Advertisement
49 ರನ್ ಗಳಿಗೆ ಕಾಂಬೋಜ್ ಹತ್ತು ವಿಕೆಟ್ ಕಿತ್ತರು. ರಣಜಿ ಟ್ರೋಫಿ ಇತಿಹಾಸದಲ್ಲಿ ಇನ್ನಿಂಗ್ಸ್ ನಲ್ಲಿ ಎಲ್ಲಾ ವಿಕೆಟ್‌ಗಳನ್ನು ಪಡೆದ ಮೂರನೇ ಬೌಲರ್ ಎನಿಸಿಕೊಂಡರು. ಬಂಗಾಳದ ಪ್ರೇಮಾಂಗ್ಶು ಚಟರ್ಜಿ (10/20, ಅಸ್ಸಾಂ ವಿರುದ್ದ 1956) ಮತ್ತು ರಾಜಸ್ಥಾನದ ಪ್ರದೀಪ್ ಸುಂದರಂ (10/78, ವಿದರ್ಭ ವಿರುದ್ಧ, 1985) ಈ ಹಿಂದೆ ಈ ಸಾಧನೆ ಮಾಡಿದ್ದರು.
Related Articles
Advertisement
ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಅನ್ಶುಲ್ ಕಾಂಬೋಜ್ ಎಂಟು ವಿಕೆಟ್ ಪಡೆದಿದ್ದರು. ಮೂರನೇ ದಿನವಾದ ಶುಕ್ರವಾರ (ನ.15) ಬಾಸಿಲ್ ಥಂಪಿ, ಶೌನ್ ರೋಜರ್ ಅವರ ವಿಕೆಟ್ ಪಡೆದ ದಾಖಲೆ ಬರೆದರು.
ಮೊದಲ ಇನ್ನಿಂಗ್ಸ್ ನಲ್ಲಿ ಕೇರಳ 291 ರನ್ ಬಾರಿಸಿದ್ದರು. ಅಕ್ಷಯ್ ಚಂದ್ರನ್ 59 ರನ್, ಕುನ್ನುಮ್ಮಲ್ 55 ರನ್, ನಾಯಕ ಸಚಿನ್ ಬೇಬಿ 52 ರನ್, ಅಜರುದ್ದೀನ್ 53 ರನ್ ಮಾಡಿದರು.