Advertisement

ಪುಣೆ: ಲಿಫ್ಟ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ, ದರೋಡೆ

07:34 PM Aug 05, 2020 | sudhir |

ಮಹಾರಾಷ್ಟ್ರ: ಬಸ್‌ಗಾಗಿ ಕಾಯುತ್ತಿದ್ದ 45 ವರ್ಷದ ಮಹಿಳೆಯನ್ನು ಲಿಫ್ಟ್ ಕೊಡುವ ನೆಪದಲ್ಲಿ ಅತ್ಯಾಚಾರ ನಡೆಸಿ, ದರೋಡೆಗೈದ ಪ್ರಕರಣ ಆ. 2ರಂದು ಸಂಭವಿಸಿದೆ. ಆರೋಪಿಯನ್ನು ದಶರಥ್‌ ಬನ್ಸೋಡ್‌(53) ಎನ್ನಲಾಗಿದ್ದು ಈತನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

Advertisement

ಪುಣೆ – ಸೋಲ್ಹಾಪುರ ಹೆದ್ದಾರಿಯ ಫಾತಿಮಾ ನಗರ ಬಳಿಯ ಲೋನಿ-ಕಲ್ಬೋರಿಗೆ ಹೋಗಲು ಬಸ್‌ ನಿಲ್ದಾಣದಲ್ಲಿ ಮಹಿಳೆ ಬಸ್‌ಗಾಗಿ ಕಾಯುತ್ತಿದ್ದರು. ಆಗ ದ್ವಿಚಕ್ರದ ವಾಹನದಲ್ಲಿ ಬಂದ ದಶರಥ್‌ ಬನ್ಸೋಡ್‌ (53) ಆಕೆಗೆ ಲಿಫ್ಟ್ ನೀಡುತ್ತೇನೆಂದು ಹೇಳಿ ಬೈಕಿನಲ್ಲಿ ಕುಳ್ಳಿರಿಸಿ ಮದುವೆ ಮಂಟಪದ ಕೋಣೆಯೊಂದಕ್ಕೆ ಕರೆೆದೊಯ್ದಿದ್ದಾನೆ. ಅಲ್ಲಿ ಸಂತ್ರಸ್ತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಆಕೆಯಲ್ಲಿದ್ದ ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಕಸಿದುಕೊಂಡಿದ್ದಾನೆ.

ಈ ಬಗ್ಗೆ ಮುಂಧವಾ ಪೊಲೀಸ್‌ ಠಾಣೆಯಲ್ಲಿ ಮಹಿಳೆ ದೂರು ದಾಖಲು ಮಾಡಿದ್ದು, ಸೋಮವಾರ ಪೊಲೀಸರು ಬಂಧಿಸಿ ಆರೋಪಿಯ ಮೇಲೆ 376, 379 ಸೆಕ್ಷನ್‌ ಅಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next