Advertisement

Contract Carriage: ಬೈಕ್‌ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ

09:16 AM Oct 03, 2024 | Team Udayavani |

ಹೊಸದಿಲ್ಲಿ: ರ‍್ಯಾಪಿಡೊ, ಉಬರ್‌ನಂಥ ಅಗ್ರಿಗೇಟರ್‌ಗಳಿಂದ ಮೋಟಾರ್‌ ಸೈಕಲ್‌ಗಳ ವಾಣಿಜ್ಯ ಬಳಕೆ ವಿಚಾರದಲ್ಲಿನ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೆಜ್ಜೆಯಿಟ್ಟಿದೆ. ಮೋಟಾರು ವಾಹನಗಳ ಕಾಯ್ದೆಗೆ ತಿದ್ದುಪಡಿ ತಂದು ಬೈಕ್‌ಗಳನ್ನೂ ವಾಣಿಜ್ಯ ವಾಹನಗಳೆಂದು ಪರಿಗಣಿಸಲು ಕೇಂದ್ರ ಸರಕಾರ ಮುಂದಾಗಿದೆ.

Advertisement

ಒಪ್ಪಂದದ ಮೇರೆಗೆ ಪ್ರಯಾಣಿಕರನ್ನು ಬಾಡಿಗೆಗೆ ಕರೆದೊಯ್ಯುವ ವಾಹನಗಳನ್ನು ಕಾಂಟ್ರ್ಯಾಕ್ಟ್ ಕ್ಯಾರೇಜ್‌ ಎನ್ನುತ್ತಾರೆ. ಪ್ರಸ್ತುತ ಕಾಯ್ದೆಯ ನಿಯಮಗಳ ಪ್ರಕಾರ, ಎಲ್ಲ ಮೋಟಾರು ವಾಹನಗಳನ್ನೂ ಕಾಂಟ್ರ್ಯಾಕ್ಟ್ ಕ್ಯಾರೇಜ್‌ ಆಗಿ ಬಳಸಬಹುದು. ಆದರೆ ಇದರಲ್ಲಿ ಸ್ಪಷ್ಟತೆ ತರುವ ಸಲುವಾಗಿ ದ್ವಿಚಕ್ರ ವಾಹನಗಳನ್ನೂ ಇದಕ್ಕೆ ಸೇರಿಸಲು ಪ್ರಸ್ತಾವಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದಕ್ಕೆ ಕ್ಯಾಬ್‌ ಮಾಲಕರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಕಾಯ್ದೆಗೆ ಒಟ್ಟು 67 ತಿದ್ದುಪಡಿ ಪ್ರಸ್ತಾವಿಸಲಾಗಿದ್ದು, ಅದರಲ್ಲಿ ಗಂಟೆಗೆ ಗರಿಷ್ಠ 50 ಕಿ.ಮೀ. ವೇಗದ ಮಿತಿ ಇರುವ ತ್ರಿಚಕ್ರ ವಾಹನಗಳಿಗೆ, ಶಾಲಾ ಬಸ್ಸು, ವ್ಯಾನ್‌ಗಳಿಗೆ ಹೊಸ ವ್ಯಾಖ್ಯಾನ ನೀಡಲೂ ಯೋಜಿಸಲಾಗಿದೆ.

ಇದನ್ನೂ ಓದಿ: Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

Advertisement

Udayavani is now on Telegram. Click here to join our channel and stay updated with the latest news.

Next