Advertisement

ರಣಜಿ: ಕರ್ನಾಟಕಕ್ಕೆ ಕಾದಿದೆ “ಬರೋಡ ಟೆಸ್ಟ್‌’

09:35 AM Feb 12, 2020 | sudhir |

ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್‌ ಕ್ವಾರ್ಟರ್‌ ಫೈನಲ್‌ಗೆ ಏರುವ ಯೋಜನೆಯಲ್ಲಿರುವ ಕರ್ನಾಟಕ ಬುಧವಾರದಿಂದ “ಬರೋಡ ಪರೀಕ್ಷೆ’ ಎದುರಿಸಲಿದೆ.

Advertisement

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲೈಟ್‌ “ಎ-ಬಿ’ ಗುಂಪಿನ ಈ ಕೊನೆಯ ಲೀಗ್‌ ಮುಖಾಮುಖೀ ರಾಜ್ಯ ತಂಡಕ್ಕೆ ನಿರ್ಣಾಯಕವಾಗಿದೆ. ಗೆದ್ದರಷ್ಟೇ ಕರ್ನಾಟಕದ ಮುಂದಿನ ದಾರಿ ಸಲೀಸಾಗಲಿದೆ ಎಂಬುದು ಈಗಿನ ಲೆಕ್ಕಾಚಾರ.

ಕರ್ನಾಟಕವೀಗ 25 ಅಂಕ ಗಳಿಸಿ 5ನೇ ಸ್ಥಾನದಲ್ಲಿದೆ. ಹೀಗಾಗಿ ಕ್ವಾರ್ಟರ್‌ ಫೈನಲ್‌ ಕನಸು ಜೀವಂತವಾಗಿದೆ. ಆದರೆ ಬರೋಡ ಈಗಾಗಲೇ ಕೂಟದಿಂದ ಹೊರಬಿದ್ದಿದೆ.

ಮತ್ತೂಂದು ಕಡೆ 24 ಅಂಕ ಗಳಿಸಿ 6ನೇ ಸ್ಥಾನದಲ್ಲಿರುವ ಪಂಜಾಬ್‌ ಕೂಡ ನಾಕೌಟ್‌ ರೇಸ್‌ನಲ್ಲಿದೆ. ಅದು ಪಟಿಯಾಲದಲ್ಲಿ ಬಂಗಾಲವನ್ನು ಎದುರಿಸಲಿದೆ. ಎರಡೂ ತಂಡಗಳಿಗೂ ಈ ಪಂದ್ಯ ಮುಂದಿನ ಹಂತಕ್ಕೇರಲು ಮಹತ್ವದ್ದಾಗಿದೆ. ಹೀಗಾಗಿ ಕರ್ನಾಟಕ ಸೋಲುಂಡರೆ ಅಥವಾ ಮೊದಲ ಇನ್ನಿಂಗ್ಸ್‌ ಹಿನ್ನಡೆ ಅನುಭವಿಸಿದರೆ ಕ್ವಾರ್ಟರ್‌ ಫೈನಲ್‌ ಅವಕಾಶ ಕಳೆದುಕೊಳ್ಳಬೇಕಾಗಿ ಬರಬಹುದು. ಈ ಗುಂಪಿನಿಂದ ಅಗ್ರಸ್ಥಾನ ಪಡೆದ 5 ತಂಡಗಳಷ್ಟೇ ಮುಂದಿನ ಸುತ್ತು ತಲುಪಲಿವೆ.

ಸಿಡಿದೇಳಬೇಕಿದೆ ಕರ್ನಾಟಕ
ಹಿಂದಿನ ಲೀಗ್‌ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಇನ್ನಿಂಗ್ಸ್‌ ಹಿನ್ನಡೆ ಅನುಭವಿಸಿದ್ದೇ ಕರ್ನಾಟಕಕ್ಕೆ ಕಂಟಕವಾಗಿ ಪರಿಣಮಿಸಿತ್ತು. ಇದ ನ್ನೀಗ ಬರೋಡ ವಿರುದ್ಧ ಸರಿದೂಗಿಸಿ ಕೊಳ್ಳಬೇಕಿದೆ.

