Advertisement

Delhi Rape: ಅಧಿಕಾರಿ ಪುತ್ರ ಆರೋಪಿಯಲ್ಲ

08:46 PM Aug 29, 2023 | Team Udayavani |

ನವದೆಹಲಿ: ಗೆಳಯನ ಮಗಳನ್ನೇ ಅತ್ಯಾಚಾರಕ್ಕೊಳಪಡಿಸಿ ಅಮಾನತಾಗಿರುವ ದೆಹಲಿ ಅಧಿಕಾರಿ ಪ್ರಕರಣದಲ್ಲಿ, ಬೇರೆ ಯಾರನ್ನೂ ಆರೋಪಿಗಳೆಂದು ಹೆಸರಿಸಿಲ್ಲ. ಅಧಿಕಾರಿಯ ಮಗನೂ ಆರೋಪಿಯಲ್ಲ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸಂತ್ರಸ್ತೆಯ ಮೇಲೆ ಬೇರೆ ವ್ಯಕ್ತಿಗಳೂ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪಗಳೂ ಇವೆ. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌, ಆ ಇನ್ನಿತರ ಆರೋಪಿಗಳು ಯಾರು? ಸಂತ್ರಸ್ತೆ ಹೇಳಿರುವುದೇನು? ಉಳಿದ ಆರೋಪಿಗಳ ವಿರುದ್ಧ ಕೈಗೊಂಡಿರುವ ಕ್ರಮ ಏನು? ಎಂಬುದರ ಮಾಹಿತಿ ಸಲ್ಲಿಸುವಂತೆ ಸೂಚನೆ ನೀಡಿತ್ತು.

Advertisement

ಈ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಮಾಹಿತಿ ಸಲ್ಲಿಸಿದ್ದು, ಸಂತ್ರಸ್ತೆ ನೀಡಿರುವ ಲಿಖೀತ ದೂರಿನಲ್ಲಿ ಮಾಜಿ ಅಧಿಕಾರಿಯನ್ನು ಮಾತ್ರ ಆಕೆ ಉಲ್ಲೇಖೀಸಿದ್ದಾರೆ. ಅವರ ಮಗನನ್ನಾಗಲೀ ಅಥವಾ ಬೇರೆ ಯಾವುದೇ ಆರೋಪಿಗಳ ಹೆಸರನ್ನಾಗಲೀ ಉಲ್ಲೇಖೀಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣ ಏನು?: ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಧಿಕಾರಿಯಾಗಿದ್ದ ಪ್ರೇಮೋದಯ್‌ ಖಾಖಾ ತಮ್ಮ ನಿವಾಸದಲ್ಲೇ ಆಶ್ರಯ ಪಡೆದಿದ್ದ 14 ವರ್ಷದ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಆಕೆ ಗರ್ಭ ಧರಿಸಲು ಕಾರಣವಾಗಿದ್ದರು. ಅವರ ಪತ್ನಿಯೇ ಗರ್ಭಪಾತ ಮಾಡಿಸಿದ್ದರು!

Advertisement

Udayavani is now on Telegram. Click here to join our channel and stay updated with the latest news.

Next