 20, 2023 | Team Udayavani |

ನವದೆಹಲಿ : ಹೈಬ್ರಿಡ್ ಸೂರ್ಯಗ್ರಹಣ ಎಂದು ಕರೆಯಲಾದ ‘ನಿಂಗಲೂ ಗ್ರಹಣ’ ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ಗುರುವಾರ ಗೋಚರಿಸಿತು.

Advertisement

ವೃತ್ತಾಕಾರದ ಗ್ರಹಣದ ಸಮಯದಲ್ಲಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಲಿಲ್ಲ, ಬದಲಾಗಿ, ಸೂರ್ಯನ ಮೇಲೆ ಅತಿಕ್ರಮಿಸಲಾದ ಒಂದು ಸಣ್ಣ ಡಾರ್ಕ್ ಡಿಸ್ಕ್ ಆಗಿ ಗೋಚರಿಸಿತು. ಬೆಂಕಿಯ ಉಂಗುರ ಪರಿಣಾಮವನ್ನು ಉಂಟುಮಾಡಿತು.

ಎಕ್ಸ್‌ಮೌತ್, ಪಶ್ಚಿಮ ಆಸ್ಟ್ರೇಲಿಯಾದ ಸರ್ಕಾರದ ಪ್ರಕಾರ ಸಂಪೂರ್ಣ ಗ್ರಹಣವು ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಪಟ್ಟಣದಲ್ಲಿ ಮಾತ್ರ ಗೋಚರಿಸಿತು.

ಭಾಗಶಃ ಸೂರ್ಯಗ್ರಹಣವು ಸುಮಾರು ಮೂರು ಗಂಟೆಗಳ ಕಾಲ ಗೋಚರಿಸಿತು. ಭಾರತೀಯ ಕಾಲಮಾನ ಬೆಳಗಿನ 3.34 ರಿಂದ 6.32 ವರೆಗೆ, ಸಂಪೂರ್ಣ ಗ್ರಹಣವು 4.29 ರಿಂದ 4.30 ವರೆಗೆ ಬಹಳ ಕಡಿಮೆ ಅವಧಿಯವರೆಗೆ ಗೋಚರಿಸಿದೆ ಎಂದು ವರದಿಯಾಗಿದೆ.

ಅಂತಾರಾಷ್ಟ್ರೀಯ ಜನಸಮೂಹ ಎಕ್ಸ್‌ಮೌತ್‌ನಲ್ಲಿ ಜಮಾಯಿಸಿ ಟೆಂಟ್‌ಗಳು ಮತ್ತು ಟ್ರೇಲರ್‌ಗಳಲ್ಲಿ ಕ್ಯಾಂಪಿಂಗ್ ಮಾಡಿದ್ದರು, ಪಟ್ಟಣದ ಅಂಚಿನಲ್ಲಿ ಕ್ಯಾಮೆರಾಗಳು ಮತ್ತು ಇತರ ವೀಕ್ಷಣಾ ಸಾಧನಗಳ ಮೂಲಕ ಗ್ರಹಣ ವೀಕ್ಷಿಸಿದರು. ಇಂಡೋನೇಷ್ಯಾದ ರಾಜಧಾನಿಯಲ್ಲಿ, ಮೋಡಗಳಿಂದ ಅಸ್ಪಷ್ಟವಾದ ಭಾಗಶಃ ಗ್ರಹಣವನ್ನು ವೀಕ್ಷಿಸಲು ನೂರಾರು ಜನರು ಜಕಾರ್ತಾ ತಾರಾಲಯಕ್ಕೆ ಬಂದಿದ್ದರು. ಭಾರತದಲ್ಲಿ ಗ್ರಹಣ ಗೋಚರವಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next