Advertisement

ಮತ್ತೂಂದು ಜಿಪಂ ಕ್ಷೇತ್ರ ಸೇರ್ಪಡೆ

04:22 PM Mar 27, 2021 | Team Udayavani |

ರಾಣಿಬೆನ್ನೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಕ್ಷೇತ್ರಗಳ ಪುನರ್‌ವಿಂಗಡಣೆಗೆ ಮುಂದಾಗಿದೆ. ತಾಲೂಕಿನಲ್ಲಿ ಈಹಿಂದೆ ಆರು ಜಿಪಂ ಕ್ಷೇತ್ರಗಳಿದ್ದು, ಸದ್ಯ ಹೊಸದಾಗಿ ಮತ್ತೂಂದು ಜಿಪಂ ಕ್ಷೇತ್ರ, ತಾಪಂನ 23 ಕ್ಷೇತ್ರಗಳ ಬದಲಾಗಿ 19 ಕ್ಷೇತ್ರಗಳಿಗೆ ಕಡಿತಗೊಳಿಸಿ ಕ್ಷೇತ್ರಗಳ ವಿಂಗಡಣೆ ಮಾಡುವ ಸಾಧ್ಯತೆಗಳಿವೆ.

Advertisement

ತಾಲೂಕಿನಲ್ಲಿ ಯಾವ ಯಾವ ಕ್ಷೇತ್ರಗಳ ಬದಲಾವಣೆಯಾಗಲಿವೆ ಹಾಗೂ ನೂತನಕೊಡಿಯಾಲ ಜಿಪಂ ಕ್ಷೇತ್ರಕ್ಕೆ ಯಾವ್ಯಾವಗ್ರಾಮಗಳು ಸೇರ್ಪಡೆಗೊಳ್ಳುತ್ತವೆ ಎಂಬಕುತೂಹಲ ರಾಜಕೀಯ ನಾಯಕರಲ್ಲಿ ಮನೆ ಮಾಡಿದೆ. ತಾಲೂಕಿನಲ್ಲಿ ಈ ಮೊದಲಿದ್ದ 6 ಜಿಪಂ ಕ್ಷೇತ್ರಗಳ ಜೊತೆಗೆ ಹೆಚ್ಚುವರಿಯಾಗಿ ಒಂದು ಜಿಪಂ ಕ್ಷೇತ್ರ ಘೋಷಿಸಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆಯಿದೆ.

ನೂತನ ಜಿಪಂ ಕ್ಷೇತ್ರದಿಂದ ಆಯ್ಕೆಯಾಗಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಈಗಾಗಲೇ ತಯಾರಿ ನಡೆಸಿದ್ದು, ಸ್ಪರ್ಧಾ ಆಕಾಂಕ್ಷಿಗಳ ಪಟ್ಟಿಯೂಹೆಚ್ಚುತ್ತಿದೆ. ಹೀಗಾಗಿ ಹೊಸ ಜಿಪಂಕ್ಷೇತ್ರ ಹೆಚ್ಚು ಕುತೂಹಲ ಮೂಡಿಸಿದೆ. ಈ ಮೊದಲು ಕರೂರ ಜಿಪಂ ಕ್ಷೇತ್ರಇದ್ದುದ್ದನ್ನು ಚಳಗೇರಿ ಕ್ಷೇತ್ರವೆಂದು ಮತ್ತುಜೋಯಿಸರಹರಳಳ್ಳಿಯ ಬದಲಾಗಿ ಅಸುಂಡಿಕ್ಷೇತ್ರವೆಂದು ಬದಲಾಯಿಸಲಾಗಿದೆ. ಇನ್ನುತಾಪಂ23 ಕ್ಷೇತ್ರವಿದ್ದುದ್ದನ್ನು 19 ಕ್ಷೇತ್ರಕ್ಕೆ ಕಡಿತಗೊಳಿಸಿದೆ.ಅದರಲ್ಲಿ ಮಾಕನೂರ, ಲಿಂಗದಹಳ್ಳಿ, ರಾಹುತನಕಟ್ಟಿ,ಮುದೇನೂರ ಕ್ಷೇತ್ರಗಳನ್ನು ಕೈಬಿಡಲಾಗುತ್ತಿದೆ ಎನ್ನಲಾಗುತ್ತಿದೆ.

ಚುನಾವಣೆ ನಿಯಮದ ಪ್ರಕಾರ ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮವನ್ನು ಜಿಪಂ ಕ್ಷೇತ್ರದಕೇಂದ್ರವಾಗಿ ಘೋಷಿಸಲಾಗುತ್ತಿದೆ. ಸದ್ಯ ತಾಲೂಕಿನ ಕೊಡಿಯಾಲ ಹೊಸಪೇಟೆ ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮವಾಗಿದೆ. ಹೀಗಾಗಿ ಪ್ರಾದೇಶಿಕವಿಸ್ತರಣೆ ಗಮನದಲ್ಲಿಟ್ಟುಕೊಂಡು ಕೊಡಿಯಾಲ ಹೊಸಪೇಟೆ ಗ್ರಾಮವನ್ನು ನೂತನ ಜಿಪಂ ಕ್ಷೇತ್ರವಾಗಿವಿಂಗಡಿಸಲು ತಾಲೂಕು ಚುನಾವಣಾಧಿಕಾರಿಗಳು ರಾಜ್ಯ ಚುನಾವಣೆ ಆಯೋಗಕ್ಕೆ ವರದಿ ಸಲ್ಲಿಸಿದ್ದು, ಚುನಾವಣಾ ಆಯೋಗದಿಂದ ಅಧಿಕೃತವಾಗಿ ಘೋಷಣೆ ಮಾಡುವುದು ಬಾಕಿಯಿದೆ.

