Advertisement

ಆಸ್ಕರ್ ರೇಸ್ ನಿಂದ ಹೊರಬಿದ್ದ ರಣವೀರ್- ಆಲಿಯಾ ನಟನೆಯ ಗಲ್ಲಿ ಬಾಯ್

09:53 AM Dec 18, 2019 | keerthan |

ಮುಂಬೈ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ರೇಸ್ ನಿಂದ ರಣವೀರ್ ಸಿಂಗ್ ನಟನೆಯ ಗಲ್ಲಿ ಬಾಯ್ ಹೊರಬಿದ್ದಿದೆ. ಇದರೊಂದಿಗೆ ಆಸ್ಕರ್ ಸ್ಪರ್ಧೆಯಲ್ಲಿ ಭಾರತದ ಅಧಿಕೃತ ಸ್ಪರ್ಧೆ ಅಂತ್ಯವಾಗಿದೆ.

Advertisement

ಆಸ್ಕರ್ ಪ್ರಶಸ್ತಿ ನೀಡುವ ದಿ ಅಕಾಡಮೆ ಆಫ್ ಮೋಶನ್ ಪಿಕ್ಚರ್ ಆರ್ಟ್ಸ್ ಸಂಸ್ಥೆ ಸೋಮವಾರ ಪ್ರಶಸ್ತಿ ಸುತ್ತಿನ ಅಂತಿಮ ಹತ್ತು ಚಿತ್ರಗಳನ್ನು ಹೆಸರಿಸಿದ್ದು ಅದರಲ್ಲಿ ಭಾರತದ ಗಲ್ಲಿ ಬಾಯ್ ಹೆಸರಿಲ್ಲ.

ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದ ಗಲ್ಲಿಬಾಯ್ ಚಿತ್ರ ಬಾಕ್ಸ್ ಆಫಿಸ್ ನಲ್ಲೂ ಸದ್ದು ಮಾಡಿತ್ತು.

ಜೋಯಾ ಅಕ್ತರ್ ನಿರ್ದೇಶಿಸಿದ್ದ ಈ ಚಿತ್ರ ಬಡ ಕುಟುಂಬದ ಹುಡುಗನೊಬ್ಬ ರ್ಯಾಪ್ ಹಾಡುಗಳ ಮೂಲಕ ಪ್ರಸಿದ್ದಿಗೆ ಬರುವಂತಹ ಕಥಾ ಹಂದರವನ್ನು ಹೊಂದಿತ್ತು.

ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಅಂತಿಮ ಐದರವರೆಗೆ ತಲುಪಿದ್ದ ಭಾರತದ ಕೊನೆಯ ಚಿತ್ರವೆಂದರೆ 2001ರಲ್ಲಿ ತೆರೆಕಂಡ ಅಮೀರ್ ಖಾನ್ ಅಭಿನಯದ ಅಶುತೋಷ್ ಗೌರೀಕರ್ ನಿರ್ದೇಶನದ ಲಗಾನ್ ಚಿತ್ರ.

Advertisement
Advertisement

Udayavani is now on Telegram. Click here to join our channel and stay updated with the latest news.

Next