Advertisement

ರಣಜಿ ಫೈನಲ್‌ ಇಂದಿನಿಂದ: ಮಧ್ಯಪ್ರದೇಶ ಎದುರಾಳಿ; 42ನೇ ಪ್ರಶಸ್ತಿಗಾಗಿ ಮುಂಬಯಿ ಪ್ರಯತ್ನ

11:11 AM Jun 22, 2022 | Team Udayavani |

ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ ಫೈನಲ್‌ ಹೋರಾಟವು ಬುಧ ವಾರದಿಂದ ಬೆಂಗಳೂರಿನಲ್ಲಿ ಆರಂಭವಾ ಗಲಿದೆ. ಬಲಿಷ್ಠ ಮುಂಬಯಿ ತಂಡವು 42ನೇ ಬಾರಿ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಮಧ್ಯ ಪ್ರದೇಶ ತಂಡವನ್ನು ಎದುರಿಸಲಿದೆ.

Advertisement

ತಂಡವು ಪ್ರಶಸ್ತಿ ಗೆಲ್ಲುವುದನ್ನು ಎದುರು ನೋಡುತ್ತಿದೆ. ಶರಣಾಗುವ ಅವಕಾಶವೇ ಇಲ್ಲ ಎಂದು ಮಧ್ಯಪ್ರದೇಶ ತಂಡದ ಮುಖ್ಯ ಕೋಚ್‌ ಚಂದ್ರಕಾಂತ್‌ ಪಂಡಿತ್‌ ಹೇಳಿದ್ದಾರೆ. ಆದರೆ ಅಮೋಲ್‌ ಮಜುಮಾªರ್‌ ಮಾರ್ಗದರ್ಶನ ಪಡೆದ ಮುಂಬಯಿ ತಂಡವು ಈ ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದು ಎಲ್ಲ ಪಂದ್ಯಗಳಲ್ಲೂ ಪ್ರಾಬಲ್ಯ ಮೆರೆದಿದ್ದಾರೆ. ಹೀಗಾಗಿ ಮುಂಬಯಿ ಸುಲಭವಾಗಿ ಶರಣಾಗುವ ಪ್ರಶ್ನೆಯೇ ಇಲ್ಲವೆಂದು ಹೇಳಬಹುದು.

 

Koo App

So Mumbai had opted to bat first against Madhya Pradesh today. With Mumbai eyeing their 42nd title and MP aiming to win their maiden Ranji trophy, this intense game between the two would be delightful as well as magical to watch!! Best of Luck to both teams

. #RanjiTrophy #MPvMUM #Final #CricketOnKoo

Advertisement

Abhinav (@abhinav13) 22 June 2022

ತಂಡದ ಆಟಗಾರರ ಸಾಮರ್ಥ್ಯವನ್ನು ಗಮನಿಸಿದರೆ ಮುಂಬಯಿ ತಂಡವೇ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವೆನಿಸಿದೆ. ನಾಯಕ ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್‌, ಸರ್ಫರಾಜ್ ಖಾನ್ ಅಮೋಘ ಫಾರ್ಮ್ ನಲ್ಲಿದ್ದಾರೆ,

ಸರ್ಫರಾಜ್ ಖಾನ್ ಕೇವಲ 5 ಪಂದ್ಯಗಳಲ್ಲಿ 800 ಪ್ಲಸ್‌ ರನ್‌ ಗಳಿಸಿದ ಸಾಧನೆ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್‌ ಕ್ವಾರ್ಟರ್‌ಫೈನಲ್‌ ಮತ್ತು ಸೆಮಿಫೈನಲ್‌ನ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕ ಬಾರಿಸಿದ ಸಾಧಕರಾಗಿದ್ದಾರೆ. ಅವರು ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಉತ್ತಮ ನಿರ್ವಹಣೆಯನ್ನೂ ನೀಡಿದ್ದರು. ಪೃಥ್ವಿ ಶಾ, ಅರ್ಮಾನ್‌ ಜಾಫ‌ರ್‌, ಸುವೇದ್‌ ಪಾರ್ಕರ್‌ ಇಷ್ಟರವರೆಗಿನ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ದಾಖಲಿಸಿದ್ದಾರೆ.

