Advertisement

ರಣಜಿ ಟ್ರೋಫಿ ಫೈನಲ್‌: ಕರ್ನಾಟಕವನ್ನು ಮೀರಿದ ಸೌರಾಷ್ಟ್ರ

11:08 PM Feb 11, 2023 | Team Udayavani |

ಬೆಂಗಳೂರು: ಸೌರಾಷ್ಟ್ರ ಮತ್ತು ಬಂಗಾಲ ತಂಡಗಳು ರಣಜಿ ಟ್ರೋಫಿ ಫೈನಲ್‌ಗೆ ಒಂದು ಕಾಲನ್ನಿರಿಸಿವೆ. ಎರಡೂ ತಂಡಗಳು ಕ್ರಮವಾಗಿ ಕರ್ನಾಟಕ ಮತ್ತು ಮಧ್ಯ ಪ್ರದೇಶ ವಿರುದ್ಧ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿ ಸುಸ್ಥಿತಿಯಲ್ಲಿ ನೆಲೆಸಿವೆ.

Advertisement

ಸೌರಾಷ್ಟ್ರ ವಿರುದ್ಧ ತವರಿನಂಗಳದಲ್ಲಿ ಸೆಮಿಫೈನಲ್‌ ಪಂದ್ಯ ಆಡುತ್ತಿರುವ ಕರ್ನಾಟಕ 120 ರನ್ನುಗಳ ಹಿನ್ನಡೆಗೆ ಸಿಲುಕಿ ಪ್ರಶಸ್ತಿ ಸುತ್ತಿನ ಆಸೆಯನ್ನು ಬಿಟ್ಟಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ನಷ್ಟಕ್ಕೆ 123 ರನ್‌ ಮಾಡಿದ್ದು, ಕೇವಲ 3 ರನ್‌ ಮುನ್ನಡೆಯಲ್ಲಿದೆ. ಸೋಲಿನಿಂದ ಪಾರಾಗಿ ಅಷ್ಟರ ಮಟ್ಟಿಗೆ ಗೌರವ ಕಾಪಾಡಿಕೊಳ್ಳಬೇಕಾದ ಸ್ಥಿತಿ ಕರ್ನಾಟಕದ್ದು.

ಕರ್ನಾಟಕದ 407ಕ್ಕೆ ಉತ್ತರವಾಗಿ ಸೌರಾಷ್ಟ್ರ 527 ರನ್‌ ರಾಶಿ ಹಾಕಿತು. ನಾಯಕ ಅರ್ಪಿತ್‌ ವಸವಾಡ ಅಮೋಘ ಆಟ ಮುಂದುವರಿಸಿ 202 ರನ್‌ ಮಾಡಿದರು. ಇದರೊಂದಿಗೆ ಎರಡೂ ತಂಡಗಳ ನಾಯಕರು ಡಬಲ್‌ ಸೆಂಚುರಿ ಬಾರಿಸಿದ ವಿಶಿಷ್ಟ ಸಾಧನೆಗೆ ಈ ಪಂದ್ಯ ಸಾಕ್ಷಿಯಾಯಿತು. ಇದಕ್ಕೂ ಮೊದಲು ಮಾಯಾಂಕ್‌ ಅಗರ್ವಾಲ್‌ ಏಕಾಂಗಿಯಾಗಿ ಹೋರಾಡಿ 249 ರನ್‌ ಬಾರಿಸಿದ್ದರು.

112 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಅರ್ಪಿತ್‌ ವಸವಾಡ 406 ಎಸೆತಗಳನ್ನು ಎದುರಿಸಿ 202ರ ತನಕ ಬೆಳೆದರು. ಕಪ್ತಾನನ ಈ ಜವಾಬ್ದಾರಿಯುತ ಆಟದಲ್ಲಿ 21 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು. ಚಿರಾಗ್‌ ಜಾನಿ 72 ರನ್‌ ಹೊಡೆದರು. ಕರ್ನಾಟಕದ ಪೇಸ್‌ ಬೌಲರ್‌ ವಿದ್ವತ್‌ ಕಾವೇರಪ್ಪ 83 ರನ್ನಿತ್ತು 5 ವಿಕೆಟ್‌ ಕೆಡವಿದರು.

