Advertisement

ರಣಜಿ ಟ್ರೋಫಿ: ಮಧ್ಯಪ್ರದೇಶ ತಂಡಕ್ಕೆ ಜಯ

07:05 AM Oct 10, 2017 | Team Udayavani |

ನವದೆಹಲಿ: ಪ್ರಸಕ್ತ ರಣಜಿ ಋತುವಿನ ಮೊದಲ ಪಂದ್ಯದಲ್ಲಿಯೇ ಮಧ್ಯ ಪ್ರದೇಶ, ರೈಲ್ವೇಸ್‌, ಸೌರಾಷ್ಟ್ರ ಮತ್ತು ಕೇರಳ ತಂಡಗಳು ಜಯ ದಾಖಲಿಸಿವೆ. ಮಧ್ಯ ಪ್ರದೇಶ ತಂಡ 8 ವಿಕೆಟ್‌ನಿಂದ ಬರೋಡಾ ವಿರುದ್ಧ ಜಯ ದಾಖಲಿಸಿದೆ.

Advertisement

ಮಧ್ಯ ಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 551ರನ್‌ಗೆ 8 ವಿಕೆಟ್‌ ಕಳೆದುಕೊಂಡು ಡಿಕ್ಲೇರ್‌ ಮಾಡಿತ್ತು. ಇದಕ್ಕೆ ಉತ್ತರವಾಗಿ ಬರೋಡಾ ತಂಡ 302 ರನ್‌ಗೆ ಆಲೌಟ್‌ ಆಗಿತ್ತು. ಹೀಗಾಗಿ ಬರೋಡಾ ತಂಡ ಪಾಲೋಆಫ್ಗೆ ತುತ್ತಾಗಿ 2ನೇ ಇನಿಂಗ್ಸ್‌ ಆರಂಭಿಸಿ 318 ರನ್‌ ಬಾರಿಸಿ ಆಲೌಟ್‌ ಆಯಿತು. ಇದರಿಂದ ಮಧ್ಯ ಪ್ರದೇಶ ಗೆಲುವಿಗೆ 70 ರನ್‌ ಗುರಿ ನೀಡಲಾಗಿತ್ತು. ಗುರಿ ಬೆನ್ನುಹತ್ತಿದ ಮಧ್ಯ ಪ್ರದೇಶ 2 ವಿಕೆಟ್‌ಗೆ 73 ರನ್‌ ಬಾರಿಸಿ ಜಯ ದಾಖಲಿಸಿತು.

ಉಳಿದಂತೆ ಮಧ್ಯ ಪ್ರದೇಶ ವಿರುದ್ಧ ರೈಲ್ವೇಸ್‌ ತಂಡ 21 ರನ್‌ಗಳಿಂದ ಜಯ ದಾಖಲಿಸಿದೆ. ಮತ್ತೂಂದು ಪಂದ್ಯದಲ್ಲಿ ಕೇರಳ ತಂಡ ಜಾರ್ಖಂಡ್‌ ವಿರುದ್ಧ 9 ವಿಕೆಟ್‌ ಜಯ ದಾಖಲಿಸಿದೆ. ಹರ್ಯಾಣ ವಿರುದ್ಧ ಸೌರಾಷ್ಟ್ರ ತಂಡ ಇನಿಂಗ್ಸ್‌ ಮತ್ತು 31 ರನ್‌ ಅಂತರದಿಂದ ಜಯ ಬಾರಿಸಿದೆ. ಉಳಿದಂತೆ ಇತರೆ ಪಂದ್ಯಗಳು ಡ್ರಾದಲ್ಲಿ ಅಂತ್ಯವಾಗಿವೆ.

ಸಂಕ್ಷಿಪ್ತ ಸ್ಕೋರ್‌:
ಮಧ್ಯ ಪ್ರದೇಶ 1ನೇ ಇನಿಂಗ್ಸ್‌ 551/8 ಡಿಕ್ಲೇರ್‌, 2ನೇ ಇನಿಂಗ್ಸ್‌ 73/2 (ಹರ್‌ಪ್ರೀತ್‌ ಸಿಂಗ್‌ ಅಜೇಯ 44, ರಜತ್‌ ಪಾಟಿದರ್‌ ಅಜೇಯ 23, ಅತಿತ್‌ ಶೇಥ್‌ 19ಕ್ಕೆ 2), ಬರೋಡಾ 1ನೇ ಇನಿಂಗ್ಸ್‌ 302/10, 2ನೇ ಇನಿಂಗ್ಸ್‌ 318/10.

ಇತರೆ ಪಂದ್ಯಗಳ ಫ‌ಲಿತಾಂಶ
-ರಾಜಸ್ಥಾನ (310/10 ಮತ್ತು 246/4), ಜಮ್ಮು ಕಾಶ್ಮೀರ (436/8 ಡಿಕ್ಲೇರ್‌) ಪಂದ್ಯ ಡ್ರಾ
-ತ್ರಿಪುರ (194/8 ಡಿಕ್ಲೇರ್‌), ಒಡಿಶಾ (18/1) ಪಂದ್ಯ ಡ್ರಾ
-ಆಸ್ಸಾಂ (258/10, 255/10), ದೆಹಲಿ (435/10, 49/2) ಪಂದ್ಯ ಡ್ರಾ
-ರೈಲ್ವೇಸ್‌ಗೆ (182/10, 161/10), ಉತ್ತರ ಪ್ರದೇಶ (250/10, 72/10) ವಿರುದ್ಧ ಜಯ
-ಸೌರಾಷ್ಟ್ರಕ್ಕೆ (278/10), ಹರ್ಯಾಣ (107/10, 140/10) ವಿರುದ್ಧ ಜಯ
-ಜಾಖಂಡ್‌ (202/10, 89/10) ವಿರುದ್ಧ ಕೇರಳಕ್ಕೆ (259/10, 34/1) ಜಯ
-ತಮಿಳುನಾಡು (176/10, 305/6 ಡಿಕ್ಲೇರ್‌), ಆಂಧ್ರ (309/10, 198/7) ಪಂದ್ಯ ಡ್ರಾ
-ಬಂಗಾಳ (552/9 ಡಿಕ್ಲೇರ್‌, 161/5 ಡಿಕ್ಲೇರ್‌), ಸರ್ವಿಸಸ್‌ (359/10, 212/7) ಪಂದ್ಯ ಡ್ರಾ
-ಚತ್ತೀಸ್‌ಗಢ (458/1 0), ಗೋವಾ (282/10, 170/7)  ಪಂದ್ಯ ಡ್ರಾ
-ಹಿಮಾಚಲ ಪ್ರದೇಶ (729/8 ಡಿಕ್ಲೇರ್‌, 145/6), ಪಂಜಾಬ್‌ (610/10) ಪಂದ್ಯ ಡ್ರಾ

Advertisement
Advertisement

Udayavani is now on Telegram. Click here to join our channel and stay updated with the latest news.

Next