Advertisement
ಈ ಹಿನ್ನೆಯಲ್ಲಿ ಮೈಹರ್ ಪುರಸಭೆಯ ಅಧಿಕಾರಿಗಳು ಆರೋಪಿಗಳಾದ ರವೀಂದ್ರ ಕುಮಾರ್ ಹಾಗೂ ಅತುಲ್ ಭದೋಲಿಯಾ ಅವರ ಜಮೀನು ಮತ್ತು ಮನೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಿದ್ದರು. ಇಬ್ಬರೂ ಆರೋಪಿಗಳ ನಿವಾಸವನ್ನು ಸರ್ಕಾರಿ ಭೂಮಿಯಲ್ಲಿ ಅನುಮತಿ ಇಲ್ಲದೇ, ನಿರ್ಮಿಸಿರುವುದು ತಿಳಿದುಬಂದ ಬೆನ್ನಲ್ಲೇ ಶನಿವಾರ ಬೆಳಗ್ಗೆ ಆರೋಪಿಗಳ ನಿವಾಸಗಳನ್ನು ಧ್ವಂಸಗೊಳಿಸಿರುವುದಾಗಿ ತಿಳಿಸಿದ್ದಾರೆ. ಇನ್ನು ಪ್ರಸಿದ್ಧ ಸರಸ್ವತಿ ದೇಗುಲದ ಟ್ರಸ್ಟ್‌ನಲ್ಲಿ ಆರೋಪಿಗಳು ಕಾರ್ಯ ನಿರ್ವಹಿಸುತ್ತಿದ್ದು, ಆ ಇಬ್ಬರನ್ನೂ ದೇಗುಲ ಮಂಡಳಿ ಕೆಲಸದಿಂದ ವಜಾಗೊಳಿಸಿರುವುದಾಗಿ ತಿಳಿಸಿದೆ.
ಮೈಹಾರ್ ಪ್ರದೇಶದ 12 ವರ್ಷದ ಬಾಲಕಿಯೊಬ್ಬಳು ಗುರುವಾರದಿಂದ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಅಲ್ಲಿನ ಪ್ರಸಿದ್ಧ ದೇಗುಲ ಸಮೀಪದ ಕಾಡು ಪ್ರದೇಶದಲ್ಲಿ ಆಕೆ ರಕ್ತದ ಮಡುವಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ಆಕೆಯ ಮೇಲೆ ರವೀಂದ್ರ ಹಾಗೂ ಅತುಲ್ ಎಂಬಿಬ್ಬರು ಸೇರಿ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪವಿದೆ. ಅಲ್ಲದೇ, ಬಾಲಕಿಯನ್ನು ತೀವ್ರವಾಗಿ ಹಿಂಸಿಸಿ, ಆಕೆಯ ದೇಹವನ್ನು ಕಚ್ಚಿ ಗಾಯಗೊಳಿಸಿ, ಗುಪ್ತಾಂಗಕ್ಕೆ ಹರಿತವಾದ ವಸ್ತುವೊಂದನ್ನು ಚುಚ್ಚಿದ್ದಾರೆ ಎನ್ನಲಾಗಿದ್ದು, ವೈದ್ಯಕೀಯ ವರದಿಗಳ ಬಳಿಕವಷ್ಟೇ ಇದು ದೃಢಪಡಬೇಕಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರವೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.