ಚೆನ್ನೆ: ಕೊರೊನಾ ಕಾರಣದಿಂದ ಕಳೆದೆರಡು ವರ್ಷ ರದ್ದುಗೊಂಡಿದ್ದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಗುರುವಾರದಿಂದ ಜೈವಿಕ ಸುರಕ್ಷಾ ವಲಯದಲ್ಲಿ ಆರಂಭವಾಗಲಿದೆ. ಮೊದಲ ಹಂತದ ಲೀಗ್ ಮುಖಾಮುಖಿಯಲ್ಲಿ ಒಟ್ಟು 19 ಪಂದ್ಯಗಳು ಏಕಕಾಲಕ್ಕೆ ಮೊದಲ್ಗೊಳ್ಳಲಿವೆ. ಚೆನ್ನೈಯಲ್ಲಿ ನಡೆಯುವ “ಸಿ’ ವಿಭಾಗದ ಪಂದ್ಯದಲ್ಲಿ ಕರ್ನಾಟಕ-ರೈಲ್ವೇಸ್ ಎದುರಾಗಲಿವೆ.
ಕಳೆದ ಅನೇಕ ವರ್ಷಗಳಿಂದ ರಣಜಿಯಲ್ಲಿ ಅಷ್ಟೇನೂ ಗಮನಾರ್ಹ ಪ್ರದರ್ಶನ ನೀಡದ ಕರ್ನಾಟಕ ಯುವ ಪ್ರತಿಭೆಗಳಿಂದ ಕೂಡಿದೆ. ಮನೀಷ್ ಪಾಂಡೆ ತಂಡದ ನೇತೃತ್ವ ವಹಿಸಲಿದ್ದಾರೆ.
ರಾಜ್‌ಕೋಟ್, ಹೊಸದಿಲ್ಲಿ, ಗುರ್ಗಾಂವ್, ಅಹ್ಮ ದಾಬಾದ್, ಗುವಾಹಟಿ, ಕೋಲ್ಕತಾ, ತಿರುವನಂತಪುರ, ಕಟಕ್ ಮತ್ತು ಭುವನೇಶ್ವರದಲ್ಲಿ ಲೀಗ್ ಪಂದ್ಯಗಳು ನಡೆ ಯುತ್ತವೆ. ಎಲೈಟ್ ಹಂತದಲ್ಲಿ ಒಟ್ಟು 8 ವಿಭಾಗಳಿದ್ದು, ಪ್ರತಿಯೊಂದರಲ್ಲೂ 4 ತಂಡಗಳಿವೆ. ಪ್ಲೇಟ್ ವಿಭಾಗದಲ್ಲಿ 6 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೇಜ್ ಶಮ್ಸಿ ನಂ.1 ಟಿ20 ಬೌಲರ್
ಪಂದ್ಯಾವಳಿ ವಿಳಂಬವಾಗಿ ಆರಂಭಗೊಂಡ ಕಾರಣ, ನಡುವೆ ಐಪಿಎಲ್ ದೊಡ್ಡದೊಂದು ಬ್ರೇಕ್ ಕೊಡಲಿದೆ. ಹೀಗಾಗಿ ನಾಕೌಟ್ ಪಂದ್ಯಗಳೆಲ್ಲ ಐಪಿಎಲ್ ಮುಗಿದ ಬಳಿಕ (ಮೇ 30) ಆರಂಭವಾಗಲಿವೆ.
ರಹಾನೆ, ಪೂಜಾರ ಆಟ
ಭಾರತದ ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ರಣಜಿ ಆಡಲಿಳಿದದ್ದು ಈ ಸಲದ ವಿಶೇಷ. ಮೊದಲ ಮುಖಾಮುಖೀಯಲ್ಲೇ ಇವರಿಬ್ಬರ ತಂಡಗಳಾದ ಮುಂಬಯಿ ಮತ್ತು ಸೌರಾಷ್ಟ್ರ ಎದುರಾಗಲಿವೆ.
ಹಾಗೆಯೇ ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್, ಹನುಮ ವಿಹಾರಿ, ಅಂಡರ್-19 ತಂಡದ ಹೀರೋಗಳಾದ ಯಶ್ ಧುಲ್, ರಾಜ್ ಬಾವಾ ಅವ ಆಟವನ್ನೂ ಸೂಕ್ಷ್ಮವಾಗಿ ಗನಿಸಲಾಗುವುದು.