ಬೆಂಗಳೂರು: 2022-23ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಪಂದ್ಯಗಳಿಗೆ ತೆರೆ ಬಿದ್ದಿದೆ. ಮುಂದಿನದು ಕ್ವಾರ್ಟರ್ ಫೈನಲ್ ಕದನ.
“ಸಿ’ ವಿಭಾಗದ ಅಗ್ರಸ್ಥಾನಿಯಾದ ಕರ್ನಾಟಕ “ಎ’ ವಿಭಾಗದ ದ್ವಿತೀಯ ಸ್ಥಾನಿ ತಂಡವಾದ ಉತ್ತರಾಖಂಡವನ್ನು ಎದುರಿಸಲಿದೆ.
ಇದು ಕರ್ನಾಟಕ ಪಾಲಿಗೆ ತವರಿನ ಪಂದ್ಯವಾ ಗಿದ್ದು, “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆಡಲಿದೆ. ಮುಂಬಯಿ ಔಟ್ ಒಂದು ಕಾಲದಲ್ಲಿ “ರಣಜಿ ರಾಜ’ನಾಗಿ ಮೆರೆಯು ತ್ತಿದ್ದ ಮುಂಬಯಿ ನಾಕೌಟ್ ತಲುಪಲು ವಿಫಲ ವಾಗಿದೆ. ಅದು ಮಹಾರಾಷ್ಟ್ರ ಎದುರಿನ “ಬಿ’ ವಿಭಾಗದ ಕೊನೆಯ ಪಂದ್ಯವನ್ನು ಡ್ರಾ ಮಾಡಿಕೊಂಡು ನಿರಾಸೆ ಅನುಭವಿಸಿತು. ಆದರೆ ಮಹಾರಾಷ್ಟ್ರ ಕೂಡ ಮುನ್ನಡೆ ಯಲಿಲ್ಲ. ಇಲ್ಲಿ 4 ತಂಡಗಳ ನಡುವೆ ಪೈಪೋಟಿ ಇತ್ತು.
ಅಂತಿಮವಾಗಿ ಆಂಧ್ರ, ಸೌರಾಷ್ಟ್ರ ಮುನ್ನಡೆದವು. ರವೀಂದ್ರ ಜಡೇಜ ನೇತೃತ್ವದ ಸೌರಾಷ್ಟ್ರ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಸೋತರೂ “ಬಿ’ ವಿಭಾಗದ ದ್ವಿತೀಯ ಸ್ಥಾನಿಯಾಗಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯಿತು. ನಾಲ್ಕೂ ಕ್ವಾರ್ಟರ್ ಫೈನಲ್ ಪಂದ್ಯಗಳು ಮಂಗಳವಾರ ಆರಂಭವಾಗಲಿವೆ.