Advertisement
ನಗರದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಶುಕ್ರವಾರ 48ಕ್ಕೆ 3 ರನ್‌ಗಳಿಂದ ದ್ವಿತೀಯ ಇನ್ನಿಂಗ್ಸ್ ಮುಂದುವರಿಸಿದ ಮಹಾರಾಷ್ಟ್ರ 256 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ ಪಡೆದಿದ್ದ 73 ರನ್‌ಗಳ ಮುನ್ನಡೆಯೊಂದಿಗೆ 184 ರನ್ ಗುರಿ ನೀಡಿತು. ಈ ಗುರಿಯನ್ನು ಬೆನ್ನತ್ತಿದ ಕರ್ನಾಟಕ 3ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 54 ರನ್‌ಗಳಿಸಿದೆ. ಪಂದ್ಯದ ಕೊನೆಯ ದಿನದಂದು 130 ರನ್‌ಗಳಿಸಬೇಕಿದ್ದು, ಆರಂಭಿಕರಾದ ದೇವದತ್ತ ಪಡಿಕ್ಕಲ್ 33 ಹಾಗೂ ಡಿ. ನಿಶ್ಚಲ್ 21 ಕ್ರೀಸ್ ಕಾಯ್ದುಕೊಂಡಿದ್ದಾರೆ.
ಎದುರಾಳಿ ತಂಡದ 184 ರನ್‌ಗಳ ಗುರಿ ಪಡೆದ ಕರ್ನಾಟಕಕ್ಕೆ ಉತ್ತಮ ಆರಂಭ ಕಂಡಿದೆ. ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಡಿ. ಪಡಿಕ್ಕಲ್(33 ರನ್) ಹಾಗೂ ನಿಶ್ಚಲ್(21 ರನ್) ಮೊದಲ ವಿಕೆಟ್‌ಗೆ ಮುರಿಯದ 54 ರನ್ ಜತೆಯಾಟವಾಡಿದ್ದಾರೆ. ಆದರೆ ಕೊನೆಯ ದಿನದಾಟ ಹೆಚ್ಚು ಕುತೂಹಲ ಮೂಡಿಸಿದ್ದು, ಉಭಯ ತಂಡಗಳು ಗೆಲುವಿನ ಲೆಕ್ಕಾಚಾರದಲ್ಲಿವೆ. ಕರ್ನಾಟಕದ ಪರ ಕಣದಲ್ಲಿರುವ ಇಬ್ಬರು ಆಟಗಾರರು ಕೊನೆಯ ದಿನವೂ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡಕ್ಕೆ ನೆರವಾಗಬೇಕಿದೆ. ದಿನದಾಟದ ಮೊದಲ ಅವಧಿಯಲ್ಲಿ ಪಿಚ್ ಹೆಚ್ಚಾಗಿ ಬೌಲರ್‌ಗಳಿಗೆ ನೆರವಾಗುವ ಸಾಧ್ಯತೆ ಇರುವುದರಿಂದ ಬ್ಯಾಟ್ಸ್‌ಮೆನ್‌ಗಳಿಗೆ ಸುಲಭವಾಗಿ ರನ್‌ಗಳಿಸಲು ಸಾಧ್ಯವಾಗುವುದಿಲ್ಲ. ಒಂದೊಮ್ಮೆ ಈ ಜೋಡಿ ನಾಲ್ಕನೇ ದಿನವೂ ಮತ್ತಷ್ಟು ರನ್ ಕಲೆಹಾಕಿದರೆ ಕರ್ನಾಟಕಕ್ಕೆ ಮೊದಲ ಗೆಲುವು ಲಭಿಸಲಿದೆ.
Related Articles
2ನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 48 ರನ್‌ಗಳಿಸಿದ್ದ ಮಹಾರಾಷ್ಟ್ರ ತಂಡಕ್ಕೆ ಉತ್ತಮ ಆರಂಭ ಲಭಿಸಿತು. ದಿನದಾಟ ಆರಂಭಿಸಿದ ಆರ್. ಗಾಯಕ್ವಾಡ್ ಹಾಗೂ ಎಸ್.ಬಚ್ಚವ್ 4ನೇ ವಿಕೆಟ್‌ಗೆ 60 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಆದರೆ ರೋಹಿತ್ ಮೋಟ್ವಾನಿ(2) ಹಾಗೂ ನಾಯಕ ರಾಹುಲ್ ತ್ರಿಪಾಠಿ(8 ರನ್) ಜವಾಬ್ದಾರಿಯ ಆಟವಾಡುವಲ್ಲಿ ವಿಫಲರಾದರು. ಪರಿಣಾಮ 113 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡ ಮಹಾರಾಷ್ಟ್ರ ಸಂಕಷ್ಟಕ್ಕೆ ಸಿಲುಕಿತು. ಅಲ್ಲದೇ ಎದುರಾಳಿ ತಂಡ 40 ಪಡೆದಿದ್ದ ವೇಳೆಗೆ 6 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಕರ್ನಾಟಕ ಪಂದ್ಯದ ಮೇಲೆ ಹಿಡಿತ ಸಾಧಿಸುವ ಲಕ್ಷಣ ತೋರಿತು.