ಕರ್ನಾಟಕದ ದ್ವಿತೀಯ ಇನ್ನಿಂಗ್ಸ್‌ ಅತ್ಯಂತ ಆಘಾತಕಾರಿ ಯಾಗಿತ್ತು. ಆರ್‌. ಸಮರ್ಥ್ ಮೊದಲ ಎಸೆತದಲ್ಲೇ ವಿಕೆಟ್‌ ಕಳೆದುಕೊಂಡರು. ದೇವದತ್ತ ಪಡಿಕ್ಕಲ್‌ ಆಟ ಏಳೇ ರನ್ನಿಗೆ ಮುಗಿಯಿತು. 14 ರನ್ನಿಗೆ 2 ವಿಕೆಟ್‌ ಬಿತ್ತು. ಈ ಹಂತದಲ್ಲಿ ಮತ್ತೆ ನಾಯಕ ಅಗರ್ವಾಲ್‌ ಅವರೇ ತಂಡದ ರಕ್ಷಣೆಗೆ ನಿಲ್ಲಬೇಕಾಯಿತು. ಅವರು ನಿಕಿನ್‌ ಜೋಸ್‌ ಜತೆಗೂಡಿ 3ನೇ ವಿಕೆಟಿಗೆ ಭರ್ತಿ 100 ರನ್‌ ಒಟ್ಟುಗೂಡಿಸಿದರು. ಅಗರ್ವಾಲ್‌ ಕೊಡುಗೆ 55 ರನ್‌ (65 ಎಸೆತ, 5 ಬೌಂಡರಿ). ಜೋಸ್‌ 54 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮನೀಷ್‌ ಪಾಂಡೆ ಮತ್ತೂಮ್ಮೆ ವಿಫ‌ಲರಾದರು. 4 ರನ್‌ ಮಾಡಿದ ಅವರು ಪಾರ್ಥ್ ಭಟ್‌ಗೆ ಲೆಗ್‌ ಬಿಫೋರ್‌ ಆದ ಕೂಡಲೇ ದಿನದಾಟವನ್ನು ಕೊನೆಗೊಳಿಸಲಾಯಿತು.

Advertisement

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-407 ಮತ್ತು 4 ವಿಕೆಟಿಗೆ 123 (ಅಗರ್ವಾಲ್‌ 55, ಜೋಸ್‌ ಬ್ಯಾಟಿಂಗ್‌ 54, ಸಕಾರಿಯಾ 24ಕ್ಕೆ 2). ಸೌರಾಷ್ಟ್ರ-527 (ವಸವಾಡ 202, ಜಾಕ್ಸನ್‌ 160, ಜಾನಿ 72, ಕಾವೇರಪ್ಪ 82ಕ್ಕೆ 5, ಗೋಪಾಲ್‌ 113ಕ್ಕೆ 2).

547 ರನ್‌ ಮುನ್ನಡೆಯಲ್ಲಿ ಬಂಗಾಲ
ಇಂದೋರ್‌: ಹಾಲಿ ಚಾಂಪಿಯನ್‌ ಮಧ್ಯ ಪ್ರದೇಶದ ವಿರುದ್ಧ ಬಂಗಾಲ 547 ರನ್ನುಗಳ ಬೃಹತ್‌ ಮುನ್ನಡೆ ಸಾಧಿಸಿದೆ. 268 ರನ್ನುಗಳ ಮೊದಲ ಇನ್ನಿಂಗ್ಸ್‌ ಲೀಡ್‌ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಬಂಗಾಲ ಶನಿವಾರದ ಆಟದ ಅಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 279 ರನ್‌ ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next