ಮುಂಬಯಿಯ ಬ್ಯಾಟಿಂಗ್‌ ಬಲಿಷ್ಠವಾಗಿದ್ದು ಶ್ರೇಷ್ಠ ನಿರ್ವಹಣೆ ನೀಡುವ ಹಲವು ಆಟಗಾರರು ತಂಡದಲ್ಲಿದ್ದಾರೆ. ಆದರೆ ತಂಡದ ಬೌಲಿಂಗ್‌ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಶಾಮ್ಸ್‌ ಮುಲಾನಿ ಮತ್ತು ಆಫ್ ಸ್ಪಿನ್ನರ್‌ ತನುಷ್‌ ಕೋಟ್ಯಾನ್‌ ಅವರ ನಿರ್ವಹಣೆ ಉತ್ತಮವಾಗಿಲ್ಲ.

ಮಧ್ಯ ಪ್ರದೇಶ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚು ಸುಧಾರಿತ ತಂಡಗಳಲ್ಲಿ ಒಂದಾಗಿದೆ ಮತ್ತು ಪಂಡಿತ್‌ ಅವರ ಮಾರ್ಗದರ್ಶನದಲ್ಲಿ ತಂಡವು ರಣಜಿ ಟ್ರೋಫಿಯ ಫೈನಲ್‌ ಹಂತಕ್ಕೇರಲು ಯಶಸ್ವಿಯಾಗಿದೆ.

ಬ್ಯಾಟಿಂಗ್‌ನಲ್ಲಿ ತಂಡ ವೆಂಕಟೇಶ್‌ ಅಯ್ಯರ್‌ ಅವರನ್ನು ಕಳೆದುಕೊಂಡಿರುವುದು ದೊಡ್ಡ ಪೆಟ್ಟಾಗಬಹುದು. ವೇಗಿ ಆವೇಶ್‌ ಖಾನ್‌ ಕೂಡ ತಂಡದಲ್ಲಿಲ್ಲ. ಕುಮಾರ್‌ ಕಾರ್ತಿಕೇಯ ಬಹಳಷ್ಟು ಸಮಯ ಬೌಲಿಂಗ್‌ ಮಾಡುವ ಸಾಮರ್ಥ್ಯ ಹೊಂದಿರುವುದು ತಂಡಕ್ಕೆ ಲಾಭವಾಗಲಿದೆ. ಹಿಮಾಂಶು ಮಂತ್ರಿ ಮತ್ತು ಅಕ್ಷತ್‌ ರಘುವಂಶಿ ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ
ಅಂಕಣ ಹೇಗಿದೆ?
ಬೆಂಗಳೂರಿನಲ್ಲಿ ಇತ್ತೀಚೆಗೆ ಸತತವಾಗಿ ಮಳೆ ಬರುತ್ತಿದೆ. ಹಾಗಾಗಿ ಮಳೆ ಬಿಟ್ಟು ಕೊಟ್ಟರೆ ಮಾತ್ರ ಪಂದ್ಯ ನಡೆಯುತ್ತದೆ. ಜೂನ್‌ ತಿಂಗಳು ಸಾಮಾನ್ಯವಾಗಿ ಕರ್ನಾಟಕದಲ್ಲಿ ಮಳೆಯಿದ್ದೇ ಇರುತ್ತದೆ! ಸದ್ಯ ಅಂಕಣದಲ್ಲಿ ಅಲ್ಲಲ್ಲಿ ಸಣ್ಣಗೆ ಹುಲ್ಲಿದೆ. ಹಾಗಾಗಿ ಬೌನ್ಸ್‌ ಆಗುವುದು ಖಚಿತ. ತೇವಾಂಶದ ನೆರವೂ ಇರುವು ದರಿಂದ ವೇಗಿಗಳು ಮಿಂಚುವ ಎಲ್ಲ ಅವಕಾಶವಿದೆ.

ಪ್ರೇಕ್ಷಕರಿಗೆ ಉಚಿತ ಪ್ರವೇಶ
ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಅಂತಿಮ ಪಂದ್ಯವನ್ನು ವೀಕ್ಷಿಸಲು ಉಚಿತ ಅವಕಾಶವಿದೆ. ಭಾಗವಹಿಸುವ ಪ್ರೇಕ್ಷಕರು 15ನೇ ಸಂಖ್ಯೆಯ ಗೇಟ್‌ನಿಂದ ಒಳಪ್ರವೇಶಿಸಬಹುದು. ಪಿ.3 ಸ್ಟಾಂಡ್‌ನ‌ಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಬಹುದು ಎಂದು ಕೆಎಸ್‌ಸಿಎ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next