ಮುಂಬಯಿ: ರಾಜಕೀಯ ಪಕ್ಷದ ಪರವಾಗಿ ಪ್ರಚಾರ ನಡೆಸುವ ತನ್ನ ಡೀಪ್ ಫೇಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಟ ರಣ್ ವೀರ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿರುವುದಾಗಿ ವರದಿಯಾಗಿದೆ.
ರಣ್ ವೀರ್ ಸಿಂಗ್ ಎಐ ರಚಿತ ಡೀಪ್ ಫೇಕ್ ವಿಡಿಯೋದಲ್ಲಿ ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡುವುದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ರಣವೀರ್ ಸಿಂಗ್ ಅವರು ಇತ್ತೀಚೆಗೆ ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿನ ವಿಡಿಯೋಗೆ ಎಐ ಮೂಲಕ ಧ್ವನಿ ಸೇರಿಸಿ ಡೀಪ್ ಫೇಕ್ ಮಾಡಿ ವೈರಲ್ ಮಾಡಲಾಗಿದೆ.
ಈ ಸಂಬಂಧ ರಣವೀರ್ ಸಿಂಗ್ ಅವರ ಅಧಿಕೃತ ವಕ್ತಾರರು ಈ ಬಗ್ಗೆ ನಟ ಪೊಲೀಸ್ ದೂರು ದಾಖಲಿಸಿದ್ದಾರೆ ಮತ್ತು ಸೈಬರ್ ಕ್ರೈಮ್ ಸೆಲ್ ಹೆಚ್ಚಿನ ತನಿಖೆಗಾಗಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಮುಂಬೈ ಪೊಲೀಸರ ಸೈಬರ್ ಕ್ರೈಮ್ ಸೆಲ್‌ಗೆ ದೂರು ನೀಡಲಾಗಿದೆ.
ರಣ್ ವೀರ್ ಮಾತ್ರವಲ್ಲದೆ ನಟ ಆಮೀರ್ ಖಾನ್ ಹಾಗೂ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ಮತಯಾಚನೆ ಮಾಡುವ ಡೀಪ್ ಫೇಕ್ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.