Advertisement
ಎಚ್ ಕೆಇ ಸಂಸ್ಥೆ ಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಮಾಚ್೯ ಕೊನೆ ವಾರದಲ್ಲೇ ಚುನಾವಣೆ ನಡೆಯುತ್ತದೆ. ಆದರೆ ಈಗ ಬರುವ ಫೆಬ್ರವರಿ 27ರಂದೇ ನಡೆಯುತ್ತಿದೆ. ಅದೇ ರೀತಿ ಕಳೆದ 2020 ರ ಮಾರ್ಚ್ 29 ರಂದು ನಿಗದಿಯಾಗಿದ್ದ ಚುನಾವಣೆಯು ಕೊವಿಡ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಚುನಾವಣೆಯು ನಂತರ ಅನೇಕ ಬೆಳವಣಿಗೆಗಳು ನಡೆದು ಕೊನೆಗೆ ನ್ಯಾಯಾಲಯ ಮೆಟ್ಟಿಲೇರಿದ ಮೇಲೆ ಈಗ ಒಮ್ಮೇಲೆ ಚುನಾವಣೆ ಫೆಬ್ರವರಿ 14 ರಂದು ನಿಗದಿಯಾಗಿರುವುದು ಸಂಸ್ಥೆ ಸದಸ್ಯರಾಗಿರುವ ವ್ಯಾಪಾರಿಗಳಲ್ಲಿ ಆಶ್ಚರ್ಯ ಹಾಗೂ ಕುತೂಹಲ ಮೂಡಿಸಿದೆ.
Related Articles
Advertisement
ಎಚ್ಕೆಇ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಮತ್ತೊಮ್ಮೆ ತಮ್ಮ ಫೆನಾಲ್ ದೊಂದಿಗೆ ಸ್ಫರ್ಧಿಸಲು ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆ. ಅದೇ ರೀತಿ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಹಾಗೂ ವಿಧಾನ ಪರಿಷತ್ ಶಶೀಲ್ ಜಿ.ನಮೋಶಿ ಫೆನಾಲ್ ದೊಂದಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿ ಮತದಾರ ಬಳಿ ತೆರಳಲು ಮುಂದಾಗಿದ್ದಾರೆ. ಖ್ಯಾತ ವೈದ್ಯರಾದ ಡಾ. ಶರಣಬಸಪ್ಪ ಕಾಮರಡ್ಡಿ ಸಹ ಅಧ್ಯಕ್ಣ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. 13 ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಒಟ್ಟಾರೆ 50 ಜನರು ಸ್ಪರ್ಧಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮೂರು ಭಾರತೀಯ ಚಿತ್ರಗಳು
ಶಾಸಕರ ಸಂಬಂಧಿಕರು, ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವುದರಿಂದ ಚುನಾವಣಾ ಅಖಾಡ ಮತ್ತಷ್ಟು ರಂಗೇರುವಂತೆ ಮಾಡಲಿದೆ.
ಇನ್ನೂ ಎಚ್ಕೆಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಅಮರನಾಥ ಪಾಟೀಲ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೆಂಟ (ಸೊಸೆಯ ಸಹೋದರ) ಪ್ರಶಾಂತ ಮಾನಕರ ಸೇರಿದಂತೆ ಮತ್ತಿತರರು ಕಣದಲ್ಲಿ ರುವುದರಿಂದ ಚುನಾವಣೆ ಮತ್ತಷ್ಟು ರಂಗೇರುವಂತೆ ಮಾಡಿದೆ. ಎಚ್ಕೆಇ ಮತದಾರರಲ್ಲಿ ಅರ್ಧದಷ್ಟು ಮತದಾರ ರು ಎಚ್ಕೆಸಿಸಿಐ ಮತದಾರರಾಗಿದ್ದಾರೆ. ಹೀಗಾಗಿ ಈ ಎರಡು ಸಂಸ್ಥೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ.
ಇದನ್ನೂ ಓದಿ: ದಿ.ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