Advertisement
ಸಿ/2022 ಇ3 ಧೂಮಕೇತುಈ ಧೂಮಕೇತುವಿಗೆ ಸಿ/2022 ಇ3(ಜೆಟಿಎಫ್) ಎಂದು ನಾಮಕರಣ ಮಾಡಲಾಗಿದೆ. 2022ರ ಮಾರ್ಚ್‌ನಲ್ಲಿ ಗುರು ಗ್ರಹದ ಸಮೀಪ ಈ ಧೂಮಕೇತುವನ್ನು ಝಿಕಿ ಟ್ರಾನ್ಸಿಯಂಟ್ ಫೆಸಿಲಿಟಿ ವಿಜ್ಞಾನಿಗಳು ಪತ್ತೆ ಮಾಡಿದ್ದರು. ಈ ಧೂಮುಕೇತುವಿನ ಸುತ್ತಳತೆ ಸುಮಾರು 1 ಕಿ.ಮೀ. ಇದೆ ಎಂದು ಅಂದಾಜಿಸಲಾಗಿದೆ. ಇದು ನಿಯೋವೈಸ್ ಧೂಮಕೇತುಗೆ ಹೋಲಿಸಿದರೆ ಗಾತ್ರದಲ್ಲಿ ಚಿಕ್ಕದು.
ಭೂಮಿ ಸಮೀಪ ಹಾದುಹೋಗುವ ಈ ಧೂಮಕೇತು ಅನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ವಾತಾವರಣ ಸೂಕ್ತವಲ್ಲದಿದ್ದರೆ ಮಂದವಾಗಿ ಕಾಣಬಹುದು. ಹಾಗಾಗಿ ಟೆಲಿಸ್ಕೋಪ್ ಅಥವಾ ಬೈನಾಕ್ಯುಲರ್ ಸಹಾಯದಿಂದ ಸ್ಪಷ್ಟವಾಗಿ ಧೂಮಕೇತು ಕಾಣಲಿದೆ. ಮಂಜು ಮತ್ತು ಧೂಳಿನಿಂದ ಕೂಡಿರುವ ಈ ಧೂಮಕೇತು ಅನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ಇಂದು ಸೂರ್ಯನ ಸಮೀಪ
ಜ.12ರಂದು ಈ ಧೂಮಕೇತು ಸೂರ್ಯನ ಸಮೀಪ ಕಾಣಿಸಿಕೊಳ್ಳಲಿದೆ. ಜ.21-22ರಂದು ಉತ್ತರಾರ್ಧ ಗೋಳದಲ್ಲಿ ಇರುವುವವರಿಗೆ ಈ ಧೂಮಕೇತು ಕಾಣಲಿದೆ.
Related Articles
ಫೆ.1ರಂದು ಈ ಧೂಮಕೇತು ಭೂಮಿ ಸಮೀಪ ಕಾಣಿಸಿಕೊಳ್ಳಲಿದೆ. ವಾತಾವರಣ ತಿಳಿಯಾದ ಪ್ರದೇಶದಲ್ಲಿ, ಯಾವುದೇ ಮಾಲಿನ್ಯ ಇಲ್ಲದ ಪ್ರದೇಶದಲ್ಲಿ ಧೂಮಕೇತು ಸ್ಪಷ್ಟವಾಗಿ ಬರಿಗಣ್ಣಿಗೆ ಕಾಣಿಸಲಿದೆ.
Advertisement
ಭೂಮಿ ಸಮೀಪ ಬಂದಾಗ ಈ ಧೂಮಕೇತು ಮತ್ತಷ್ಟು ಪ್ರಕರವಾಗಿ ಕಾಣಲಿದೆ. ಫೆ.10ರಂದು ಈ ಧೂಮಕೇತು ಮಂಗಳನ ಸಮೀಪ ಕಾಣಿಸಿಕೊಳ್ಳಲಿದೆ ಎಂದು ಝಿಕಿ ಟ್ರಾನ್ಸಿಯಂಟ್ ಫೆಸಿಲಿಟಿ ವಿಜ್ಞಾನಿಗಳು ತಿಳಿಸಿದ್ದಾರೆ.