ಜಮ್ಶೆಡ್‌ಪುರ: “ಸಿ’ ವಿಭಾಗದ ಅಂತಿಮ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾ ಟಕದ ಸ್ಪಿನ್ ದಾಳಿಗೆ ಕುಸಿದ ಆತಿಥೇಯ ಜಾರ್ಖಂಡ್ 164 ರನ್ನುಗಳಿಗೆ ಸರ್ವಪತನ ಕಂಡಿದೆ. ಕರ್ನಾಟಕ 2 ವಿಕೆಟಿಗೆ 80 ರನ್ ಗಳಿಸಿ ದಿನದಾಟ ಮುಗಿಸಿದೆ.
ಕೃಷ್ಣಪ್ಪ ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಜಾರ್ಖಂಡ್ ಮೇಲೆ ಘಾತಕ ವಾಗಿ ಎರಗಿದರು. ಗೌತಮ್ 61ಕ್ಕೆ 4, ಗೋಪಾಲ್ 18ಕ್ಕೆ 3 ವಿಕೆಟ್ ಕೆಡವಿದರು. ವಿದ್ವತ್ ಕಾವೇರಪ್ಪ ಇಬ್ಬರನ್ನು ಪೆವಿಲಿಯನ್ನಿಗೆ ಅಟ್ಟಿದರು. ಇನ್ನೊಂದು ವಿಕೆಟ್ ಶುಭಾಂಗ್ ಹೆಗ್ಡೆ ಪಾಲಾಯಿತು.
37 ರನ್ ಮಾಡಿದ ಕುಮಾರ ಕುಶಾಗ್ರ ಜಾರ್ಖಂಡ್ ತಂಡದ ಗರಿಷ್ಠ ಸ್ಕೋರರ್. ಆರಂಭ ಕಾರ ಕುಮಾರ ಸೂರಜ್ ಮತ್ತು ಶಾಬಾಜ್ ನದೀಂ ತಲಾ 22 ರನ್ ಹೊಡೆದರು.
ಕರ್ನಾಟಕ ಆರಂಭಿಕರಿಬ್ಬರನ್ನು ಕಳೆದು ಕೊಂಡಿದೆ. ಆರ್. ಸಮರ್ಥ್ 31, ಮಾಯಾಂಕ್ ಅಗರ್ವಾಲ್ 20 ರನ್ ಮಾಡಿ ಔಟಾಗಿದ್ದಾರೆ. ದೇವದತ್ತ ಪಡಿಕ್ಕಲ್ 20 ಮತ್ತು ನಿಕಿನ್ ಜೋಸ್ 8 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕೇದಾರ್ ಜಾಧವ್ ಶತಕ
ಮುಂಬಯಿ: ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಆರಂಭಗೊಂಡ ರಣಜಿ ಪಂದ್ಯದಲ್ಲಿ ಮುಂಬಯಿ ವಿರುದ್ಧ ಮಹಾರಾಷ್ಟ್ರ 6 ವಿಕೆಟಿಗೆ 314 ರನ್ ಮಾಡಿದೆ. ಕೇದಾರ್ ಜಾಧವ್ 128 ರನ್ ಹೊಡೆದರು.
Related Articles
17 ಓವರ್ ಎಸೆದ ಜಡೇಜ
ಚೆನ್ನೈ: ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಸೌರಾಷ್ಟ್ರದ ಸವ್ಯಸಾಚಿ ರವೀಂದ್ರ ಜಡೇಜ ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ 17 ಓವರ್ ಎಸೆದು ಗಮನ ಸೆಳೆದರು. ಆದರೆ ವಿಕೆಟ್ ಕೀಳಲು ವಿಫಲರಾದರು. ನಿಧಾನಗತಿಯ ಆಟವಾಡಿದ ತಮಿಳುನಾಡು 4 ವಿಕೆಟಿಗೆ 183 ರನ್ ಗಳಿಸಿದೆ.