Advertisement
ಬಂಗಾಲ ರಣಜಿ ಟ್ರೋಫಿ ಯಿಂದ ವಿಮುಖವಾಗಿ 33 ವರ್ಷಗಳೇ ಉರುಳಿವೆ. 1990 ರಷ್ಟು ಹಿಂದೆ ಕೊನೆಯ ಸಲ ಈಡನ್ ಗಾರ್ಡನ್ಸ್‌ನಲ್ಲೇ ಟ್ರೋಫಿ ಎತ್ತಿತ್ತು. ದಿಲ್ಲಿ ಅಂದಿನ ಎದುರಾಳಿ ಯಾಗಿತ್ತು.ಇದು 2019-20ರ ರಣಜಿ ಋತುವಿನ ಫೈನಲ್‌ನ ಪುನರಾ ವರ್ತನೆ ಆಗಲಿದೆ. ರಾಜ್‌ಕೋಟ್‌ನಲ್ಲಿ ನಡೆದ ಅಂದಿನ ಪ್ರಶಸ್ತಿ ಸಮರದಲ್ಲಿ ಸೌರಾಷ್ಟ್ರ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮೊದಲ ಸಲ ರಣಜಿ ಕಿರೀಟ ಏರಿಸಿಕೊಂಡಿತ್ತು.
ರಾಜ್ಯ ಕ್ರೀಡಾ ಸಚಿವರೂ ಆಗಿರುವ ಮನೋಜ್ ತಿವಾರಿ ಬಂಗಾಲದ ಯಶಸ್ವಿ ಸಾರಥಿಯಾಗಿದ್ದಾರೆ. 3 ವರ್ಷಗಳ ಬಳಿಕ ಅವರು ತಂಡವನ್ನು ಮುನ್ನಡೆಸುತ್ತಿರುವುದು ವಿಶೇಷ. ಬ್ಯಾಟಿಂಗ್‌ನಲ್ಲಿ ಕ್ಲಿಕ್ ಆಗದಿದ್ದರೂ (398 ರನ್), ತಂಡಕ್ಕೆ ಸ್ಫೂರ್ತಿ ತುಂಬಿರುವುದು ಸುಳ್ಳಲ್ಲ.ಬಂಗಾಲ ಸಾಕಷ್ಟು ಮಂದಿ ಸ್ಟಾರ್ ಆಟಗಾರರನ್ನು ಹೊಂದಿದೆ. ಆರಂಭಕಾರ ಅಭಿಮನ್ಯು ಈಶ್ವರನ್, ಆಲ್‌ರೌಂಡರ್ ಶಾಬಾಜ್ ಅಹ್ಮದ್, ಪೇಸರ್ ಮುಕೇಶ್ ಕುಮಾರ್ ಅವ ರೆಲ್ಲ ಇತ್ತೀಚೆಗೆ ರಾಷ್ಟ್ರೀಯ ತಂಡದ ಸಂಪರ್ಕದಲ್ಲಿದ್ದರು. ಮತ್ತೋರ್ವ ಪೇಸ್ ಬೌಲರ್ ಆಕಾಶ್ ದೀಪ್ 9 ಪಂದ್ಯಗಳಿಂದ 37 ವಿಕೆಟ್‌ಗಳನ್ನು ಬೇಟೆಯಾಡಿ ದ್ದಾರೆ. ಪೊರೆಲ್ ಮತ್ತೋರ್ವ ಅಪಾಯಕಾರಿ ಬೌಲರ್.
Related Articles
Advertisement
ಉನಾದ್ಕತ್ ಬಲಟೀಮ್ ಇಂಡಿಯಾದಲ್ಲಿದ್ದ ಎಡಗೈ ವೇಗಿ ಜೈದೇವ್ ಉನಾದ್ಕತ್ ಅವರನ್ನು ಬಿಟ್ಟುಕೊಟ್ಟಿರುವುದು ಸೌರಾಷ್ಟ್ರ ಪಾಲಿಗೆ ಬಿಗ್ ಬೂಸ್ಟ್ ಆಗಿ ಪರಿಣಮಿಸಿದೆ. ಇವರಿಗೆ ಜತೆ ನೀಡಲು ಸಕಾರಿಯಾ ಇದ್ದಾರೆ. ವಸವಾಡ, ಶೆಲ್ಡನ್ ಜಾಕ್ಸನ್, ಚಿರಾಗ್ ಜಾನಿ, ಹಾರ್ವಿಕ್ ದೇಸಾಯಿ ಟಾಪ್ ಫಾರ್ಮ್ ನಲ್ಲಿರುವ ಬ್ಯಾಟರ್‌ಗಳಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಕರ್ನಾ ಟಕವನ್ನು ಬೆಂಗಳೂರಿನ ಅಂಗಳ ದಲ್ಲೇ ಮಣಿಸಿದ್ದು ಸೌರಾಷ್ಟ್ರದ ಹೆಗ್ಗಳಿಕೆ.