Advertisement
ಬಹಳಷ್ಟು ಆತ್ಮವಿಶ್ವಾಸದಲ್ಲಿರುವ ಜೈಸ್ವಾಲ್ ಉತ್ತರ ಪ್ರದೇಶ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ತಾಳ್ಮೆಯ ಆಟವಾಡಿ ಕುಸಿತ ಮುಂಬಯಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. 227 ಎಸೆತ ಎದುರಿಸಿದ ಅವರು 15 ಬೌಂಡರಿ ನೆರವಿನಿಂದ 100 ರನ್ ಹೊಡೆದು ಸಂಭ್ರಮಿಸಿದರು. ಜೈಸ್ವಾಲ್ ಈ ಮೊದಲು ಉತ್ತರಖಂಡ ತಂಡದೆದುರಿನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲೂ ತನ್ನ ಚೊಚ್ಚಲ ಶತಕ ದಾಖಲಿಸಿದ್ದರು.
ಸಂಕ್ಷಿಪ್ತ ಸ್ಕೋರು: ಮುಂಬಯಿ ಮೊದಲ ಇನ್ನಿಂಗ್ಸ್ 5 ವಿಕೆಟಿಗೆ 260 (ಯಶಸ್ವಿ ಜೈಸ್ವಾಲ್ 100, ಹಾರ್ದಿಕ್ ತಾಮೋರೆ 51 ಬ್ಯಾಟಿಂಗ್, ಸಫìರಾಜ್ ಖಾನ್ 40, ಸುವೇದ್ ಪಾರ್ಕರ್ 32, ಯಶ್ ದಯಾಳ್ 35ಕ್ಕೆ 2, ಕರಣ್ ಶರ್ಮ 30ಕ್ಕೆ 2).
Related Articles
ಆಲೂರು (ಬೆಂಗಳೂರು): ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವು ಬಂಗಾಲ ವಿರುದ್ಧ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟಿಗೆ 271 ರನ್ ಗಳಿಸಿದೆ.
Advertisement
ಆರಂಭಿಕ ಹಿಮಾಂಶು ಮಂತ್ರಿ ಅವರ ಅಜೇಯ ಶತಕ ಮತ್ತು ಅಕ್ಷತ್ ರಘುವಂಶಿ ಅವರ ಅರ್ಧಶತಕದಿಂದಾಗಿ ಮಧ್ಯಪ್ರದೇಶ ಉತ್ತಮ ಮೊತ್ತ ಪೇರಿಸುವಂತಾಯಿತು. 280 ಎಸೆತ ಎದುರಿಸಿದ ಮಂತ್ರಿ 134 ರನ್ ಗಳಿಸಿ ಆಡುತ್ತಿದ್ದರೆ.
ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ ಪ್ರಥಮ ಇನ್ನಿಂಗ್ಸ್ 6 ವಿಕೆಟಿಗೆ 271 (ಹಿಮಾಂಶು ಮಂತ್ರಿ 134 ಬ್ಯಾಟಿಂಗ್, ಅಕ್ಷತ್ ರಘುವಂಶಿ 63, ಮುಕೇಶ್ ಕುಮಾರ್ 45ಕ್ಕೆ 2, ಆಕಾಶ್‌ದೀಪ್ 55ಕ್ಕೆ 2)