Advertisement
ಗೆಲುವಿಗೆ 355 ರನ್ ಗುರಿ ಪಡೆದಿದ್ದ ತಮಿಳುನಾಡು, ಪಂದ್ಯದ ಮುಕ್ತಾಯದ ವೇಳೆ 8 ವಿಕೆಟ್ ನಷ್ಟಕ್ಕೆ 338 ರನ್ ಗಳಿ ಸಿತ್ತು. ಗೆಲುವಿನಿಂದ ಕೇವಲ 17 ರನ್ನುಗಳ ಹಿಂದಿತ್ತು. ಇನ್ನೊಂದೆಡೆ ಕರ್ನಾಟಕ 2 ವಿಕೆಟ್‌ಗಳ ನಿರೀಕ್ಷೆಯಲ್ಲಿತ್ತು.
Related Articles
ಒಂದು ವಿಕೆಟಿಗೆ 36 ರನ್ ಗಳಿಸಿದಲ್ಲಿಂದ ಸೋಮವಾರದ ಬ್ಯಾಟಿಂಗ್ ಮುಂದುವರಿಸಿದ ತಮಿಳುನಾಡು 199ಕ್ಕೆ 5 ವಿಕೆಟ್ ಕಳೆದುಕೊಂಡು ಅಪಾಯದ ಸ್ಥಿತಿಯಲ್ಲಿತ್ತು. ಆಗಿನ್ನೂ 35 ಓವರ್‌ಗಳಷ್ಟು ಆಟ ಬಾಕಿ ಇತ್ತು. ಆದರೆ 6ನೇ ವಿಕೆಟಿಗೆ ಜತೆಗೂಡಿದ ಬಾಬಾ ಇಂದ್ರಜಿತ್ (98) ಮತ್ತು ವಿಜಯ್ ಶಂಕರ್ (60) ಸೇರಿಕೊಂಡು ತಂಡವನ್ನು ಅಪಾಯದಿಂದ ಪಾರುಮಾಡಿದರು. ಇವರಿಂದ 125 ರನ್ ಜತೆಯಾಟ ದಾಖಲಾಯಿತು. ಬಳಿಕ 6 ರನ್ ಅಂತರದಲ್ಲಿ ಇಂದ್ರಜಿತ್, ವಿಜಯ್ ಶಂಕರ್ ಸೇರಿದಂತೆ 3 ವಿಕೆಟ್ ಉರುಳಿದಾಗ ತಮಿಳುನಾಡು ಮತ್ತೆ ಆತಂಕಕ್ಕೆ ಸಿಲುಕಿತು. ಕರ್ನಾಟಕಕ್ಕೆ ಪುನಃ ಗೆಲುವಿನ ಅವಕಾಶ ಎದುರಾಯಿತು. ಆದರೆ ನಾಯಕ ಸಾಯಿ ಕಿಶೋರ್ ಮತ್ತು ಅಜಿತ್ ರಾಮ್ ಕೊನೆಯ ಹಂತವನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು.
Advertisement
3ನೇ ದಿನ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಪ್ರದೋಶ್ ಪೌಲ್ ಕೂಡ ತಮಿಳುನಾಡು ಪಾಲಿಗೆ ಆಪತಾºಂಧವರಾದರು. ಇವರ ಕೊಡುಗೆ 74 ರನ್.
ಸಂಕ್ಷಿಪ್ತ ಸ್ಕೋರ್:ಕರ್ನಾಟಕ-356 ಮತ್ತು 139. ತಮಿಳುನಾಡು-151 ಮತ್ತು 8 ವಿಕೆಟಿಗೆ 338 (ಇಂದ್ರಜಿತ್ 98, ಪ್ರದೋಶ್ 74, ವಿಜಯ್ ಶಂಕರ್ 60, ವಿಮಲ್ ಕುಮಾರ್ 31, ವೈಶಾಖ್ 71ಕ್ಕೆ 3, ಹಾರ್ದಿಕ್ ರಾಜ್ 86ಕ್ಕೆ 2).
ಪಂದ್ಯಶ್ರೇಷ್ಠ: ದೇವದತ್ತ ಪಡಿಕ್ಕಲ್. 4 ಎಸೆತಗಳಿಗೆ 4 ವಿಕೆಟ್!
ಇಂದೋರ್: ಮಧ್ಯಪ್ರದೇಶದ ವೇಗಿ ಖುಲ್ವಂತ್ ಖೆಜ್ರೋಲಿಯ ರಣಜಿ ಇತಿಹಾಸದಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಿತ್ತ 3ನೇ ಬೌಲರ್ ಆಗಿ ಮೂಡಿಬಂದಿದ್ದಾರೆ. ಮಧ್ಯಪ್ರದೇಶದ ವಿರುದ್ಧ ಫಾಲೋಆನ್‌ಗೆ ಸಿಲುಕಿದ್ದ ಬರೋಡ, 2ನೇ ಇನಿಂಗ್ಸ್‌ನಲ್ಲಿ 270 ರನ್‌ಗಳಿಗೆ ಆಲೌಟ್ ಆಯಿತು. ಆ ವೇಳೆ ಖೆಜ್ರೋಲಿಯ ಸತತ 4 ಎಸೆತಗಳಲ್ಲಿ ಬರೋಡದ 4 ವಿಕೆಟ್ ಉರುಳಿಸಿದರು.