Advertisement

ಬಾಲಕಿಯ ಅತ್ಯಾಚಾರ: ಬಿಜೆಪಿ, ಹಿಂದೂ ಸಂಘಟನೆ ಮೌನವೇಕೆ: ಕೃಪಾ ಅಮರ್‌ ಆಳ್ವ

12:44 AM Aug 06, 2023 | Team Udayavani |

ಮಂಗಳೂರು: ಉಡುಪಿಯ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಬಿಜೆಪಿ, ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆದರೆ ವಿಟ್ಲದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಏಕೆ ಪ್ರತಿಭಟನೆ ನಡೆಸಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೃಪಾ ಅಮರ್‌ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಪರಿಶಿಷ್ಟ ಜಾತಿಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗುವಾಗ ಯಾಕೆ ಮಕ್ಕಳ ಆಯೋಗ ಕ್ರಮ ತೆಗೆದುಕೊಂಡಿಲ್ಲ. ಪ್ರಕರಣದ ಐವರು ಆರೋಪಿಗಳು ಸಂಘಟನೆಯವರೆಂದು ತಿಳಿದು ಬಂದಿದೆ.

Advertisement

ನಾನು ಬಾಲಕಿಯ ಮನೆಗೆ ಹೋಗಿದ್ದು, ಆಕೆಯದ್ದು ಕಡು ಬಡವರ ಕುಟುಂಬ. ಆಕೆಯನ್ನು ಮತ್ತೆ ಶಾಲೆಗೆ ಸೇರಿಸಿ ಧೈರ್ಯ ತುಂಬಿಸಬೇಕಿದೆ. ಈ ಪ್ರಕರಣದಲ್ಲಿ ಹಿಂದೂ ಸಂಘಟನೆಗಳು ಪ್ರತಿಕ್ರಿಯಿಸುತ್ತಿಲ್ಲ ಎಂದರು. ರಾಹುಲ್‌ ಗಾಂಧಿ ಪರವಾಗಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಜಾಪ್ರಭುತ್ವ, ಸಂವಿಧಾನದ ಗೆಲುವು. ಗುಜರಾತ್‌ ಸೆಷನ್‌ ಕೋರ್ಟ್‌ ತೀರ್ಪು ಬಂದು 24 ಗಂಟೆಯಲ್ಲೇ ಪಾರ್ಲಿಮೆಂಟ್‌ನಿಂದ ಅವರನ್ನು ಅಮಾನತು ಮಾಡಿದ್ದರು. ಈಗ ಸುಪ್ರೀಂ ತೀರ್ಪಿನ ಬಳಿಕ ಅಷ್ಟೇ ವೇಗದಲ್ಲಿ ಪಾರ್ಲಿಮೆಂಟ್‌ಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಶುಭೋದಯ ಆಳ್ವ, ಮುಡಾ ಮಾಜಿ ಅಧ್ಯಕ್ಷ ಕೋಡಿಜಾಲ್‌ ಇಬ್ರಾಹಿಂ, ಕಚೇರಿ ಕಾರ್ಯದರ್ಶಿ ನಝೀರ್‌ ಬಜಾಲ್‌, ಮುಖಂಡ ಉಬೈದು ವಿಟ್ಲ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next