Advertisement

ಮೊದಲ ದಿನ ನಿಶ್ಚಲ್‌, ಸಿದ್ಧಾರ್ಥ್ ಶತಕ

12:30 AM Dec 31, 2018 | Team Udayavani |

ಬೆಂಗಳೂರು (ಆಲೂರು): ಛತ್ತೀಸ್‌ಗಡ ವಿರುದ್ಧದ ಎಲೈಟ್‌ “ಎ’ ಗುಂಪಿನ ರಣಜಿ ಕ್ರಿಕೆಟ್‌ ಪಂದ್ಯದಲ್ಲಿ ಕರ್ನಾಟಕ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ್ದಾರೆ.

Advertisement

ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸಿ ಮೊದಲ ಇನಿಂಗ್ಸ್‌ನಲ್ಲಿ ಭಾರೀ ಮೊತ್ತ ಪೇರಿಸುವ ಸೂಚನೆ ನೀಡಿದ್ದಾರೆ. ಉದ್ಯಾನಗರಿಯ ಹೊರವಲಯದಲ್ಲಿರುವ ಆಲೂರು ಕ್ರೀಡಾಂಗಣದಲ್ಲಿ ಆರಂಭವಾಗಿರುವ ಮೊದಲ ದಿನದ ಆಟದಲ್ಲಿ ರಾಜ್ಯದ ಮೊದಲ 2 ವಿಕೆಟ್‌ ಕೇವಲ 16 ರನ್‌ಗೆ ಪತನಗೊಂಡಿದ್ದವು. ಈ ಹಂತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಡಿ.ನಿಶ್ಚಲ್‌ (ಅಜೇಯ 107 ರನ್‌) ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಕೆ.ವಿ.ಸಿದ್ಧಾರ್ಥ್ (105 ರನ್‌) ಭರ್ಜರಿ ಜತೆಯಾಟ ನಡೆಸಿದರು. ಇಬ್ಬರೂ ಕ್ರಮವಾಗಿ ಶತಕ ದಾಖಲಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಪರಿಣಾಮ ಕರ್ನಾಟಕ ಮೊದಲ ಇನಿಂಗ್‌ ನಲ್ಲಿ 4 ವಿಕೆಟ್‌ಗೆ 273 ರನ್‌ಗಳಿಸಿದೆ. ಮೊದಲ ದಿನದ ಆಟದಲ್ಲಿ ರಾಜ್ಯ ತಂಡ ಸಮರ್ಥ ಬ್ಯಾಟಿಂಗ್‌ ಪ್ರದರ್ಶಿಸಿ ಎರಡನೇ ದಿನದಲ್ಲಿ ಮತ್ತಷ್ಟು ರನ್‌ ಕಲೆ ಹಾಕುವ ಯೋಜನೆಯಲ್ಲಿದೆ. ನಿಶ್ಚಲ್‌ ಹಾಗೂ ಉಪನಾಯಕ ಶ್ರೇಯಸ್‌ ಗೋಪಾಲ್‌ (8 ರನ್‌) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಕರ್ನಾಟಕಕ್ಕೆ ಮುಂದಿನ ನಾಕೌಟ್‌ ಹಂತವನ್ನು ಏರಬೇಕಿದ್ದರೆ ಛತ್ತೀಸ್‌ಗಡ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಒತ್ತಡ ಅರಿತಿರುವ ರಾಜ್ಯ ಆಟಗಾರರು ಜಾಗರೂಕತೆಯ ಆಟಕ್ಕೆ ಕೈ ಹಾಕಿದ್ದಾರೆ.

