Advertisement
ಮುಂಬಯಿಯ “ಬಾಂದ್ರಾ ಕುರ್ಲಾ ಕ್ರಿಕೆಟ್ ಗ್ರೌಂಡ್’ನಲ್ಲಿ ಆತಿಥೇಯ ಮುಂಬಯಿ ತಂಡ ತಮಿಳುನಾಡನ್ನು ಎದುರಿಸಲಿದೆ. ವಿದರ್ಭ ಮತ್ತು ಮಧ್ಯ ಪ್ರದೇಶ ನಡುವಿನ ಪಂದ್ಯ ನಾಗ್ಪುರದ “ವಿದರ್ಭ ಸ್ಟೇಟ್ ಕ್ರಿಕೆಟ್ ಅಸೋಸಿ ಯೇಶನ್ ಸ್ಟೇಡಿಯಂ’ನಲ್ಲಿ ನಡೆಯಲಿದೆ.
ಮಂಗಳವಾರ ಮುಗಿದ ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭ 127 ರನ್ನುಗಳ ಅಂತರದಿಂದ ಕರ್ನಾಟಕವನ್ನು ಮಣಿಸಿತ್ತು. ಈ ಪಂದ್ಯ ಕೂಡ ನಾಗ್ಪುರದಲ್ಲೇ ನಡೆದಿತ್ತು. ವಿದರ್ಭಕ್ಕೆ ಮುಂಬಯಿಯ ಮಾಜಿ ಕ್ರಿಕೆಟಿಗ ಚಂದ್ರಕಾಂತ್ ಪಂಡಿತ್ ಕೋಚ್ ಆಗಿದ್ದಾರೆ. 2017-18 ಮತ್ತು 2018-19ರಲ್ಲಿ ಸತತವಾಗಿ ರಣಜಿ ಚಾಂಪಿ ಯನ್ ಎನಿಸಿಕೊಂಡ ಹೆಗ್ಗಳಿಕೆ ವಿದರ್ಭ ತಂಡ ದ್ದಾಗಿದೆ. ಇನ್ನೊಂದೆಡೆ ಮಧ್ಯ ಪ್ರದೇಶ ತಂಡ ಆಂಧ್ರ ಪ್ರದೇಶ ವಿರುದ್ಧ 4 ರನ್ನುಗಳ ರೋಚಕ ಜಯ ಸಾಧಿಸಿತ್ತು. ಮುಂಬಯಿಗೆ ಲೀಡ್
41 ಬಾರಿಯ ಚಾಂಪಿಯನ್ ಆಗಿ ರುವ ಮುಂಬಯಿ ಕ್ವಾರ್ಟರ್ ಫೈನಲ್‌ನಲ್ಲಿ ಬರೋಡ ವಿರುದ್ಧ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಕೊನೆಯ ಕ್ರಮಾಂಕದ ಆಟಗಾರರಾದ ತನುಷ್ ಕೋಟ್ಯಾನ್ ಮತ್ತು ತುಷಾರ್ ದೇಶಪಾಂಡೆ ಅವರ ಆಕರ್ಷಕ ಶತಕ ಪರಾಕ್ರಮದಿಂದ ಈ ಪಂದ್ಯ ನೂತನ ಇತಿಹಾಸಕ್ಕೆ ಸಾಕ್ಷಿಯಾಗಿತ್ತು. ತಮಿಳುನಾಡು ಹಾಲಿ ಚಾಂಪಿಯನ್ ಸೌರಾಷ್ಟ್ರಕ್ಕೆ ಇನ್ನಿಂಗ್ಸ್ ಹಾಗೂ 33 ರನ್ನುಗಳ ಭಾರೀ ಸೋಲುಣಿಸಿ ಬಂದಿದೆ.