Advertisement
ಶಿವಮೊಗ್ಗದ ಜೆಎನ್‌ಎನ್ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲ್ಗೊಂಡ ಪಂದ್ಯದಲ್ಲಿ ರವಿಕುಮಾರ್ ಸಮರ್ಥ್ ಅಜೇಯ 105 ಹಾಗೂ ಕೆ. ಸಿದ್ಧಾರ್ಥ್ ಅಜೇಯ 62 ರನ್ ಬಾರಿಸಿ ಮೆರೆದರು. ಇವರ ಸಾಹಸದಿಂದ ಕರ್ನಾಟಕ 3 ವಿಕೆಟಿಗೆ 233 ರನ್ ಗಳಿಸಿದೆ.
ಕರ್ನಾಟಕ ನಿರೀಕ್ಷಿತ ಆರಂಭ ಕಾಣುವಲ್ಲಿ ವಿಫಲವಾಯಿತು. ಭರವಸೆಯ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೇವಲ 3 ಎಸೆತ ಎದುರಿಸಿದ ಅವರು ರವಿ ಯಾದವ್ ಎಸೆತದಲ್ಲಿ ಹಿಮಾಂಶುಗೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆಗೆ ನಡೆದರು. ಸ್ಕೋರ್ 35 ರನ್ ಆದಾಗ 9 ರನ್ ಗಳಿಸಿದ್ದ ರೋಹನ್ ಕದಮ್ ವಿಕೆಟ್ ಬಿತ್ತು. ನಾಯಕ ಕರುಣ್ ನಾಯರ್ (22 ರನ್) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸಮರ್ಥ್-ಸಿದ್ಧಾರ್ಥ್ ರಕ್ಷಣೆ
ಒಂದು ಕಡೆ ಪ್ರವಾಸಿ ಬೌಲರ್‌ಗಳು ಮೇಲುಗೈ ಪಡೆಯುತ್ತಿದ್ದಂತೆ ಆರ್. ಸಮರ್ಥ್ ಹಾಗೂ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದ ಕೆ. ಸಿದ್ಧಾರ್ಥ್ ತಂಡದ ರಕ್ಷಣೆಗೆ ಧಾವಿಸಿದರು. ಮುರಿಯದ 4ನೇ ವಿಕೆಟಿಗೆ ಇವರಿಂದ ಈಗಾಗಲೇ 150 ರನ್ ಒಟ್ಟುಗೂಡಿದೆ. ಸಮರ್ಥ್ ಜವಾಬ್ದಾರಿಯುತ ಆಟವಾಡಿ 278 ಎಸೆತಗಳನ್ನು ನಿಭಾಯಿಸಿದ್ದಾರೆ. ಹೊಡೆದದ್ದು ಕೇವಲ 6 ಬೌಂಡರಿ. ಸಿದ್ಧಾರ್ಥ್ 130 ಎಸೆತ ಎದುರಿಸಿದ್ದು, 7 ಬೌಂಡರಿ ಬಾರಿಸಿದ್ದಾರೆ.
Related Articles
Advertisement
ಸಂಕ್ಷಿಪ್ತ ಸ್ಕೋರ್: ಕರ್ನಾಟಕ 3 ವಿಕೆಟಿಗೆ 233 (ಸಮರ್ಥ್ ಬ್ಯಾಟಿಂಗ್ 105, ಸಿದ್ಧಾರ್ಥ್ ಬ್ಯಾಟಿಂಗ್ 62, ನಾಯರ್ 22).
ಜಡೇಜ ದಾಳಿಗೆ ಕುಸಿದ ಮುಂಬಯಿರಾಜ್ಕೋಟ್: ಎಡಗೈ ಸ್ಪಿನ್ನರ್ ಧರ್ಮೇಂದ್ರಸಿನ್ಹ ಜಡೇಜ ದಾಳಿಗೆ ಮುಂಬಯಿ ತೀವ್ರ ಕುಸಿತ ಕಂಡಿದೆ. ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದ ಮೊದಲ ದಿನ 8 ವಿಕೆಟಿಗೆ 249 ರನ್ನುಗಳ ಸಾಮಾನ್ಯ ಮೊತ್ತ ಪೇರಿಸಿದೆ. ಜಡೇಜ 90 ರನ್ನಿತ್ತು 5 ವಿಕೆಟ್ ಉಡಾಯಿಸಿದರು. ಮುಂಬಯಿಯ ಆರಂಭ ಉತ್ತಮ ಮಟ್ಟದಲ್ಲಿತ್ತು. ಜಾಯ್ ಬಿಷ್ಟಾ (43)-ಭೂಪೇನ್ ಲಾಲ್ವಾನಿ (25) 21 ಓವರ್ ನಿಭಾಯಿಸಿ 62 ರನ್ ಜತೆಯಾಟ ನಿಭಾಯಿಸಿದರು. ಆದರೆ 26 ರನ್ ಅಂತರದಲ್ಲಿ 4 ವಿಕೆಟ್ ಉದುರಿ ಹೋಯಿತು.
ತಂಡಕ್ಕೆ ಮರಳಿದ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲೇ ಔಟಾದದ್ದು ಮುಂಬಯಿಗೆ ಭಾರೀ ಹೊಡೆತವಿಕ್ಕಿತು. 5ನೇ ವಿಕೆಟಿಗೆ ಜತೆಗೂಡಿದ ಸಫìರಾಜ್ ಖಾನ್ ಮತ್ತು ಶಮ್ಸ್ ಮುಲಾನಿ 109 ರನ್ ಜತೆಯಾಟ ನಿಭಾಯಿಸಿ ತಂಡದ ಕುಸಿತಕ್ಕೆ ತಡೆಯಾದರು. 78 ರನ್ ಮಾಡಿದ ಸಫìರಾಜ್ ಅವರದೇ ಸರ್ವಾಧಿಕ ಗಳಿಕೆ.