Advertisement

ಅಪರೂಪದ ನಾಯಕ ಅಲಸ್ಟೇರ್‌ ಕುಕ್‌

11:20 AM Sep 29, 2018 | |

ವಿಶ್ವಕ್ಕೆ ಕ್ರಿಕೆಟ್‌ ಪರಿಚಯಿಸಿದ ಇಂಗ್ಲೆಂಡ್‌ ತಂಡದಲ್ಲಿ ಇಲ್ಲಿಯವರೆಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರರ ಪೈಕಿ ಮೊದಲಿಗೆ ಕಾಣಸಿಗುವವರು ಮಾಜಿ ಕ್ಯಾಪ್ಟನ್‌ ಅಲೆಸ್ಟೇರ್‌ ಕುಕ್‌. ಭಾರತದ ವಿರುದ್ಧ ವೃತ್ತಿ ಬದುಕು ಆರಂಭಿಸಿದ ಇವರು ಭಾರತದ ವಿರುದ್ಧವೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಅಪರೂಪದ ನಾಯಕ. 

Advertisement

33 ವರ್ಷದ ಕುಕ್‌ ಇಂಗ್ಲೆಂಡ್‌ ತಂಡದಲ್ಲಿ ನಾಯಕನಾಗಿ ಉತ್ತಮ ಪ್ರದರ್ಶನ ತೋರಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಇಂಗ್ಲೆಂಡ್‌ ತಂಡದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಸಿದವರಲ್ಲಿ ಮೊದಲಿಗರಾಗಿದ್ದಾರೆ. 160 ಟೆಸ್ಟ್‌ ಪಂದ್ಯವನ್ನಾಡಿ 12, 254 ರನ್‌ ಕಲೆಹಾಕಿ¨ªಾರೆ. ಇದರಲ್ಲಿ 32 ಶತಕ ಹಾಗೂ 56 ಅರ್ಧಶತಕವಿದೆ. ಟೆಸ್ಟ್‌ನಲ್ಲಿ ಕುಕ್‌ ಗರಿಷ್ಠ ಸ್ಕೋರ್‌ 294. ಏಕದಿನ ಕ್ರಿಕೆಟ್‌ನಲ್ಲಿ 92 ಪಂದ್ಯಗಳನ್ನಾಡಿ 3,204 ರನ್‌ ಬಾರಿಸಿದ್ದು, 5 ಶತಕ ಹಾಗೂ 19 ಅರ್ಧಶತಕ ಸೇರಿದೆ. ಏಕದಿನ ಕ್ರಿಕೆಟ್‌ನಲ್ಲಿ 137 ರನ್‌ ಶ್ರೇಷ್ಠ ಸಾಧನೆ.

ಇಂಗ್ಲೆಂಡ್‌ನ‌ ಗರಿಷ್ಠ ರನ್‌ ವೀರ
ಇಂಗ್ಲೆಂಡ್‌ ಪರ 161 ಟೆಸ್ಟ್‌ ಪಂದ್ಯಗಳನ್ನಾಡಿರುವ ಕುಕ್‌, 12,472 ರನ್‌ ಕಲೆಹಾಕಿದ್ದು, ಟೆಸ್ಟ್‌ ಕ್ರಿಕೆಟ…ನಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿದ ಆಂಗ್ಲ ಬ್ಯಾಟ್ಸಮನ್‌. ಅಷ್ಟೇ ಅಲ್ಲದೇ ಟೆಸ್ಟ್‌ ಕ್ರಿಕೆಟ…ನಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವ ಬ್ಯಾಟ್ಸಮನ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಕುಮಾರ ಸಂಗಕಾರ ಅವರನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ್ದಾರೆ.

ಅತೀ ಹೆಚ್ಚು ಶತಕದ ಜೊತೆಯಾಟದಲ್ಲಿ ಕುಕ್‌ ಭಾಗಿ
ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ  ಅತಿ ಹೆಚ್ಚು ಶತಕಗಳ ಜೊತೆಯಾಟದಲ್ಲಿ ಭಾಗಿಯಾದ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್‌ ಓಪನರ್‌ ಕುಕ್‌ 4ನೇ ಸ್ಥಾನದಲ್ಲಿದ್ದಾರೆ. ಭಾರತದ ದಿ ವಾಲ್‌ ಖ್ಯಾತಿಯ ರಾಹುಲ್‌ ದ್ರಾವಿಡ್‌ 88 ಬಾರಿ ಶತಕದ ಜೊತೆಯಾಟದಲ್ಲಿ ಭಾಗಿ ಆಗುವ ಮೂಲಕ ಮೊದಲ ಸ್ಥಾನ, ಸಚಿನ್‌ ತೆಂಡುಲ್ಕರ್‌ 86 ಬಾರಿ, ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್‌ ರಿಕಿ ಪಾಂಟಿಂಗ್‌ 85 ಬಾರಿ ಶತಕದ ಜೊತೆಯಾಟವಾಡುವ ಮೂಲಕ ಮೊದಲ 3 ಸ್ಥಾನ ಹಾಗೂ  77 ಬಾರಿ ಶತಕದ ಜೊತೆಯಾಟದಲ್ಲಿ ಭಾಗಿಯಾಗಿರುವ ಕುಕ್‌ 4ನೇ ಸ್ಥಾನದಲ್ಲಿದ್ದಾರೆ.

