Advertisement

ಮಕ್ಕಳ ಅತ್ಯಾಚಾರಕ್ಕೆ ಅತ್ಯಧಿಕ ಪ್ರಚಾರ: ನಟಿ ಹೇಮಾ ಮಾಲಿನಿ ವಿವಾದ

03:51 PM Apr 21, 2018 | Team Udayavani |

ಮಥುರಾ : ಅತ್ಯಂತ ಆಘಾತಕಾರಿ ಮತ್ತು ವಿವೇಚನಾರಹಿತ ಹೇಳಿಕೆಯೊಂದರಲ್ಲಿ ಬಾಲಿವುಡ್‌ ಹಿರಿಯ ನಟಿ, ಬಿಜೆಪಿ ನಾಯಕಿ ಹೇಮಾ ಮಾಲಿನಿ ಅವರು “ಈ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಅತ್ಯಧಿಕ ಪ್ರಚಾರ ಸಿಗುತ್ತಿದೆ” ಎಂದು ಹೇಳಿದ್ದಾರೆ. 

Advertisement

“ಹಿಂದೆಯೂ ರೇಪ್‌ ನಡೆಯುತ್ತಿದ್ದಿರಬಹುದು; ಆದರೆ ಅವುಗಳಿಗೆ ಪ್ರಚಾರ ಸಿಗುತ್ತಿರಲಲ್ಲ; ಹಾಗಾಗಿ ಜನರಿಗೆ ಅದರ ಬಗ್ಗೆ ಮಾಹಿತಿ ಇರುತ್ತಿರಲಿಲ್ಲ; ಆದರೆ ಈಚಿನ ದಿನಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣಗಳಿಗೆ ಅತ್ಯಧಿಕ ಪ್ರಚಾರ ಸಿಗುತ್ತಿದೆ’ ಎಂದು ನಟಿ ಹೇಮಾ ಮಾಲಿನಿ ಹೇಳಿದರು. 

ತನ್ನ ಹೇಳಿಕೆಯನ್ನು ಕೊನೆಗೆ ಸಾವರಿಸಿಕೊಂಡ ಹೇಮಾ, “ಸಮಾಜದಲ್ಲಿ ಈ ಪರಿಯ ಅತ್ಯಾಚಾರಗಳು ನಡೆಯಬಾರದು. ಇದು ನಮ್ಮ ದೇಶವನ್ನು ಕೆಟ್ಟದಾಗಿ ಕಾಣಿಸುತ್ತದೆ’ ಎಂದು ಹೇಳಿದರು. 

ಜಮ್ಮು ಕಾಶ್ಮೀರದ ಕಥುವಾ ಮತ್ತು ಉತ್ತರ ಪ್ರದೇಶದ ಉನ್ನಾವೋ ದಲ್ಲಿ ಈಚೆಗೆ ನಡೆದಿದ್ದ ಗ್ಯಾಂಗ್‌ ರೇಪ್‌ ಬಗ್ಗೆ ದೇಶಾದ್ಯಂತ ಭುಗಿಲೆದ್ದಿದ್ದ ಜನಾಕ್ರೋಶಕ್ಕೆ ಪ್ರತಿಕ್ರಿಯೆ ಎಂಬಂತೆ ನಟಿ ಹೇಮಾ ಮಾಲಿನಿ ಮಾತನಾಡುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next