Advertisement

ವಾಯುಪಡೆಗೆ ಶೀಘ್ರ 200 ಗಸ್ತು ವಿಮಾನ

10:01 AM Jan 14, 2020 | Sriram |

ಕೋಲ್ಕತಾ: ವೈಮಾನಿಕ ಗಸ್ತು ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ವಾಯುಪಡೆಗಾಗಿ 200 ಗಸ್ತು ವಿಮಾನಗಳನ್ನು ಖರೀದಿ ಮಾಡುವತ್ತ ಕೇಂದ್ರ ಸರಕಾರ ಹೆಜ್ಜೆ ಇಟ್ಟಿದೆ ಎಂದು ರಕ್ಷಣಾ ಇಲಾಖೆಯ ಕಾರ್ಯದರ್ಶಿ ಅಜಯ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಮೊದಲ ಹಂತದಲ್ಲಿ, ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ನಿರ್ಮಾಣದ “ಎಲ್‌.ಸಿ.ಎ. ತೇಜಸ್‌ ಮಾರ್ಕ್‌ 1′ ಮಾದರಿಯ 83 ವಿಮಾನಗಳ ಖರೀದಿಗೆ ಮುಂದಡಿ ಇಡಲಾಗಿದ್ದು, ಈ ಪ್ರಕ್ರಿಯೆಯು ಈಗಾಗಲೇ ಕೊನೆಯ ಹಂತಕ್ಕೆ ತಲುಪಿದೆ. ಇದರ ಜತೆಗೆ ಇನ್ನೂ ವಿವಿಧ ಮಾದರಿಯ 110 ಗಸ್ತು ವಿಮಾನಗಳನ್ನು ಖರೀದಿಸುವ ಬಗ್ಗೆ ರಕ್ಷಣಾ ಇಲಾಖೆಯು ಕೇಂದ್ರ ಸರಕಾರದ ಮುಂದೆ ಆಸಕ್ತಿಯನ್ನು ವ್ಯಕ್ತಪಡಿಸಿದ್ದು, ಇದಕ್ಕೆ ಪೂರಕವಾಗಿ ಪ್ರಸ್ತಾವನೆಯನ್ನೂ ಸಲ್ಲಿಸಲಾಗುತ್ತದೆ. ಒಟ್ಟಾರೆಯಾಗಿ 200 ಗಸ್ತು ವಿಮಾನಗಳನ್ನು ಕೊಳ್ಳುವ ಆಲೋಚನೆ ಸದ್ಯದಲ್ಲೇ ಕಾರ್ಯಗತವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next