Advertisement

ಕರುಣ್‌ ನಾಯರ್‌ ಸಾರಥ್ಯದ ತಂಡದಲ್ಲಿ 2 ಬದಲಾವಣೆ ಮಾಡ ಲಾಗಿದೆ. ರೋಹನ್‌ ಕದಮ್‌ ಬದಲಿಗೆ ಡಿ. ನಿಶ್ಚಲ್‌ ಸ್ಥಾನ ಪಡೆದಿದ್ದಾರೆ. ಪ್ರತೀಕ್‌ ಜೈನ್‌ಗೆ ವಿಶ್ರಾಂತಿ ನೀಡಲಾಗಿದ್ದು, ಇವರ ಬದಲು ವೇಗಿ ಪ್ರಸಿದ್ಧ್ ಕೃಷ್ಣ ಬಂದಿದ್ದಾರೆ. ದೇವದತ್ತ ಪಡಿಕ್ಕಲ್‌, ಆರ್‌. ಸಮರ್ಥ್, ಕೆ. ಗೌತಮ್‌, ಶ್ರೇಯಸ್‌ ಗೋಪಾಲ್‌, ಅಭಿಮನ್ಯು ಮಿಥುನ್‌, ವಿ. ಕೌಶಿಕ್‌ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದರೆ ಬರೋಡವನ್ನು ಬಗ್ಗುಬಡಿಯುವುದು ಸಮಸ್ಯೆಯೇನಲ್ಲ.

ಬರೋಡಕ್ಕೆ ಇದು ಔಪಚಾರಿಕ ಪಂದ್ಯ
ಆರಂಭದ 2 ಪಂದ್ಯಗಳಲ್ಲಿ ಬರೋಡ ಉತ್ತಮ ಆಟ ಪ್ರದರ್ಶಿಸಿತ್ತು. ಆದರೆ ಅನಂತರ ಡ್ರಾ ಹಾಗೂ ಸೋಲುಗಳು ಬರೋಡವನ್ನು ಹಳಿ ತಪ್ಪಿಸಿದವು. ಸೌರಾಷ್ಟ್ರ ವಿರುದ್ಧ 4 ವಿಕೆಟ್‌ ಸೋಲು, ತಮಿಳುನಾಡು ವಿರುದ್ಧ ಇನ್ನಿಂಗ್ಸ್‌ ಸೋಲು ಅನುಭವಿಸಿದ್ದು ಬರೋಡಕ್ಕೆ ಭಾರೀ ಹೊಡೆತ ನೀಡಿತು. ಕೃಣಾಲ್‌ ಪಾಂಡ್ಯ ಪಡೆಗೆ ಇದು ಕೇವಲ ಔಪಚಾರಿಕ ಪಂದ್ಯ.

ಸಂಭಾವ್ಯ ತಂಡಗಳು
ಕರ್ನಾಟಕ: ಕರುಣ್‌ ನಾಯರ್‌ (ನಾಯಕ), ಆರ್‌. ಸಮರ್ಥ್, ದೇವದತ್ತ ಪಡಿಕ್ಕಲ್‌, ಡಿ. ನಿಶ್ಚಲ್‌, ಪವನ್‌ ದೇಶಪಾಂಡೆ, ಎಸ್‌. ಶರತ್‌, ಶ್ರೇಯಸ್‌ ಗೋಪಾಲ್‌, ಕೆ. ಗೌತಮ್‌, ಅಭಿಮನ್ಯು ಮಿಥುನ್‌, ಕೆ.ವಿ. ಸಿದ್ಧಾರ್ಥ್, ಪ್ರಸಿದ್ಧ್ ಎಂ. ಕೃಷ್ಣ, ಪ್ರವೀಣ್‌ ದುಬೆ, ವಿ. ಕೌಶಿಕ್‌, ರೋನಿತ್‌ ಮೋರೆ, ಬಿ.ಆರ್‌. ಶರತ್‌.
ಬರೋಡ: ಕೃಣಾಲ್‌ ಪಾಂಡ್ಯ (ನಾಯಕ), ಕೇದಾರ್‌ ದೇವಧರ್‌, ದೀಪಕ್‌ ಹೂಡಾ, ಅಹ್ಮದ್‌ ನೂರ್‌ ಪಠಾಣ್‌, ವಿಷ್ಣು ಸೋಲಂಕಿ, ಪಾರ್ಥ್ ಕೊಹ್ಲಿ, ಅಭಿಮನ್ಯು ಸಿಂಗ್‌ ರಜಪೂತ್‌, ವಿರಾಜ್‌ ಭೋಂಸ್ಲೆ, ಭಾರ್ಗವ್‌ ಭಟ್‌, ಲುಕ್ಮನ್‌, ಅನುರೀತ್‌ ಸಿಂಗ್‌, ಗುರ್ಜಿಂದರ್‌ ಸಿಂಗ್‌ ಮಾನ್‌, ಪ್ರತ್ಯೂಷ್‌ ಕುಮಾರ್‌, ಶೋಯಿಬ್‌, ಬಾಬಾಸಫೀ ಖಾನ್‌.

Advertisement

Udayavani is now on Telegram. Click here to join our channel and stay updated with the latest news.

Next