Advertisement

ಅತ್ಯಾಚಾರ ಆರೋಪ: ಯುವಕನ ಬಂಧನ

11:41 AM Oct 21, 2017 | |

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಯುವಕನೊಬ್ಬನನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್‌ (20) ಬಂಧಿತ ಆರೋಪಿ.

Advertisement

ಯಲಹಂಕದ ಕಾಲೇಜಿನಲ್ಲಿ 2ನೇ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ ಮತ್ತು ಯುವತಿ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಆರಂಭದಲ್ಲಿ ಇಬ್ಬರು ಪಾರ್ಕ್‌, ಹೋಟೆಲ್‌ ಎಂದೆಲ್ಲ ಸುತ್ತಾಡಿದ್ದಾರೆ.

ಯುವತಿಯೊಂದಿಗೆ ಹಲವು ಬಾರಿ ಶ್ರೀನಿವಾಸ್‌ ಲೈಂಗಿಕ ಸಂಪರ್ಕ ಹೊಂದಿದ್ದಾನೆ. ಇತ್ತಿಚೆಗಷ್ಟೇ ಯುವಕ ಕಾಲೇಜು ಬಿಟ್ಟು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದ. ಈ ಮಧ್ಯೆ ನಂದಿಬೆಟ್ಟಕ್ಕೆ ಕರೆದೊಯ್ದ ಶ್ರೀನಿವಾಸ್‌ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. 

ಬಳಿಕ ಯುವತಿಯ ಸಂಪರ್ಕಕ್ಕೆ ಸಿಕ್ಕಿಲ್ಲ. ಇದೀಗ ಮನ ನೊಂದ ಯುವತಿ ಶ್ರೀನಿವಾಸ್‌ ಮೇಲೆ ಯಲಹಂಕ ಉಪನಗರ ಠಾಣೆಯಲ್ಲಿ ಆತ್ಯಾಚಾರ ಆರೋಪ ಮಾಡಿ ದೂರು ನೀಡಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next