Advertisement

Ranji: ಕರ್ನಾಟಕಕ್ಕೆ ಬಿಹಾರ ಎದುರಾಳಿ

11:52 PM Oct 25, 2024 | Team Udayavani |

ಪಾಟ್ನಾ: ರಣಜಿ ಟ್ರೋಫಿ 3ನೇ ಹಂತದ ಪಂದ್ಯಗಳು ಶನಿವಾರ ಆರಂಭಗೊಳ್ಳಲಿವೆ. ಪಾಟ್ನಾದಲ್ಲಿ ನಡೆಯುವ ಎಲೈಟ್‌ ಗ್ರೂಪ್‌ “ಸಿ’ ಪಂದ್ಯದಲ್ಲಿ ಕರ್ನಾಟಕ ಮತ್ತು ಆತಿಥೇಯ ಬಿಹಾರ ತಂಡಗಳು ಮುಖಾಮುಖಿ ಆಗಲಿವೆ.

Advertisement

ಕರ್ನಾಟಕ ಈಗಾಗಲೇ ಮಧ್ಯಪ್ರದೇಶ ಮತ್ತು ಕೇರಳ ವಿರುದ್ಧ ಆಡಿದ್ದು, ಎರಡೂ ಪಂದ್ಯಗಳು ಮಳೆಯಿಂದಾಗಿ ಡ್ರಾಗೊಂಡಿವೆ. ಹೀಗಾಗಿ ಮಾಯಾಂಕ್‌ ಅಗರ್ವಾಲ್‌ ಪಡೆ ಕೇವಲ 2 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ. ಬಿಹಾರ ವಿರುದ್ಧವೂ ಸೇರಿದಂತೆ ಇನ್ನುಳಿದ 5 ಪಂದ್ಯಗಳಲ್ಲಿ ಕನಿಷ್ಠ 4 ಪಂದ್ಯಗಳನ್ನು ಗೆದ್ದರಷ್ಟೇ ತಂಡದ ಕ್ವಾರ್ಟರ್‌ ಫೈನಲ್‌ ಆಸೆ ಜೀವಂತವಾಗಿರಲಿದೆ. ಈಗಾಗಲೇ ಗ್ರೂಪ್‌ “ಸಿ’ಯಲ್ಲಿ ಹರಿಯಾಣ ಮತ್ತು ಕೇರಳ ತಂಡಗಳು ಕ್ರಮವಾಗಿ 10 ಮತ್ತು 7 ಅಂಕದೊಂದಿಗೆ ಮೊದಲೆರಡು ಸ್ಥಾನದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next