ಕಂಪ್ಯೂಟರ್‌ಗಳಲ್ಲಿ ವೈರಸ್ ಅಟ್ಯಾಕ್ ಆಗಿದ್ದು ದತ್ತಾಂಶಗಳು ಹಾಳಾಗಿವೆ.
Advertisement
ಆದರೆ ಬಿಎಸ್‌ಎನ್‌ಎಲ್‌ನಲ್ಲಿ ಪರ್ಯಾಯ ವ್ಯವಸ್ಥೆ ಇರುವುದರಿಂದ ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸೈಬರ್ ದಾಳಿಯಲ್ಲಿ ಕಂಪ್ಯೂಟರ್‌ನಲ್ಲಿನ ದತ್ತಾಂಶಗಳು ಸಂಕೇತಾಕ್ಷರಗಳಾಗಿ ಮಾರ್ಪಾಟಾಗಿವೆ. ಬಿಎಸ್ಸೆನ್ನೆಲ್ ಕಚೇರಿಯ ಹಲವಾರು ಕಂಪ್ಯೂಟರ್‌ಗಳಲ್ಲಿ ಇದ್ದ ಡಾಟಾಗಳೆಲ್ಲವೂ ಇದ್ದಕ್ಕಿದ್ದಂತೆ ನಾಶವಾಗಿವೆ. ಯಾವ ಫೋಲ್ಡರ್ ಕ್ಲಿಕ್ಕಿಸಿದರೂ ಈ ಫೋಲ್ಡರ್‌ನಲ್ಲಿ ಏನೂ ಇಲ್ಲ ಎಂಬ ಉತ್ತರ ಬರುತ್ತಿದೆ. ಹೀಗಾಗಿ ಎಲ್ಲಾ ಡಾಟಾಗಳನ್ನೂ ಪುನಃ ಫೋಲ್ಡರ್‌ಗಳಿಗೆ ತುಂಬುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ಹೇಳಿದರು. ಒಮ್ಮೆ ಈ ವೈರಸ್ ದಾಳಿ ನಡೆದರೆ ಕಂಪ್ಯೂಟರ್‌ಗಳಲ್ಲಿ ಕೆಲಸ ಮಾಡೋದು ಕಷ್ಟ. ಫೈಲ್‌ಗಳನ್ನು ಓಪನ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಬಿಎಸ್ಸೆನ್ನೆಲ್ ತಂತ್ರಜ್ಞರು ಕಂಪ್ಯೂಟರ್‌ನಲ್ಲಿರುವ ಎಲ್ಲ ದತ್ತಾಂಶಗಳನ್ನು ಒಂದು ಸಿಡಿಗೆದಾಖಲಿಸಿಡಲು ಈಗಾಗಲೇ ಸೂಚನೆ ನೀಡಿದ್ದಾರೆ. ಅಲ್ಲದೆ ಕಂಪ್ಯೂಟರ್‌ನಲ್ಲಿ ಅಪರಿಚಿತ ವೈಬ್‌ಸೈಟ್‌ಗಳನ್ನು ಓಪನ್ ಮಾಡದಂತೆ ಸೂಚಿಸಲಾಗಿದೆ.