Advertisement

US; ನ್ಯೂಯಾರ್ಕ್ ನಗರದಲ್ಲಿ 4.7 ತೀವ್ರತೆಯ ಅಪರೂಪದ ಭೂಕಂಪ

08:43 PM Apr 05, 2024 | Team Udayavani |

ನ್ಯೂಯಾರ್ಕ್: ಶುಕ್ರವಾರ ನ್ಯೂಯಾರ್ಕ್ ಸಿಟಿ ಪ್ರದೇಶದಲ್ಲಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆಯ ಭೂಕಂಪನವನ್ನು ಯುಎಸ್ ಜಿಯೋಲಾಜಿಕಲ್ ಸರ್ವೆ ಮಾಪನ ಮಾಡಿದೆ. ಕೇಂದ್ರಬಿಂದುವು ನ್ಯೂಜೆರ್ಸಿಯ ಲೆಬನಾನ್ ಬಳಿ ಇದೆ ಎಂದು ಹೇಳಿದೆ. ತತ್ ಕ್ಷಣವೇ ಯಾವುದೇ ಹಾನಿಯ ಕುರಿತು ವರದಿಯಾಗಿಲ್ಲ.

Advertisement

ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರವು ಆರಂಭದಲ್ಲಿ ಭೂಕಂಪವನ್ನು 5.5 ತೀವ್ರತೆ ಎಂದು ಹೇಳಿತ್ತು.

ಯಾವುದೇ ಹಾನಿಯ ಆರಂಭಿಕ ವರದಿಗಳಿಲ್ಲ ಎಂದು ನ್ಯೂಯಾರ್ಕ್‌ನ ಅಗ್ನಿಶಾಮಕ ಇಲಾಖೆ ಹೇಳಿದೆ. ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಅವರು ಭೂಕಂಪದ ಬಗ್ಗೆ ವಿವರಿಸಿದ್ದು “ಈ ಸಮಯದಲ್ಲಿ ನಾವು ಯಾವುದೇ ಪ್ರಮುಖ ಪರಿಣಾಮಗಳ ವರದಿಗಳನ್ನು ಹೊಂದಿಲ್ಲವಾದರೂ, ನಾವು ಇನ್ನೂ ಪರಿಣಾಮವನ್ನು ನಿರ್ಣಯಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next