Advertisement

ವಿವಾಹಿತೆಯ ಅತ್ಯಾಚಾರ, ಕೊಲೆ: ಸರೋವರದ ಬಳಿ ನಗ್ನದೇಹ ಪತ್ತೆ

04:08 PM Aug 28, 2018 | Team Udayavani |

ಕೋಲ್ಕತ : 24 ದಕ್ಷಿಣ ಪರಗಣದ ಕುಲ್ಪಿ ಬ್ಲಾಕ್‌ ನಲ್ಲಿ ನಿನ್ನೆ ಸೋಮವಾರ ರಾತ್ರಿ ಕೊಳವೊಂದರ ಸಮೀಪ 35ರ ಹರೆಯದ ವಿವಾಹಿತೆಯ ನಗ್ನ ಮೃತ ಶರೀರ ಪತ್ತೆಯಾಗಿದೆ. ಇದು ಅತ್ಯಾಚಾರ ಅಥವಾ ವಿವಾಹೇತರ ಸಂಬಂಧದ ಫ‌ಲವಾಗಿ ನಡೆದಿರುವ ಕೊಲೆ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. 

Advertisement

ಮಹಿಳೆಯ ದೇಹದ ಮೇಲೆ ಚಿತ್ರಹಿಂಸೆಯಿಂದ ಉಂಟಾದ ಗಾಯದ ಗುರುತುಗಳು ಕಂಡುಬಂದಿವೆ; ಆಕೆ ತೊಟ್ಟಿದ್ದ ಚಿನ್ನಾಭರಣಗಳೆಲ್ಲ ನಾಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮೃತ ಮಹಿಳೆಯನ್ನು ರುನಾ ಲೈಲಾ ಖಾನ್‌ ಎಂದು ಗುರುತಿಸಲಾಗಿದೆ. ಈಕೆ ತನ್ನ ಗಂಡನೊಂದಿಗೆ ಕುಲ್ಪಿ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ  ಕುಚುಬೇರಿಯ ಗ್ರಾಮದ ಕರೀಂಪುರ್‌ ಹ್ಯಾಟ್‌ ಪ್ರದೇಶದಲ್ಲಿ  ವಾಸವಾಗಿದ್ದಳು. ಈಕೆ ಪ್ರತೀ ನಿತ್ಯ ಮಧ್ಯಾಹ್ನ ತನ್ನ ಹಳ್ಳಿ ಮನೆಗೆ ಹೋಗುತ್ತಿದ್ದಳು ಎಂದು ಆಕೆಯ ಪತಿ ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ ಹಾಗೆ ಹೋದವಳು ರಾತ್ರಿಯಾದರೂ ಮನೆಗೆ ಬರಲಿಲ್ಲ. ಹುಡುಕಾಡ ತೊಡಗಿದ ಗಂಡನನಿಗೆ ಆಕೆಯ ಶವ ಕೊಳದ ಸಮೀಪ ಕಂಡು ಬಂತು. ಅಂತೆಯೇ ಆತ ಪೊಲೀಸರಿಗೆ ದೂರು ನೀಡಿದ್ದು ಅವರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next