Advertisement
ಇಲ್ಲಿನ ಆಲೂರು ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ “ಎ’ ವಿಭಾಗದ ರಣಜಿ ಮುಖಾಮುಖೀಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ಇದರ ಭರಪೂರ ಲಾಭವೆತ್ತಿತು.
ಮಾಯಾಂಕ್ ಅಗರ್ವಾಲ್ ಮಹಾ ರಾಷ್ಟ್ರ ಎದುರು ಅಜೇಯ 304 ರನ್ ಬಾರಿಸಿ ಜೀವನಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿ
ಸಿದ ದೃಶ್ಯಾವಳಿ ಇನ್ನೂ ಕಣ್ಮುಂದೆ ನರ್ತಿಸು ತ್ತಿರುವಾಗಲೇ ದಿಲ್ಲಿ ವಿರುದ್ಧವೂ ದೊಡ್ಡ ಇನ್ನಿಂಗ್ಸ್ ಕಟ್ಟಲು ಹೊರಟಿದ್ದು, ರಾಜ್ಯದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೂಂದು ಕಂತಿನ ರಂಜನೆ ಒದಗಿಸಿದ್ದಾರೆ. 235 ಎಸೆತಗಳಿಗೆ ಜವಾಬಿತ್ತಿರುವ ಅಗರ್ವಾಲ್ 23 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ ದಿಲ್ಲಿ ದಾಳಿಯನ್ನು ಪುಡಿಗುಟ್ಟಿದ್ದಾರೆ. ದ್ವಿತೀಯ ದಿನದಾಟದಲ್ಲಿ ತಮ್ಮ ಮೊತ್ತದ ಜತೆಗೆ ತಂಡದ ಮೊತ್ತವನ್ನೂ ಮತ್ತಷ್ಟು ಎತ್ತರಕ್ಕೆ ಬೆಳೆಸುವ ಯೋಜನೆ ಮಾಯಾಂಕ್ ಅವರದು. ಇದು 33 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಅಗರ್ವಾಲ್ ಬಾರಿಸಿದ 4ನೇ ಶತಕ.
Related Articles
Advertisement
ಕೆ.ಎಲ್. ರಾಹುಲ್ ರಣಜಿ ತಂಡಕ್ಕೆ ಮರ ಳಿದ್ದರಿಂದ ಅಗರ್ವಾಲ್ ವನ್‌ಡೌನ್‌ನಲ್ಲಿ ಬ್ಯಾಟ್ ಹಿಡಿದು ಬಂದಿದ್ದರು. ಆಗ ಸರಿಯಾಗಿ 8 ಓವರ್‌ಗಳ ಆಟ ಮುಗಿದಿದ್ದು, ಕರ್ನಾಟಕ 21 ರನ್ ಮಾಡಿತ್ತು. ರಾಹುಲ್ 9 ರನ್ನಿಗೆ 27 ಎಸೆತ ಎದುರಿಸಿದರು (1 ಬೌಂಡರಿ). ಸಮರ್ಥ್-ಅಗರ್ವಾಲ್ ಸೇರಿಕೊಂಡು ದಿಲ್ಲಿ ಮೇಲುಗೈಗೆ ತಡೆಯಾಗಿ ನಿಂತರು. ಇವರಿಂದ ದ್ವಿತೀಯ ವಿಕೆಟಿಗೆ 112 ರನ್ ಒಟ್ಟುಗೂಡಿತು. ಸ್ಕೋರ್ 133 ರನ್ ಆಗಿದ್ದಾಗ 58 ರನ್ ಬಾರಿಸಿದ ಸಮರ್ಥ್ ವಿಕೆಟ್ ಉರುಳಿತು. 107 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಸೇರಿತ್ತು. ಪಾಂಡೆ ಅಮೋಘ ಬೆಂಬಲ
ಅಗರ್ವಾಲ್-ನಾಯರ್ ಸೇರಿಕೊಂಡು 3ನೇ ವಿಕೆಟಿಗೆ 48 ರನ್ ಒಟ್ಟುಗೂಡಿಸಿದರು. ನಾಯರ್ ಗಳಿಕೆ 39 ಎಸೆತಗಳಿಂದ 15 ರನ್ (2 ಬೌಂಡರಿ). ಈ ಜೋಡಿ ಬೇರ್ಪಟ್ಟ ಬಳಿಕ ಆಗಮಿಸಿದ ಮನೀಷ್ ಪಾಂಡೆ ಕ್ರೀಸ್ ಆಕ್ರಮಿಸಿಕೊಂಡು ಅಗರ್ವಾಲ್‌ಗೆ ಅಮೋಘ ಬೆಂಬಲವಿತ್ತರು. ಇವರಿಂದ 4ನೇ ವಿಕೆಟಿಗೆ 136 ರನ್ ಸಂಗ್ರಹಗೊಂಡಿತು. ಪಾಂಡೆ ಕೊಡುಗೆ 107 ಎಸೆತಗಳಿಂದ 74 ರನ್. ಈ ಬಿರುಸಿನ ಆಟದ ವೇಳೆ 9 ಬೌಂಡರಿ, 2 ಸಿಕ್ಸರ್ ಸಿಡಿಯಲ್ಪಟ್ಟಿತು. ಅಗರ್ವಾಲ್ ಜತೆ 14 ರನ್ ಮಾಡಿರುವ ಸ್ಟುವರ್ಟ್ ಬಿನ್ನಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಕರ್ನಾಟಕ ಲಂಚ್ ವೇಳೆ ಒಂದಕ್ಕೆ 124 ರನ್, ಟೀ ವಿರಾಮದ ಹೊತ್ತಿನಲ್ಲಿ 3ಕ್ಕೆ 233 ರನ್ ಗಳಿಸಿ ಮೇಲುಗೈ ಸಾಧಿಸಿತ್ತು. ದಿಲ್ಲಿ ಪರ ನವದೀಪ್ ಸೈನಿ, ಕುಲ್ವಂತ್ ಖೆಜೊÅàಲಿಯಾ, ವಿಕಾಸ್ ಮಿಶ್ರಾ ಮತ್ತು ಮನನ್ ಶರ್ಮ ಒಂದೊಂದು ವಿಕೆಟ್ ಉರುಳಿಸಿದರು. ಸಂಕ್ಷಿಪ್ತ ಸ್ಕೋರ್:
ಕರ್ನಾಟಕ ಪ್ರಥಮ ಇನ್ನಿಂಗ್ಸ್-4 ವಿಕೆಟಿಗೆ 348 (ಸಮರ್ಥ್ 58, ರಾಹುಲ್ 9, ಅಗರ್ವಾಲ್ ಬ್ಯಾಟಿಂಗ್ 169, ನಾಯರ್ 15, ಪಾಂಡೆ 74, ಬಿನ್ನಿ ಬ್ಯಾಟಿಂಗ್ 14, ಸೈನಿ 49ಕ್ಕೆ 1, ಖೆಜೊÅàಲಿಯಾ 65ಕ್ಕೆ 1, ಮಿಶ್ರಾ 87ಕ್ಕೆ 1, ಮನನ್ 78ಕ್ಕೆ 1).