Advertisement

Ranji: ಚಂಡೀಗಢ ವಿರುದ್ಧ ಕರ್ನಾಟಕಕ್ಕೆ ಬೃಹತ್‌ ಮುನ್ನಡೆ

11:29 PM Feb 18, 2024 | Team Udayavani |

ಹುಬ್ಬಳ್ಳಿ: ವಿಕೆಟ್‌ ಕೀಪರ್‌ ಶ್ರೀನಿವಾಸ್‌ ಶರತ್‌ ಹಾಗೂ ಬೌಲರ್‌ ವೈಶಾಖ್‌ ವಿಜಯ್‌ಕುಮಾರ್‌ ಅವರ ಅಜೇಯ ಶತಕಗಳ ನೆರವು ಪಡೆದ ಕರ್ನಾಟಕ ತಂಡ ಚಂಡೀಗಢ ವಿರುದ್ಧದ ರಣಜಿ ಪಂದ್ಯದಲ್ಲಿ 296 ರನ್ನುಗಳ ಬೃಹತ್‌ ಮುನ್ನಡೆ ಸಾಧಿಸಿದೆ. ಚಂಡೀಗಢ ವಿಕೆಟ್‌ ನಷ್ಟವಿಲ್ಲದೆ 61 ರನ್‌ ಮಾಡಿ 3ನೇ ದಿನದಾಟ ಮುಗಿಸಿದೆ.

Advertisement

ದ್ವಿತೀಯ ದಿನದಾಟದಲ್ಲಿ ಮನೀಷ್‌ ಪಾಂಡೆ ಸೆಂಚುರಿ ಬಾರಿಸಿ ಮಿಂಚಿದ್ದರು. 102ರಲ್ಲಿದ್ದ ಅವರು 148ರ ತನಕ ಬ್ಯಾಟಿಂಗ್‌ ವಿಸ್ತರಿಸಿದರು (181 ಎಸೆತ, 17 ಬೌಂಡರಿ). 49 ರನ್‌ ಮಾಡಿ ಆಡುತ್ತಿದ್ದ ಹಾರ್ದಿಕ್‌ ರಾಜ್‌ 82ಕ್ಕೆ ಔಟಾಗಿ ಶತಕ ವಂಚಿತರಾದರು (178 ಎಸೆತ, 7 ಬೌಂಡರಿ).
ರವಿವಾರ ಕರ್ನಾಟಕದ ಸರದಿಯಲ್ಲಿ ಅವಳಿ ಶತಕ ದಾಖಲಾಯಿತು. ಶ್ರೀನಿವಾಸ್‌ ಶರತ್‌ ಔಟಾಗದೆ 100 ರನ್‌ ಹೊಡೆದರೆ (160 ಎಸೆತ, 11 ಬೌಂಡರಿ), ವೈಶಾಖ್‌ ವಿಜಯ್‌ಕುಮಾರ್‌ ಔಟಾಗದೆ 103 ರನ್‌ ಮಾಡಿದರು (141 ಎಸೆತ, 10 ಬೌಂಡರಿ, 2 ಸಿಕ್ಸರ್‌).

ಶ್ರೀನಿವಾಸ್‌ ಶರತ್‌ ಮತ್ತು ವಿಜಯ್‌ಕುಮಾರ್‌ ವೈಶಾಖ್‌ 5ನೇ ವಿಕೆಟಿಗೆ 198 ರನ್‌ ಪೇರಿಸಿ ಚಂಡೀಗಢವನ್ನು ಕಾಡಿದರು.

ಸಂಕ್ಷಿಪ್ತ ಸ್ಕೋರ್‌: ಚಂಡೀಗಢ-267 ಮತ್ತು ವಿಕೆಟ್‌ ನಷ್ಟವಿಲ್ಲದೆ ವಿಕೆಟ್‌ ನಷ್ಟವಿಲ್ಲದೆ 61. ಕರ್ನಾಟಕ-5 ವಿಕೆಟಿಗೆ 563 ಡಿಕ್ಲೇರ್‌ (ಪಾಂಡೆ 148, ವೈಶಾಖ್‌ ಔಟಾಗದೆ 103, ಎಸ್‌. ಶರತ್‌ ಔಟಾಗದೆ 100, ಹಾರ್ದಿಕ್‌ ರಾಜ್‌ 82, ಅಗರ್ವಾಲ್‌ 57, ಜೋಸ್‌ 37, ಕರಣ್‌ ಕೈಲ 143ಕ್ಕೆ 3)

Advertisement

Udayavani is now on Telegram. Click here to join our channel and stay updated with the latest news.

Next