Advertisement
ನಾಲ್ಕು ದಿನಗಳ ಈ ರಣಜಿ ಟ್ರೊಫಿಯ ಮೊದಲ ಹಂತದ ಪಂದ್ಯಗಳು ಅ.11ರಿಂದ ಅ.14ರ ವರೆಗೆ ವಡೋದರ, ಕೊಯಮತ್ತೂರು, ರಾಯಪುರ, ಮಧ್ಯಪ್ರದೇಶದ ಹೋಲ್ಕರ್ ಮೈದಾನ ಸೇರಿದಂತೆ ವಿವಿಧ ತಾಣಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಒಟ್ಟು 16 ಪಂದ್ಯಗಳು ನಡೆಯಲಿವೆ. ಎರಡನೇ ಹಂತದ ಪಂದ್ಯಗಳು ಅ.18ರಿಂದ 21ರ ವರೆಗೆ ನಡೆಯಲಿದೆ.
ಈ ರಣಜಿ ಟ್ರೋಫಿ ಋತುವಿನಲ್ಲಿ ಟಿ20 ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು 50 ಓವರ್‌ಗಳ ವಿಜಯ್ ಹಜಾರೆ ಟ್ರೋಫಿಯನ್ನು ಪ್ರತ್ಯೇಕಿಸಲಾಗಿದೆ. ಆಟಗಾರರ ಕೆಲಸದ ಒತ್ತಡ ಕಡಿಮೆಗೊಳಿಸಲು ಬಿಸಿಸಿಐ ಈ ಕ್ರವ ುಕೈಗೊಂಡಿದೆ ಎನ್ನಲಾಗಿದೆ. ಎಲೈಟ್ ಡಿವಿಶನ್
ಎಲೈಟ್ ಡಿವಿಶನ್‌ನಲ್ಲಿ 32 ತಂಡಗಳಿರಲಿವೆ. ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತೀ ಗುಂಪಿನಲ್ಲಿ ತಲಾ 8 ತಂಡಗಳಿವೆ. ಗ್ರೂಪ್ ಹಂತದಲ್ಲಿ ಪ್ರತೀ ತಂಡವೂ ತಲಾ 7 ಪಂದ್ಯಗಳನ್ನಾಡಲಿದೆ. ಗ್ರೂಪ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಉಳಿಯುವ ತಂಡಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲಿವೆ. ಪ್ರತೀ ಗುಂಪಿನಲ್ಲಿ ತಳದಲ್ಲಿ ಉಳಿಯುವ ಎರಡು ತಂಡಗಳು ಮುಂದಿನ ಸೀಸನ್‌ನಲ್ಲಿ ಪ್ಲೇಟ್ ಡಿವಿಶನ್‌ಗೆ ಹೋಗುತ್ತವೆ.
Related Articles
ರಣಜಿ ಟ್ರೋಫಿ ಎಲೈಟ್ ಡಿವಿಶನ್‌ನಲ್ಲಿ ಕರ್ನಾಟಕ ತಂಡ ಗ್ರೂಪ್ “ಸಿ’ಯಲ್ಲಿದ್ದು, ಶುಕ್ರವಾರ ಮಧ್ಯಪ್ರದೇಶ ವಿರುದ್ಧ ಕಣಕ್ಕಿಳಿಯಲಿದೆ. ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
ಪಂದ್ಯ ಆರಂಭ: ಬೆ. 9.30,
ನೇರಪ್ರಸಾರ: ಸ್ಪೋರ್ಟ್ಸ್18
Advertisement