Advertisement

ಸಂಗೀತಪ್ರಿಯರನ್ನು ರಂಜಿಸಿದ ಸಲೀಂ, ಸುಲೇಮಾನ್‌

11:50 AM Mar 11, 2017 | Team Udayavani |

ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಇಂಪೀರಿಯಲ್‌ ಬ್ಲೂ ಸೂಪರ್‌ಹಿಟ್‌ ನೈಟ್‌ ಸೀಸನ್‌-3 ಸಂಗೀತ ಕಾರ್ಯಕ್ರಮದಲ್ಲಿ ಜನಪ್ರಿಯ, ಪ್ರಶಸ್ತಿ ಪುರಸ್ಕೃತ ಜೋಡಿಗಳಾದ ಸಲೀಂ ಮತ್ತು ಸುಲೇಮಾನ್‌ ವೈವಿಧ್ಯ ಸೂಪರ್‌ಹಿಟ್‌ ಹಾಡುಗಳ ಮೂಲಕ ಸಂಗೀತಪ್ರಿಯರನ್ನು ರಂಜಿಸಿದರು. 

Advertisement

ಜೋಡಿ ತನ್ನ ಪ್ರತಿಭಾನ್ವಿತ ತಂಡದೊಂದಿಗೆ ಕೆಲವೊಂದು ಅತ್ಯುತ್ತಮ ಗೀತೆಗಳನ್ನು ಪ್ರಸ್ತುತಪಡಿಸಿತು. ಆಯೇ ಖುದಾ, ಓ ರೇ ಪಿಯಾ, ಹೌಲೆ, ಹೌಲೆ, ಬಚ್ಚಾ ಹೇ ಹಸೀನೊ, ಐನವೀ…ಐನವಿ… ಮುಂತಾದ ಸೂಪರ್‌ ಹಿಟ್‌ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಪ್ರೇಕ್ಷಕ ವರ್ಗ ಹಾಡಿಗೆ ಧ್ವನಿಗೂಡಿಸಿ ಹೆಜ್ಜೆ ಹಾಕಿತು.  ಬೃಹತ್‌ ವೇದಿಕೆಯಲ್ಲಿ ವರ್ಣ ರಂಜಿತ ವಿದ್ಯುತ್‌ ಬೆಳಕಿನ ಚಮತ್ಕಾರಗಳ ನಡುವೆ ಸಲೀಂ- ಸುಲೇಮಾನ್‌ ಜೋಡಿ ಹಾಡಿಗೆ ಸಂಗೀತಗಾರರು ಸಾಥ್‌ ನೀಡಿದರು. ಇಂಪೀರಿಯಲ್‌ ಬ್ಲೂ ಸೂಪರ್‌ಹಿಟ್‌ ನೈಟ್ಸ್‌ ಸೀಸನ್‌-3 ಈಗ ದೇಶಾದ್ಯಂತ ಪ್ರವಾಸ ಮಾಡುತ್ತಿದ್ದು, ಇಂದೋರ್‌, ಫರಿದಾಬಾದ್‌, ಗುವಾಹಟಿ, ಭುವನೇಶ್ವರ ನಗರಗಳಲ್ಲಿ ಸಂಗೀತ ಪ್ರದರ್ಶನ ನೀಡಿದೆ. ಮಂಗಳೂರಿನಲ್ಲಿ ಈ ತಂಡದ ಪ್ರಥಮ ಪ್ರದರ್ಶನವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next