Advertisement
ಶತಕದ ಜತೆಯಾಟ:ಆದರೆ 7ನೇ ವಿಕೆಟ್‌ಗೆ ಜತೆಯಾದ ಗಾಯಕ್ವಾಡ್ ಮತ್ತು ನೌಶದ್ ಶೇಖ್ ಉತ್ತಮ ಬ್ಯಾಟಿಂಗ್‌ನಿಂದಾಗಿ ಕರ್ನಾಟಕದ ಬೌಲರ್‌ಗಳ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಜವಾಬ್ದಾರಿಯುತ ಆಟವಾಡಿದ ಈ ಇಬ್ಬರು ಆಟಗಾರರು ಎದುರಾಳಿ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವ ಮೂಲಕ ಆಕರ್ಷಕ ಅರ್ಧಶತಕ ಬಾರಿಸಿದರು. ಅಲ್ಲದೇ 106 ರನ್‌ಗಳ ಜತೆಯಾಟದ ಕಾಣಿಕೆ ನೀಡಿದ ಈ ಆಟಗಾರರು ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 256 ರನ್‌ಗಳಿಸಲು ಕಾರಣರಾದರು.
ರಾಜ್ಯದ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಸ್ಪಿನ್ನರ್ ಶ್ರೇಯಸ್ ಗೋಪಾಲ್ 64ಕ್ಕೆ 4 ಹಾಗೂ ವಿನಯ್‌ಕುಮಾರ್ 41ಕ್ಕೆ 3 ವಿಕೆಟ್ ಪಡೆದು ಮಿಂಚಿದರು. ಸ್ಕೋರ್ ವಿವರ
ಮಹಾರಾಷ್ಟ್ರ 1ನೇ ಇನಿಂಗ್ಸ್ 113 ಆಲೌಟ್
ಕರ್ನಾಟಕ 1ನೇ ಇನಿಂಗ್ಸ್ 186 ಆಲೌಟ್
ಮಹಾರಾಷ್ಟ್ರ 2ನೇ ಇನಿಂಗ್ಸ್ 256 ಆಲೌಟ್
(48ಕ್ಕೆ 3ರಿಂದ ಮುಂದುವರಿದು)
ರುತುರಾಜ್ ಗಾಯಕ್ವಾಡ್ ಬಿ ವಿನಯ್ ಕುಮಾರ್ 89
ಸತ್ಯಜಿತ್ ಬಚ್ಚವ್ ಎಲ್‌ಬಿ ಶ್ರೇಯಸ್ 28
ರೋಹಿತ್ ಮೋಟ್ವಾನಿ ಎಲ್‌ಬಿ ಪವನ್ ದೇಶಪಾಂಡೆ 2
ರಾಹುಲ್ ತ್ರಿಪಾಠಿ ಸಿ ಅಬ್ಟಾಸ್ ಬಿ ಶ್ರೇಯಸ್ 8
ನೌಶದ್ ಸಿ ಪವನ್ ಬಿ ವಿನಯ್ ಕುಮಾರ್ 73
ಅನುಪಮ್ ಸಂಕ್ಲೇಚ ಬಿ ಪವನ್ ದೇಶಪಾಂಡೆ 8
ನಿಕಿತ್ ಧುಮಾಲ್ ಅಜೇಯ 5
ಸಮದ್ ಫಲ್ಲಾ ಬಿ ವಿನಯ್ ಕುಮಾರ್ 6
ಇತರೆ 4
ವಿಕೆಟ್ ಪತನ: 1-3, 2-30, 3-35, 4-95, 5-98, 6-113, 7-219, 8-234, 9-246, 10-256
ಬೌಲಿಂಗ್
ವಿನಯ್ ಕುಮಾರ್ 22 8 41 3
ಅಭಿಮನ್ಯು ಮಿಥುನ್ 8 4 19 1
ಜೆ. ಸುಚಿತ್ 19 2 59 0
ರೋನಿತ್ ಮೋರೆ 17 3 47 0
ಶ್ರೇಯಸ್ ಗೋಪಾಲ್ 21 3 64 4
ಪವನ್ ದೇಶಪಾಂಡೆ 9 2 23 2
ದೇವದತ್ತ ಪಡಿಕ್ಕಲ್ 1 1 0 0
ಕರ್ನಾಟಕ 2ನೇ ಇನಿಂಗ್ಸ್ 54/0 (3ನೇ ದಿನಾಂತ್ಯಕ್ಕೆ)
ದೇವದತ್ತ ಪಡಿಕ್ಕಲ್ ಅಜೇಯ 33
ಡಿ. ನಿಶ್ಚಲ್ ಅಜೇಯ 21
ಬೌಲಿಂಗ್
ಅನುಪಮ್ ಸಂಕ್ಲೇಚ 4 0 14 0
ಸಮದ್ ಫಲ್ಲಾ 7 4 15 0
ನಿಕಿತ್ ಧುಮಾಲ್ 1 0 8 0
ಚಿರಾಗ್ ಖುರಾನ್ 5 1 9 0
ಸತ್ಯಜಿತ್ ಬಚ್ಚವ್ 3 1 8 0 – ಸಿ. ದಿನೇಶ್