Advertisement

ರಣಜಿ: ಗೆಲುವಿನತ್ತ ಮುಂಬಯಿ

09:58 AM Feb 16, 2020 | sudhir |

ಮುಂಬಯಿ: ಈಗಾಗಲೇ ರಣಜಿ ನಾಕೌಟ್‌ ರೇಸ್‌ನಿಂದ ಹೊರಬಿದ್ದಿರುವ ಮುಂಬಯಿ ತಂಡ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ. ಜಯಕ್ಕಾಗಿ 408 ರನ್‌ ಗುರಿ ಪಡೆದ ಮಧ್ಯಪ್ರದೇಶ 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 44 ರನ್‌ ಮಾಡಿದೆ.

Advertisement

ಮೊದಲ ಇನ್ನಿಂಗ್ಸ್‌ನಲ್ಲಿ 169 ರನ್ನುಗಳ ಮುನ್ನಡೆ ಪಡೆದ ಮುಂಬಯಿ, ದ್ವಿತೀಯ ಸರದಿಯಲ್ಲಿ 5 ವಿಕೆಟಿಗೆ 238 ರನ್‌ ಗಳಿಸಿ ಡಿಕ್ಲೇರ್‌ ಮಾಡಿತು. ಆರಂಭಕಾರ ಹಾರ್ದಿಕ್‌ ತಮೋರೆ ಆಕರ್ಷಕ 113 ರನ್‌ ಬಾರಿಸಿದ್ದು ಮುಂಬಯಿ ಸರದಿಯ ಆಕರ್ಷಣೆ ಆಗಿತ್ತು. 132 ಎಸೆತ ಎದುರಿಸಿದ ತಮೋರೆ 12 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರು. ಭರ್ಜರಿ ಫಾರ್ಮ್ನಲ್ಲಿರುವ ಶಮ್ಸ್‌ ಮುಲಾನಿ 70 ರನ್‌, ಸೂರ್ಯಕುಮಾರ್‌ ಯಾದವ್‌ 38 ರನ್‌ ಮಾಡಿದರು.

ಮುಂಬಯಿ ಸರದಿಯ 4 ವಿಕೆಟ್‌ ಸ್ಪಿನ್ನರ್‌ ಮಿಹಿರ್‌ ಹಿರ್ವಾನಿ ಪಾಲಾಯಿತು. ಈ ಗೂಗ್ಲಿ ಬೌಲರ್‌ ಭಾರತದ ಮಾಜಿ ಸ್ಪಿನ್ನರ್‌ ನರೇಂದ್ರ ಹಿರ್ವಾನಿ ಅವರ ಪುತ್ರ.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-427 ಮತ್ತು 5 ವಿಕೆಟಿಗೆ ಡಿಕ್ಲೇರ್‌ 238 (ತಮೋರೆ 113, ಮುಲಾನಿ 70, ಸೂರ್ಯಕುಮಾರ್‌ 38, ಮಿಹಿರ್‌ ಹಿರ್ವಾನಿ 71ಕ್ಕೆ 4). ಮಧ್ಯಪ್ರದೇಶ-258 ಮತ್ತು 2 ವಿಕೆಟಿಗೆ 44.

Advertisement

Udayavani is now on Telegram. Click here to join our channel and stay updated with the latest news.

Next