Advertisement

Ranji Trophy; ಮುಂಬಯಿ ಗೆಲುವಿಗೆ 262 ರನ್‌ ಗುರಿ

12:58 AM Oct 14, 2024 | Team Udayavani |

ವಡೋದರ: ಬರೋಡ ತಂಡದೆದುರಿನ ರಣಜಿ ಟ್ರೋಫಿಯ ಎಲೈಟ್‌ “ಎ’ ಬಣದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಲು ಹಾಲಿ ಚಾಂಪಿಯನ್‌ ಮುಂಬಯಿ ತಂಡವು 262 ರನ್‌ ಗಳಿಸುವ ಗುರಿ ಪಡೆದಿದೆ.

Advertisement

ಪಂದ್ಯದ ನಾಲ್ಕನೇ ದಿನ ಮುಂಬಯಿ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ ಕಳೆದುಕೊಂಡಿದ್ದು 42 ರನ್‌ ಗಳಿಸಿದೆ. ಅಂತಿಮ ದಿನವಾದ ಸೋಮ ವಾರ ಇನ್ನುಳಿದ 8 ವಿಕೆಟ್‌ ನೆರವಿನಿಂದ ತಂಡ ಇನ್ನೂ 220 ರನ್‌ ಗಳಿಸಬೇಕಾಗಿದೆ.

ಈ ಮೊದಲು ವಿಕೆಟ್‌ ನಷ್ಟವಿಲ್ಲದೇ 9 ರನ್ನಿನಿಂದ ದಿನದಾಟ ಆರಂಭಿಸಿದ ಬರೋಡ ತಂಡವು ತನುಷ್‌ ಕೋಟ್ಯಾನ್‌ ಅವರ ದಾಳಿಗೆ ಕುಸಿದು 185 ರನ್ನಿಗೆ ಆಲೌಟಾಯಿತು. ಒಂದು ಹಂತದಲ್ಲಿ 41 ರನ್ನಿಗೆ ಆರು ವಿಕೆಟ್‌ ಕಳೆದು ಕೊಂಡು ಒದ್ದಾಡುತ್ತಿದ್ದ ತಂಡ ವನ್ನು ಕೃಣಾಲ್‌ ಪಾಂಡ್ಯ ಆಧರಿಸಿ ದರು. ಅವರ ತಾಳ್ಮೆಯ 55 ರನ್‌ ಹಾಗೂ ಅತಿತ್‌ ಸೇಥ್‌ ಮತ್ತು ಮಹೇಶ್‌ ಪಿಥಿಯ ಅವರೊಂದಿಗೆ ಉತ್ತಮ ಜತೆ ಯಾಟ ದಿಂದಾಗಿ ಬರೋಡ ಸಾಧಾರಣ ಮೊತ್ತ ಪೇರಿಸಲು ಯಶಸ್ವಿಯಾಯಿತು. ತನುಷ್‌ ಕೋಟ್ಯಾನ್‌ 61 ರನ್ನಿಗೆ 5 ವಿಕೆಟ್‌ ಕಿತ್ತರು.
ಸಂಕ್ಷಿಪ್ತ ಸ್ಕೋರು: ಬರೋಡ 290 ಮತ್ತು 185 (ಕೃಣಾಲ್‌ ಪಾಂಡ್ಯ 55, ಅತಿತ್‌ ಸೇಥ್‌ 26, ಮಹೇಶ್‌ ಪಿಥಿಯ 40, ತನುಷ್‌ ಕೋಟ್ಯಾನ್‌ 61ಕ್ಕೆ 6); ಮುಂಬಯಿ 214 ಮತ್ತು 2 ವಿಕೆಟಿಗೆ 42 (ಆಯುಷ್‌ ಮಾತ್ರೆ 19 ಬ್ಯಾಟಿಂಗ್‌).

ಹರಿಯಾಣ, ರೈಲ್ವೇಸ್‌ಗೆ ಜಯ
ರೋಹ್ಟಕ್ ನಲ್ಲಿ ನಡೆದ ಎಲೈಟ್‌ “ಸಿ’ ಬಣದಲ್ಲಿ ಹರಿಯಾಣ ಮತ್ತು ಬಿಹಾರ ನಡುವಿನ ಪಂದ್ಯ ಮೂರನೇ ದಿನ ಮುಕ್ತಾಯ

ಗೊಂಡಿದೆ. ಹರಿಯಾಣ ತಂಡ ಇನ್ನಿಂಗ್ಸ್‌ ಮತ್ತು 43 ರನ್ನುಗಳಿಂದ ಜಯ ಗಳಿಸಿದೆ. ಬಿಹಾರ 78 ಮತ್ತು 133 ರನ್‌ ಗಳಿಸಿದ್ದರೆ, ಹರಿಯಾಣ 254 ರನ್‌ ಬಾರಿಸಿತ್ತು. ಎಲೈಟ್‌ “ಡಿ’ ಬಣದ ಚಂಡೀಗಢ ಮತ್ತು ರೈಲ್ವೇಸ್‌ ನಡುವಿನ ಪಂದ್ಯದಲ್ಲಿ ರೈಲ್ವೇಸ್‌ 181 ರನ್ನಿನಿಂದ ಗೆದ್ದಿದೆ. ರೈಲ್ವೇಸ್‌ 142 ಮತ್ತು 307 ರನ್‌ ಬಾರಿಸಿದ್ದರೆ, ಚಂಡೀಗಢ 109 ಮತ್ತು 159 ರನ್‌ ಬಾರಿಸಿತ್ತು.

Advertisement

ಸಿ.ಕೆ.ನಾಯ್ಡು ಕೂಟ ಕರ್ನಾಟಕ, ತಮಿಳುನಾಡು ಮೊದಲ ದಿನದಾಟ ರದ್ದು
ಹುಬ್ಬಳ್ಳಿ: ಮಳೆಯಿಂದ ರಾಜನಗರ ಕೆಎಸ್‌ಸಿಎ ಮೈದಾನ ತೇವಗೊಂಡಿದ್ದರಿಂದ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕರ್ನಲ್‌ ಸಿ. ಕೆ. ನಾಯ್ಡು ಕೂಟದ ಮೊದಲನೇ (ರವಿವಾರ) ದಿನದಾಟ ರದ್ದಾಗಿದೆ.
ತೀರ್ಪುಗಾರರಾದ ಸಂಜಯ ಕುಮಾರ್‌ಸಿಂಗ್‌, ಸೌರಭ್‌ ಧೋತೆ ಮತ್ತು ರೆಫರಿ ಸಂಜತ್‌ ರಾವುಲ್‌ ಮೈದಾನವನ್ನು ಪರಿಶೀಲಿಸಿದ ಬಳಿಕ ಮೊದಲ ದಿನದಾಟ ರದ್ದುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next