Advertisement

ವೈವಾಹಿಕ ಜೀವನಕ್ಕೆ ಕಾಲಿಟ್ಟ ದೀಪಿಕಾ-ರಣವೀರ್‌

07:13 AM Nov 15, 2018 | Team Udayavani |

ಹೊಸದಿಲ್ಲಿ: ಬಾಲಿವುಡ್‌ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ಬುಧವಾರ ಇಟಲಿಯಲ್ಲಿನ ಲೇಕ್‌ ಕೋಮೋದಲ್ಲಿ ವಿವಾಹವಾಗಿದ್ದಾರೆ. ಬುಧವಾರ ಕೊಂಕಣಿ ಶೈಲಿಯಲ್ಲಿ ವಿವಾಹ ಸಂಪ್ರದಾಯ ನಡೆದಿದ್ದು, ಗುರುವಾರ ಸಿಂಧಿ ಸಂಪ್ರದಾಯದ ಪ್ರಕಾರ ಇತರ ಸಂಪ್ರದಾಯಗಳು ಪೂರೈಸಲಿವೆ. ವಿವಾಹ ಸಮಾರಂಭದಿಂದ ಮಾಧ್ಯಮ ಪ್ರತಿನಿಧಿಗಳನ್ನು ದೂರವೇ ಇಡಲಾಗಿತ್ತು. ವಿವಾಹ ಸಮಾರಂಭದಲ್ಲಿ ಗಣ್ಯರು ಹಾಗೂ ವಧೂವರರ ಸಂಬಂಧಿಕರು ಭಾಗವಹಿಸಿದ್ದರು. ಮೂಲಗಳ ಪ್ರಕಾರ ಬಾಲಿವುಡ್‌ ನಟ ಶಾರುಖ್‌ ಖಾನ್‌, ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಹಾಗೂ ನಿರ್ದೇಶಕಿ ಫ‌ರಾ ಖಾನ್‌ ಸೇರಿ ದಂತೆ ಕೇವಲ 40 ಜನರನ್ನು ವಿವಾಹಕ್ಕೆ ಆಹ್ವಾನಿಸಲಾಗಿದೆ. ಬಾಲಿವುಡ್‌ನ‌ ಗಣ್ಯರು ವಧೂವರರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next