Advertisement

ರಣಜಿ: ಕರ್ನಾಟಕ ತಂಡದಲ್ಲಿ ಎರಡು ಬದಲಾವಣೆ

11:25 PM Dec 30, 2019 | Team Udayavani |

ಬೆಂಗಳೂರು: ಹಿಮಾಚಲ ಪ್ರದೇಶ ವಿರುದ್ಧದ 3ನೇ ರಣಜಿ ಲೀಗ್‌ ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಮುಂಬಯಿ ವಿರುದ್ಧ ಆಡಲಿದೆ. ಇದಕ್ಕೆ ಸೋಮವಾರ ರಾಜ್ಯ ತಂಡವನ್ನು ಪ್ರಕಟಿಸಲಾಗಿದ್ದು, ಇದರಲ್ಲಿ 2 ಬದಲಾವಣೆ ಮಾಡಲಾಗಿದೆ.

Advertisement

ಆರ್‌. ಸಮರ್ಥ್ ಮತ್ತು ದೇವಯ್ಯ ಅವರನ್ನು ಕೈಬಿಟ್ಟು ಅಭಿಷೇಕ್‌ ರೆಡ್ಡಿ ಮತ್ತು ರೋನಿತ್‌ ಮೋರೆ ಅವರನ್ನು ಸೇರಿಸಿಕೊಳ್ಳಲಾಗಿದೆ.

ಮುಂಬಯಿ ಎದುರಿನ ಮುಖಾಮುಖೀ ಜ. 3ರಿಂದ “ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌’ನಲ್ಲಿ ಆರಂಭವಾಗಲಿದೆ.

ಕರ್ನಾಟಕ ತಂಡ: ಕರುಣ್‌ ನಾಯರ್‌ (ನಾಯಕ), ದೇವದತ್ತ ಪಡಿಕ್ಕಲ್‌, ಡಿ. ನಿಶ್ಚಲ್‌, ಅಗರ್ವಾಲ್‌, ಅಭಿಷೇಕ್‌ ರೆಡ್ಡಿ, ಬಿ.ಆರ್‌. ಶರತ್‌, ರೋಹನ್‌ ಕದಮ್‌, ಶ್ರೇಯಸ್‌ ಗೋಪಾಲ್‌, ಜಗದೀಶ್‌ ಸುಚಿತ್‌, ಮಿಥುನ್‌, ವಿ. ಕೌಶಿಕ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಶರತ್‌ ಶ್ರೀನಿವಾಸ್‌, ಪ್ರವೀಣ್‌ ದುಬೆ.

Advertisement

Udayavani is now on Telegram. Click here to join our channel and stay updated with the latest news.

Next