Advertisement
ಮಾರ್ಚ್ 6ಕ್ಕೆ ರಣಜಿ ಟ್ರೋಫಿ ಲೀಗ್ ಹಂತದ ಪಂದ್ಯಗಳೆಲ್ಲ ಮುಗಿದಿದ್ದವು. ಬಳಿಕ ಜಾರ್ಖಂಡ್-ನಾಗಾಲ್ಯಾಂಡ್ ನಡುವೆ 8ನೇ ಸ್ಥಾನಕ್ಕಾಗಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯವೊಂದು ನಡೆದಿತ್ತು. ಇದೀಗ ಭರ್ತಿ 3 ತಿಂಗಳ ಬ್ರೇಕ್ ಬಳಿಕ ರಣಜಿ ಟ್ರೋಫಿ ಪಂದ್ಯಾವಳಿ ಮುಂದುವರಿಯುತ್ತಿದೆ. ಆಲೂರಿನ 3 ಕೆಎಸ್‌ಸಿಎ ಕ್ರೀಡಾಂಗಣ ಹಾಗೂ ಜಸ್ಟ್ ಕ್ರಿಕೆಟ್ ಅಕಾಡೆಮಿ ಗ್ರೌಂಡ್ ಈ ಪಂದ್ಯಗಳ ಆತಿಥ್ಯ ವಹಿಸಲಿದೆ.
ಸೋಮವಾರ ಆರಂಭವಾಗಲಿರುವ 5 ದಿನಗಳ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡದ ಎದುರಾಳಿ ಉತ್ತರಪ್ರದೇಶ. ಅಧಿಕೃತವಾಗಿ ಇದು 3ನೇ ಕ್ವಾರ್ಟರ್ ಫೈನಲ್ ಮುಖಾಮುಖಿ. ಉಳಿದ 3 ಪಂದ್ಯಗಳಲ್ಲಿ ಬಂಗಾಲ-ಜಾರ್ಖಂಡ್, ಮುಂಬಯಿ-ಉತ್ತರಾಖಂಡ . ಮತ್ತು ಪಂಜಾಬ್-ಮಧ್ಯಪ್ರದೇಶ ಎದುರಾಗಲಿವೆ.
ಕರ್ನಾಟಕ “ಸಿ’ ವಿಭಾಗದಲ್ಲಿ ಅಗ್ರ ಸ್ಥಾನ ಅಲಂಕರಿಸಿದ ತಂಡ (16 ಅಂಕ). ಉತ್ತರಪ್ರದೇಶ “ಜಿ’ ವಿಭಾಗದ ಅಗ್ರಸ್ಥಾನಿ. ಆದರೆ ಗಳಿಸಿದ್ದು 13 ಅಂಕ ಮಾತ್ರ. ಎರಡೂ ತಂಡಗಳು ಮೂರರಲ್ಲಿ ಎರಡನ್ನು ಗೆದ್ದು, ಒಂದನ್ನು ಡ್ರಾ ಮಾಡಿಕೊಂಡಿದ್ದವು. ಕರ್ನಾಟಕ ತಂಡವನ್ನು ಮನೀಷ್ ಪಾಂಡೆ ಮುನ್ನಡೆಸಲಿದ್ದಾರೆ. ಮಾಯಾಂಕ್ ಅಗರ್ವಾಲ್, ಆರ್. ಸಮರ್ಥ್, ಕರುಣ್ ನಾಯರ್, ದೇವದತ್ತ ಪಡಿಕ್ಕಲ್, ಕೆ. ಸಿದ್ಧಾರ್ಥ್ ಬ್ಯಾಟಿಂಗ್ ವಿಭಾಗದ ಪ್ರಮುಖರು. ಕೆ.ಎಲ್. ರಾಹುಲ್ ಟಿ20 ಸರಣಿ ಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆ ಸಲಿರುವುದರಿಂದ ರಣಜಿಯಿಂದ ಬೇರ್ಪಟ್ಟಿದ್ದಾರೆ.
ವೇಗಿ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್‌ಗೆ ತೆರಳುವ ಟೆಸ್ಟ್ ತಂಡದಲ್ಲಿರುವುದರಿಂದ ರೆಸ್ಟ್ ಪಡೆದಿದ್ದಾರೆ. ಅನೀಶ್ವರ್ ಗೌತಮ್, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಜಗಿªàಶ್ ಸುಚಿತ್ ಪ್ರಮುಖ ಆಲ್‌ರೌಂಡರ್. ಬೌಲಿಂಗ್ ವಿಭಾಗ ರೋನಿತ್ ಮೋರೆ, ವಿದ್ಯಾಧರ ಪಾಟೀಲ್, ವಿಜಯ್ ಕುಮಾರ್ ವೈಶಾಖ್, ವಿ. ಕೌಶಿಕ್ ಅವರನ್ನು ಒಳಗೊಂಡಿದೆ. ಉಡುಪಿ ಮೂಲದ ಬೌಲರ್ ಶುಭಾಂಗ್ ಹೆಗ್ಡೆ, ಮಂಗಳೂರು ವಲಯದ ವಿದ್ವತ್ ಕಾವೇರಪ್ಪ ಕೂಡ ತಂಡದಲ್ಲಿದ್ದಾರೆ. ಆತಿ ಥೇಯ ತಂಡವಾªರಿಂದ ಕರ್ನಾಟಕದ ಮೇಲುಗೈಯನ್ನು ನಿರೀಕ್ಷಿಸಲಾಗಿದೆ.
Related Articles
Advertisement
ಕರ್ನಾಟಕ ತಂಡ: ಮನೀಷ್ ಪಾಂಡೆ (ನಾಯಕ), ಆರ್. ಸಮರ್ಥ್ (ಉಪನಾಯಕ), ಮಾಯಾಂಕ್ ಅಗರ್ವಾಲ್, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಕೆ.ವಿ. ಸಿದ್ಧಾರ್ಥ, ಡಿ. ನಿಶ್ಚಲ್, ಎಸ್. ಶರತ್ (ವಿ.ಕೀಪರ್), ಶ್ರೇಯಸ್ ಗೋಪಾಲ್, ಕೆ. ಗೌತಮ್, ಶುಭಾಂಗ್ ಹೆಗ್ಡೆ, ಜೆ. ಸುಚಿತ್, ಕೆ.ಸಿ. ಕಾರಿಯಪ್ಪ, ರೋನಿತ್ ಮೋರೆ, ವಿ. ಕೌಶಿಕ್, ವಿ. ವೈಶಾಖ್, ಎಂ. ವೆಂಕಟೇಶ್, ವಿದ್ವತ್ ಕಾವೇರಪ್ಪ, ಕಿಶನ್ ಎಸ್. ಬೆದರೆ. ಮುಖ್ಯ ತರಬೇತುದಾರ: ಯೆರ್ರೆ ಗೌಡ.