Advertisement

ಇಂದಿನಿಂದ ರಣಜಿ ಸೆಮಿಫೈನಲ್ಸ್‌: ಮುಂಬಯಿ-ಯುಪಿ ಮಹಾ ಸಮರ

08:15 AM Jun 14, 2022 | Team Udayavani |

ಬೆಂಗಳೂರು: ಬರೋಬ್ಬರಿ 41 ಸಲ ರಣಜಿ ಟ್ರೋಫಿಯನ್ನೆತ್ತಿದ ಮುಂಬಯಿ ಪ್ರಸಕ್ತ ದೇಶಿ ಕ್ರಿಕೆಟ್‌ ಸೀಸನ್‌ನಲ್ಲಿ ಮತ್ತೆ ನೆಚ್ಚಿನ ತಂಡವಾಗಿ ಮೂಡಿಬಂದಿದೆ. ಮಂಗಳವಾರದಿಂದ ಬೆಂಗಳೂರಿನಲ್ಲಿ ಮೊದಲ್ಗೊಳ್ಳಲಿರುವ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಅದು ಉತ್ತರ ಪ್ರದೇಶವನ್ನು ಎದುರಿಸಲಿದ್ದು, ಮೇಲುಗೈ ನಿರೀಕ್ಷೆಯಲ್ಲಿದೆ.

Advertisement

ಇನ್ನೊಂದು ಸೆಮಿಫೈನಲ್‌ ಮುಖಾ ಮುಖೀ ಬಂಗಾಲ ಮತ್ತು ಮಧ್ಯಪ್ರದೇಶ ನಡುವೆ ನಡೆಯಲಿದೆ.

ಪೃಥ್ವಿ ಶಾ ನೇತೃತ್ವದ ಮುಂಬಯಿ ಕ್ವಾರ್ಟರ್‌ ಫೈನಲ್‌ನಲ್ಲಿ ದುರ್ಬಲ ಉತ್ತರಾಖಂಡ ವಿರುದ್ಧ 725 ರನ್ನುಗಳ ವಿಶ್ವದಾಖಲೆಯ ಗೆಲುವು ಸಾಧಿಸಿದ ಉತ್ಸಾಹದಲ್ಲಿದೆ. ಇನ್ನೊಂದು ಪಂದ್ಯ ದಲ್ಲಿ ಉತ್ತರ ಪ್ರದೇಶ ಆತಿಥೇಯ ಕರ್ನಾಟಕವನ್ನು 5 ವಿಕೆಟ್‌ಗಳಿಂದ ಮಣಿಸಿತ್ತು. ಹೀಗಾಗಿ ಇಲ್ಲಿ ಯುಪಿ ಸಾಧನೆಯ ಮೌಲ್ಯ ಅಧಿಕ.

ಮುಂಬಯಿ ಬ್ಯಾಟಿಂಗ್‌ ಬಲಿಷ್ಠ
ಮುಂಬಯಿ ಬ್ಯಾಟಿಂಗ್‌ ಸರದಿ ಹೆಚ್ಚು ಬಲಿಷ್ಠ. ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್‌, ಸಫ‌ìರಾಜ್‌ ಖಾನ್‌, ಚೊಚ್ಚಲ ಪಂದ್ಯದಲ್ಲೇ ದ್ವಿಶತಕ ಬಾರಿಸಿದ ಸುವೇದ್‌ ಪಾರ್ಕರ್‌ ಅವರೆಲ್ಲ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅರ್ಮಾನ್‌ ಜಾಫ‌ರ್‌ ಮತ್ತೋರ್ವ ಪ್ರತಿಭಾನ್ವಿತ ಆಟಗಾರ. ಆದರೆ ಕೀಪರ್‌ ಆದಿತ್ಯ ತಾರೆ ಗಾಯಾಳಾಗಿ ಹೊರಬಿದ್ದಿರುವುದರಿಂದ ತಂಡಕ್ಕೆ ತುಸು ಹಿನ್ನಡೆಯಾಗಿದೆ.

ಮುಂಬಯಿಯ ಬೌಲಿಂಗ್‌ ಸರದಿ ಭಾರೀ ಘಾತಕವೇನಲ್ಲ. ಹಾಗೆಯೇ ಯುಪಿ ಬ್ಯಾಟಿಂಗ್‌ ಸರದಿ ಅಷ್ಟೇನೂ ಬಲಿಷ್ಠವಲ್ಲ. ಹೀಗಾಗಿ ಧವಳ್‌ ಕುಲಕರ್ಣಿ, ಶಮ್ಸ್‌ ಮುಲಾನಿ, ಮೋಹಿತ್‌ ಅವಸ್ತಿ, ತುಷಾರ್‌ ದೇಶ ಪಾಂಡೆ, ಯುವ ಆಫ್ ಸ್ಪಿನ್ನರ್‌ ತನುಷ್‌ ಕೋಟ್ಯಾನ್‌ ಅವರೆಲ್ಲ ಸೇರಿ ಯುಪಿ ಬ್ಯಾಟರ್‌ಗಳಿಗೆ ಕಡಿವಾಣ ಹಾಕಬಹುದೆಂಬುದೊಂದು ನಿರೀಕ್ಷೆ.

Advertisement

ಯುಪಿ ನಾಯಕ ಕರಣ್‌ ಶರ್ಮ ಅವರ ಬ್ಯಾಟಿಂಗನ್ನು ಹೆಚ್ಚು ಅವಲಂಬಿ ಸಿದೆ. ಕರ್ನಾಟಕ ವಿರುದ್ಧದ ಚೇಸಿಂಗ್‌ನಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಪ್ರಿಯಂ ಗರ್ಗ್‌, ರಿಂಕು ಸಿಂಗ್‌ ಮತ್ತಿಬ್ಬರು ಭರವಸೆಯ ಬ್ಯಾಟರ್. ಆರ್ಯನ್‌ ಜುವಲ್‌, ಸಮರ್ಥ್ ಸಿಂಗ್‌, ಧ್ರುವ್‌ ಜೊರೆಲ್‌ ಅವರೆಲ್ಲ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಐಪಿಎಲ್‌ನಲ್ಲಿ ಮಿಂಚಿದ ಪೇಸ್‌ ಬೌಲರ್‌ ಮೊಹ್ಸಿನ್‌ ಖಾನ್‌ ಸೇರ್ಪಡೆಯಿಂದ ಯುಪಿ ಬೌಲಿಂಗ್‌ ಹೆಚ್ಚು ಬಲಿಷ್ಠಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next