ಅತೀ ಹೆಚ್ಚು ರನ್‌ ಗಳಿಸಿರುವ ಎಡಗೈ ಬ್ಯಾಟ್ಸ್‌ಮನ್‌
 ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಕಲೆಹಾಕಿರುವ ಎಡಗೈ ಬ್ಯಾಟ್ಸಮನ್‌ಗಳ ಪಟ್ಟಿಯಲ್ಲಿ ಕುಕ್‌ ಮೊದಲ ಸ್ಥಾನದಲ್ಲಿ¨ªಾರೆ. 161 ಟೆಸ್ಟ್‌ ಪಂದ್ಯಗಳಲ್ಲಿ ಕುಕ್‌ 12,472 ರನ್‌ ಗಳಿಸಿದರೆ, ಶ್ರೀಲಂಕಾ ಮಾಜಿ ಕ್ಯಾಪ್ಟನ್‌ ಕುಮಾರ ಸಂಗಕ್ಕಾರ 134 ಟೆಸ್ಟ್‌ ಪಂದ್ಯಗಳಲ್ಲಿ 12400 ರನ್‌ ಗಳಿಸಿ¨ªಾರೆ. ಇನ್ನು ವೆಸ್ಟ್‌ ಇಂಡಿಸ್‌ ಕ್ರಿಕೆಟ್‌ ದಿಗ್ಗಜ ಬ್ರಿಯನ್‌ ಲಾರಾ 131 ಟೆಸ್ಟ್‌ ಪಂದ್ಯಗಳಲ್ಲಿ 11,953 ರನ್‌ ಗಳಿಸಿದ್ದಾರೆ.

Advertisement

ಫ‌ಸ್ಟ್‌ ಟೆಸ್ಟ್‌-ಲಾಸ್ಟ್‌  ಟೆಸ್ಟ್‌ನಲ್ಲಿ ಶತಕ
ಅಂತಾರಾಷ್ಟ್ರೀಯ ಕ್ರಿಕೆಟಗೆ ಪಾದರ್ಪಣೆ ಮಾಡಿದ ಮೊದಲ ಪಂದ್ಯ ಹಾಗೂ ವಿದಾಯ ಪಂದ್ಯ ಎರಡರಲ್ಲೂ ಶತಕ ಸಿಡಿಸಿದ ವಿಶ್ವದ 5ನೇ ಆಟಗಾರ ಎಂಬ ದಾಖಲೆ ಕುಕ್‌ ಬರೆದ್ದಾರೆ. 2006ರಲ್ಲಿ ನಡೆದ ನಾಗಪುರ್‌ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಅಜೇಯ 104 ರನ್‌ ಗಳಿಸಿದ್ದ ಕುಕ್‌, ಓವೆಲ…ನಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ 147 ರನ್‌ ಸಿಡಿಸಿದ್ದಾರೆ. ಮೂರನೇ ಇನಿಂಗ್ಸ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ಆಟಗಾರ ಎನ್ನುವ ಖ್ಯಾತಿಗೆ ಕುಕ್‌ ಪಾತ್ರರಾಗಿದ್ದು ಮೂರನೇ ಇನಿಂಗ್ಸ್‌ನಲ್ಲಿ 13 ಶತಕ ಸಿಡಿಸುವ ಮೂಲಕ ಸಂಗಕ್ಕಾರ 12 ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

4 ಸಲ 150 ಪ್ಲಸ್‌ ರನ್‌
ಏಷ್ಯಾ ಖಂಡದಲ್ಲಿ ಅತಿ ಹೆಚ್ಚು 4 ಸಲ 150 ಪ್ಲಸ್‌ ರನ್‌ ಬಾರಿಸಿದ ಹೊರಗಿನ ಬ್ಯಾಟ್ಸ್‌ಮನ್‌ ಎಂಬ ದಾಖಲೆಯೂ ಕುಕ್‌ ಹೆಸರಿನಲ್ಲಿದೆ. ಬಾರ್ಡರ್‌, ಲಾಯ್ಡ, ಲಾರಾ, ಫ್ಲೆಮಿಂಗ್‌, ಡಿ ವಿಲಿಯರ್‌ ತಲಾ 3 ಸಲ 150 ಪ್ಲಸ್‌ ರನ್‌ ಬಾರಿಸಿ¨ªಾರೆ. 2015ರಲ್ಲಿ ಸರ್ವಾಧಿಕ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಕುಕ್‌ ಪಾತ್ರರಾದರು.

