Advertisement

ಶೀಘ್ರ ಖಜಾನೆ-ಉಪನೋಂದಣಿ ಕಚೇರಿ

11:53 AM Sep 15, 2019 | Team Udayavani |

ಕನಕಗಿರಿ: ಪಟ್ಟಣದಲ್ಲಿ ಖಜಾನೆ ಮತ್ತು ಉಪ ನೋಂದಣಿ ಕಚೇರಿಯನ್ನು ಪ್ರಾರಂಭಿಸಲು ಈಗಾಗಲೇ ಬಾಡಿಗೆ ಕಟ್ಟಡ ಪಡೆಯಲಾಗಿದೆ. ಶೀಘ್ರವೇ ಕಚೇರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳೀದರು.

Advertisement

ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ 2018-19ನೇ ಸಾಲಿನ ಆರ್‌ಐಡಿಎಫ್‌-24 ಯೋಜನೆಯಡಿ 40 ಲಕ್ಷ ರೂ. ವೆಚ್ಚದ ನೂತನ ಕಟ್ಟಡಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಲಿಕೇರಿ, ಜೀರಾಳ ಸೇರಿದಂತೆ 14 ಕೆರೆಗಳಿಗೆ ನೀರು ತುಂಬಿಸಲು ಈಗಾಗಲೇ ಡಿಪಿಆರ್‌ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲೂಕಿನಲ್ಲಿ ಅವಶ್ಯವಿದ್ದರೆ ಪುನಃ ಗೋಶಾಲೆ ಪ್ರಾರಂಭಿಸಲಾಗುವುದು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕನಕಗಿರಿಯ ಲಕ್ಷ್ಮೀ ದೇವಿ ಮತ್ತು ಕಾಟಾಪುರ ಕೆರೆಗಳಿಗೆ ನದಿಯಿಂದ ನೀರನ್ನು ಹರಿಸಲಾಗುತ್ತಿದೆ. ಕೆರೆಗಳನ್ನು ಭರ್ತಿ ಮಾಡಿ ಉಳಿದ ಕೆರೆಗಳಿಗೆ ನೀರು ಬಿಡಲಾಗುವುದು ಎಂದರು.

ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಪ್ರಮುಖರಾದ ದೊಡ್ಡಯ್ಯ ಅರವಟಗಿಮಠ, ಅಮರಗುಂಡಪ್ಪ ತೆಗ್ಗಿನಮನಿ, ಅಮರಪ್ಪ ಗದ್ದಿ, ಅಶ್ವಿ‌ನಿ ದೇಸಾಯಿ, ಸಣ್ಣ ಕನಕಪ್ಪ, ಹುಲಿಗೆಮ್ಮ ನಾಯಕ, ಪ್ರಕಾಶ ಹಾದಿಮನಿ, ಸುಭಾಷ, ಗ್ಯಾನಪ್ಪ ಚಿಕ್ಕಖೇಡಾ, ಗುರುನಗೌಡ, ರಮೇಶರೆಡ್ಡಿ ಓಣಿಮನಿ, ಸಂತೋಷ ಹಾದಿಮನಿ, ಆನಂದ ಭತ್ತದ್‌, ಹರೀಶ ಪೂಜಾರ, ತಾಲೂಕು ಪಶು ವೈದ್ಯಾಧಿಕಾರಿ ಮಲ್ಲಯ್ಯ, ಪಪಂ ಮುಖ್ಯಾಧಿಕಾರಿ ಸಂಕನಗೌಡ, ಪಶು ವೈದ್ಯಾಧಿಕಾರಿಗಳಾದ ಶಿವಪೂಜೆ, ಮಲ್ಲಕಪ್ಪ, ಕಾವ್ಯ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next