ಆರಂಭಿಕ ಆಘಾತದಿಂದ ಎಚ್ಚೆತ್ತ ರಾಜ್ಯ: ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ 1ನೇ ಇನಿಂಗ್ಸ್‌ನಲ್ಲಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ತಂಡದ ಖಾತೆ ತೆರೆಯುವ ಮೊದಲೇ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್ತ ಪಡೀಕ್ಕಲ್‌ ಅವರು ಪಂಕಜ್‌ ರಾವ್‌ ಎಸೆತದಲ್ಲಿ ಹರ್‌ಪ್ರೀತ್‌ ಸಿಂಗ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಇದರ ಬೆನ್ನಲ್ಲೇ ಎರಡನೇ ವಿಕೆಟ್‌ಗೆ ಬಂದ ಲಿಯಾನ್‌ ಖಾನ್‌ (9ರನ್‌) ಪಂಕಜ್‌ ರಾವ್‌ ಎಸೆತದಲ್ಲಿ ಎಲ್‌ಬಿ ಆಗಿ ಹೊರ ನಡೆದರು. ಅಲ್ಲಿಗೆ ರಾಜ್ಯ ತಂಡ ತೀವ್ರ ಒತ್ತಡಕ್ಕೆ ಸಿಲುಕಿಕೊಂಡಿತು. ಈ ಹಂತದಲ್ಲಿ ನಿಶ್ಚಲ್‌ ಜತೆಯಾದ ಕೆ.ವಿ.ಸಿದಾಟಛಿರ್ಥ್ ತಂಡದ ಮೊತ್ತವನ್ನು ನಿಧಾನವಾಗಿ ಹೆಚ್ಚಿಸಿದರು.

ಮೂರನೇ ವಿಕೆಟ್‌ಗೆ ಇವರಿಬ್ಬರು ಸೇರಿಕೊಂಡು 163 ರನ್‌ ಜತೆಯಾಟ ನೀಡಿ ತಂಡದ ಆತಂಕ ದೂರ ಮಾಡಿದರು. ಈ ಹಂತದಲ್ಲಿ ಸಿದ್ಧಾರ್ಥ್ ಅವರು ಪಂಕಜ್‌ ರಾವ್‌ ಎಸೆತದಲ್ಲಿ ಎಲ್‌ಬಿ ಆಗಿ ಔಟಾದರು.ಆಗ ತಂಡದ ಒಟ್ಟಾರೆ ಮೊತ್ತ 3 ವಿಕೆಟ್‌ಗೆ 179 ರನ್‌ ಆಗಿತ್ತು. ಸಿದ್ಧಾರ್ಥ್ ಔಟಾಗುವ ಮೊದಲು ಒಟ್ಟು 189 ಎಸೆತ ಎದುರಿಸಿದ್ದರು. ಒಟ್ಟು 11 ಬೌಂಡರಿ ಹಾಗೂ 2 ಸಿಕ್ಸರ್‌ ಮೂಲಕ ಸಿದ್ಧಾರ್ಥ್ ಅಬ್ಬರಿಸಿದ್ದರು. ಇವರ ಬಳಿಕ 4ನೇ ವಿಕೆಟ್‌ಗೆ ಕ್ರೀಸ್‌ಗೆ ಇಳಿದ ತಂಡದ ನಾಯಕ ಮನೀಷ್‌ ಪಾಂಡೆ (40 ರನ್‌) ನಿಶ್ಚಲ್‌ ಜತೆಗೂಡಿ 74 ರನ್‌ ಜತೆಯಾಟ ನಿರ್ವಹಿಸಿದರು. ಈ ಹಂತದಲ್ಲಿ ಮತ್ತೂಮ್ಮೆ ಮಾರಕ ಬೌಲಿಂಗ್‌ ದಾಳಿ ನಡೆಸಿದ ಪಂಕಜ್  ರಾಜ್ಯ ತಂಡದ ನಾಯಕನನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು. ಒಟ್ಟು 61 ಎಸೆತ ಎದುರಿಸಿದ್ದ ಮನೀಷ್‌ ಪಾಂಡೆ 5 ಬೌಂಡರಿ ಬಾರಿಸಿದ್ದರು. ಸದ್ಯ ನಿಶ್ಚಲ್‌ ಒಟ್ಟು 241 ಎಸೆತ ಎದುರಿಸಿದ್ದಾರೆ. 7 ಬೌಂಡರಿ ಬಾರಿಸಿ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ.

ಕರ್ನಾಟಕ 1ನೇ ಇನಿಂಗ್ಸ್‌ 273/4(ಡಿ.ನಿಶ್ಚಲ್‌ ಅಜೇಯ 107, ಕೆ.ವಿ.ಸಿದಾಟಛಿರ್ಥ್ 105, ಪಂಕಜ್‌ ರಾವ್‌ 38ಕ್ಕೆ 4).

Advertisement
Advertisement

Udayavani is now on Telegram. Click here to join our channel and stay updated with the latest news.

Next