ಅತೀ ದೊಡ್ಡ ಇನಿಂಗ್ಸ್‌
ಟೆಸ್ಟ್‌ ಕ್ರಿಕೆಟ್‌ನ ಟಾಪ್‌ 5 ಲಾಂಗೆಸ್ಟ್‌ ಇನಿಂಗ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ 2015 ನಡೆದ ಟೆಸ್ಟ್‌ ಪಂದ್ಯದಲ್ಲಿ  ಕುಕ್‌ 836 ನಿಮಿಷ ಕಾಲ (14 ಗಂಟೆಗೆ 4 ನಿಮಿಷ ಕಡಿಮೆ) ಕ್ರೀಸ್‌ ನಲ್ಲಿ ನಿಂತು 263(528 ಚೆಂಡು) ರನ್‌ ಗಳಿಸಿ ಸಾಧನೆ ಮೆರೆದಿ¨ªಾರೆ. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಮೂರನೆಯ ಅತಿದೊಡ್ಡ ಇನಿಂಗ್ಸ್‌ ಎಂಬ ಹೆಗ್ಗಳಿಕೆಯನ್ನು ಕುಕ್‌ ಆಟ ಪಡೆದುಕೊಂಡಿತು. ಒಟ್ಟಿನಲ್ಲಿ ಸರಿ ಸುಮಾರು 12 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟನಲ್ಲಿ ತನ್ನದೇ ಛಾಪು ಮುಡಿಸಿದ್ದ ಇಂಗ್ಲೆಂಡ್‌ ಓಪನರ್‌ , ವಿದಾಯಕ್ಕೂ ಮುನ್ನ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ವಿಶ್ವಕಪ್‌ ಆಡುವ ಅವಕಾಶ ಸಿಗಲಿಲ್ಲ ಎಂಬ ಕೊರಗು
ಕ್ರಿಕೆಟ್‌ ಜಗತ್ತಿನಲ್ಲಿ ಕೆಲವು ಅತ್ಯುತ್ತಮ ಆಟಗಾರರಿಗೂ ತಮ್ಮ ವೃತ್ತಿ ಜೀವನದಲ್ಲಿ ಎಷ್ಟೇ ಸಾಧನೆ ಮಾಡಿದರೂ ಒಂದÇÉಾ ಒಂದು ಕೊರತೆ ಇದ್ದೇ ಇರುತ್ತದೆ. ಇದಕ್ಕೆ ಕುಕ್‌ ಕೂಡ ಹೊರತಾಗಿಲ್ಲ. ಇಂಗ್ಲೆಂಡ್‌ ಪರ ಟೆಸ್ಟ್‌ ಕ್ರಿಕೆಟ…ನಲ್ಲಿ ಅತಿ ಹೆಚ್ಚು ರನ್‌, ಹೆಚ್ಚು ಶತಕ, ಹೆಚ್ಚು ಅರ್ಧ ಶತಕಗಳಿಸಿರುವ ಕುಕ್‌ ತಮ್ಮ ರಾಷ್ಟ್ರದ ಪರ ಒಂದೂ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಲಿಲ್ಲ ಎಂಬುದು ಶೋಚನೀಯ ಸಂಗತಿ. 2006ರಲ್ಲಿ ಏಕದಿನ ಕ್ರಿಕೆಟ…ಗೆ ಕಾಲಿಟ್ಟಿದ್ದ  ಕುಕ್‌ 92 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್‌ ಪ್ರತಿನಿಧಿಸಿ, 3,204 ರನ್‌ ಗಳಿಸಿ¨ªಾರೆ. ಇದರಲ್ಲಿ 5 ಶತಕ, 19 ಅರ್ಧಶತಕಗಳೂ ಸೇರಿವೆ. 2007ರ ವಿಶ್ವಕಪ್‌ ವೇಳೆ ಕುಕ್‌ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿರಲಿಲ್ಲ ಹಾಗಾಗಿ ಅವಕಾಶವೂ ಸಿಕ್ಕಿರಲಿಲ್ಲ. 2011ರಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಇಸಿಬಿ ಕುಕ್‌ರನ್ನು ವಿಶ್ವಕಪ್‌ ತಂಡಕ್ಕೆ ಪರಿಗಣಿಸಿರಲಿಲ್ಲ. ಭಾರತದ ವಿರುದ್ಧ ಕೊನೆಯ ಟೆಸ್ಟ್‌ ಬಳಿಕ ವೃತ್ತಿ ಜೀವನ ಅಂತ್ಯಗೊಳಿಸಲಿರುವ ಕುಕ್‌ಗೆ ವಿಶ್ವಕಪ್‌ ಕನಸು ನನಸಾಗಿಯೇ ಉಳಿದಿದೆ. ಇದು ಕುಕ್‌ಗೆ ಮಾತ್ರವಲ್ಲ ಇದುವರೆಗೂ ಇಂಗ್ಲೆಂಡ್‌ ತಂಡವೂ ಕೂಡ ವಿಶ್ವಕಪ್‌ ಗೆದ್ದಿಲ್ಲ ಎನ್ನುವುದು ಒಂದು ದುರಂತ.

ಧನಂಜಯ ಆರ್‌.ಮಧು

Advertisement

Udayavani is now on Telegram. Click here to join our channel and stay updated with the latest news.

Next