ನೂತನ ಕ್ಷೇತ್ರಕ್ಕೆ ಸೇರ್ಪಡೆಗೊಳ್ಳುವ ಗ್ರಾಮ: ತಾಲೂಕಿನಲ್ಲಿ ಈ ಮೊದಲ ಕಾಕೋಳ, ಚಳಗೇರಿ, ಮೇಡ್ಲೇರಿ, ತುಮ್ಮಿನಕಟ್ಟಿ, ಹಲಗೇರಿ, ಅಸುಂಡಿ ಜಿಪಂಕ್ಷೇತ್ರಗಳಿದ್ದವು. ಇದೀಗ ಗ್ರಾಮಗಳ ಜನಸಂಖ್ಯೆವಾರುವಿಂಗಡಿಸಿ ನೂತನ ಕ್ಷೇತ್ರ ರಚನೆಗೆ ಸಿದ್ಧತೆ ನಡೆಸಲಾಗುತ್ತಿದೆ.

Advertisement

ಈ ಮೊದಲು ಕರೂರು ಜಿಪಂ ಕ್ಷೇತ್ರದಲ್ಲಿದ್ದ ಕೊಡಿಯಾಲ ಹೊಸಪೇಟೆಯನ್ನು ವಿಂಡಡಿಸಲಾಗಿದೆ.ಈ ಕ್ಷೇತ್ರದೊಂದಿಗೆ ಕೋಡಿಯಾಲ, ನಲವಾಗಲ,ಕವಲೆತ್ತು, ಹಿರೇಬಿದರಿ, ಐರಣಿ, ನದಿಹರಳಳ್ಳಿ,ಹೂಲಿಕಟ್ಟಿ, ವಡೇರಾಯನಹಳ್ಳಿ ಗ್ರಾಮಗಳ ಒಟ್ಟುಜನಸಂಖ್ಯೆ 27,405 ರಷ್ಟಾಗಲಿದೆ.ಈ ಬಾರಿಯ ಚುನಾವಣೆಗೂ ಮುನ್ನ ತಾಲೂಕಿನಲ್ಲಿಕ್ಷೇತ್ರಗಳ ವಿಂಗಡಣೆ ಹಾಗೂ ಕ್ಷೇತ್ರಗಳ ಸೇರ್ಪಡೆಕಾರ್ಯ ನಡೆಸಿದ್ದು, ಚುನಾವಣೆಗೆ ಸ್ಪರ್ಧಿಸುವ ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಚುನಾವಣೆ ಆಯೋಗದ ಅಧಿಕೃತ ಘೋಷಣೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ತಾಪಂ ನಾಲ್ಕು ಕ್ಷೇತ್ರ ಕಡಿತ: ತಾಪಂನಲ್ಲಿ ಈ ಹಿಂದೆ 23 ಕ್ಷೇತ್ರಗಳಿದ್ದವು. ಇದೀಗ 4 ಕ್ಷೇತ್ರಗಳನು ಕಡಿತಗೊಳಿಸಿ ಹರನಗಿರಿ, ಕೊಡಿಯಾಲ, ಗುಡಗೂರ, ಗುಡಗುಡ್ಡಪುರ, ಕಾಕೋಳ, ಜೋಯಿಸರಹರಹಳ್ಳಿ, ಹಲಗೇರಿ, ಬಿಲ್ಲಹಳ್ಳಿ, ಕುಪ್ಪೇಲೂರ, ತುಮ್ಮಿನಕಟ್ಟಿ,ಇಟಗಿ, ಚಳಗೇರಿ, ಕರೂರು, ಐರಣಿ, ಅರೇಮಲ್ಲಾಪುರ,ಮೇಡ್ಲೇರಿ, ಅಸುಂಡಿ, ಸುಣಕಲ್ಲಬಿದರಿ ಸೇರಿದಂತೆ 19 ನೂತನ ತಾಪಂ ಕ್ಷೇತ್ರಗಳನ್ನು ರಚಿಸಲು ಆಯೋಗಜನಸಂಖ್ಯೆವಾರು ಕ್ಷೇತ್ರಗಳನ್ನು ವಿಂಗಡಿಸಲಾಗಿದೆ. ರಾಜ್ಯ ಚುನಾವಣಾ ಆಯೋಗ ಅಧಿಕೃತ ಘೋಷಣೆ ಬರುವುದು ಮಾತ್ರ ಬಾಕಿಯಿದೆ.

ತಾಲೂಕಿನಲ್ಲಿ ಆರು ಜಿಪಂ ಕ್ಷೇತ್ರಗಳ ಬದಲುಈಗ ಏಳು ಜಿಪಂ ಕ್ಷೇತ್ರಗಳಾಗಲಿವೆ. ಈ ಬಗ್ಗೆಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ಈ ಕುರಿತುರಾಜ್ಯ ಚುನಾವಣಾ ಆಯೋಗ ಅಧಿಕೃತವಾಗಿಘೋಷಣೆ ಮಾಡಿದರೆ ಕ್ಷೇತ್ರಗಳ ವಿಂಗಡಣೆ ಕುರಿತು ತಿಳಿಸಲಾಗುವುದು.  –ಶಂಕರ್ ಜಿ.ಎಸ್., ತಹಶೀಲ್ದಾರ್

 

ಮಂಜುನಾಥ ಕುಂಬಳೂರ

Advertisement

Udayavani is now on Telegram. Click here to join our channel and stay updated with the latest news.

Next