Advertisement

ರಾಣಿಬೆನ್ನೂರ: 1.57 ಕೋಟಿ ರೂ.ಉಳಿತಾಯ ಬಜೆಟ್‌

01:39 PM Mar 02, 2021 | Team Udayavani |

ರಾಣಿಬೆನ್ನೂರ: ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಅವರು ಸೋಮವಾರ 2021-22ನೇ ಸಾಲಿನ 1.57.29 ಕೋಟಿ ರೂ. ಉಳಿತಾಯ ಬಜೆಟ್‌ ಮಂಡಿಸಿದರು.

Advertisement

ನಗರಸಭೆ ಸಾಮಾನ್ಯ ಸಭೆಯಲ್ಲಿ ಬಜೆಟ್‌ ಮಂಡಿಸಿದ ಅವರು, ಬಜೆಟ್‌ನ ಪ್ರಾರಂಭಿಕ ಶಿಲ್ಕು 584.27ಲಕ್ಷ ರೂ.ಗಳಷ್ಟಿದ್ದು, ನಿರೀಕ್ಷಿತ ರಾಜಸ್ವ ಸ್ವೀಕಾರದಿಂದ3144.96ಲಕ್ಷ ರೂ., ಬಂಡವಾಳದಿಂದ 1757.95ಲಕ್ಷ ರೂ., ಅಸಮಾನ್ಯ ಸ್ವೀಕೃತಿಯಿಂದ 2270.25ಲಕ್ಷ ರೂ.ಸೇರಿದಂತೆ ಒಟ್ಟು 7173.16ಲಕ್ಷ ರೂ. ಆದಾಯ ಮೂಲಗಳನ್ನು ನಿರೀಕ್ಷಿಸಲಾಗಿದೆ ಎಂದರು.

ರಾಜಸ್ವ ಪಾವತಿಯಿಂದ 2655.96 ಲಕ್ಷ ರೂ., ಬಂಡವಾಳಪಾವತಿಯಿಂದ 2567.74ಲಕ್ಷ ರೂ., ಅಸಾಮಾನ್ಯ ಪಾವತಿಯಿಂದ 2376.44ಲಕ್ಷ ರೂ. ಸೇರಿದಂತೆ ಒಟ್ಟು 7600.14 ಲಕ್ಷ ರೂ. ನಿರೀಕ್ಷಿಸಲಾಗಿದೆ. ಇದರಿಂದ ಈಬಾರಿ 157.29 ಲಕ್ಷ ರೂ. ಉಳಿತಾಯ ಬಜೆಟ್‌ ಆಗಿದೆ ಎಂದರು.

ಈ ಬಾರಿ ಆದಾಯದ ಮೂಲಗಳಾದ ಆಸ್ತಿ ತೆರಿಗೆಯಿಂದ 409.13ಲಕ್ಷ ರೂ., ಮಳಿಗೆ ಬಾಡಿಗೆಯಿಂದ 267.12ಲಕ್ಷ ರೂ., ನೀರಿನಕಂದಾಯದಿಂದ 300 ಲಕ್ಷ ರೂ., ಅಭಿವೃದ್ಧಿ ಕರದಿಂದ 250 ಲಕ್ಷ ರೂ., ಎಸ್‌ಎಫ್‌ಸಿ ವೇತನ, ವಿದ್ಯುತ್‌, ಮುಕ್ತನಿಧಿ ಅನುದಾನದಿಂದ ಒಟ್ಟು 1408.50 ಲಕ್ಷ ರೂ., ಇತರೆ ಮೂಲಗಳಿಂದ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ ಎಂದರು.

ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ಬದಿ ಚರಂಡಿಗೆ 915.21 ಲಕ್ಷ ರೂ., ಬೀದಿದೀಪ ವ್ಯವಸ್ಥೆಗೆ 150 ಲಕ್ಷ ರೂ., ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ 20ಲಕ್ಷ ರೂ., ನೀರು ಸರಬರಾಜಿಗೆ 221.99ಲಕ್ಷ ರೂ.,ಉದ್ಯಾನವಗಳ ಅಭಿವೃದ್ಧಿಗೆ 606.40ಲಕ್ಷ ರೂ., 15ನೇ ಕೇಂದ್ರ ಹಣಕಾಸು ಆಯೋಗದ ಸಾಮಾನ್ಯ ಮೂಲಅನುದಾನ 727.95ಲಕ್ಷ ರೂ. ಸೇರಿದಂತೆ ಒಟ್ಟು1932.85ಲಕ್ಷ ರೂ. ನಿರೀಕ್ಷಿಸಲಾಗಿದೆ.

Advertisement

ಇದೇ ಪ್ರಥಮ ಬಾರಿಗೆ ಬಜೆಟ್‌ ಮಂಡಿಸಲು ಅಧ್ಯಕ್ಷರು ಕೈಯಲ್ಲಿ ಸೂಟಕೇಸ್‌ ತರುವ ಮೂಲಕ ಸದಸ್ಯರ ಗಮನ ಸೆಳೆದರು. ನಗರಸಭೆ ಉಪಾಧ್ಯಕ್ಷೆಕಸ್ತೂರಿ ಚಿಕ್ಕಬಿದರಿ, ಶಾಸಕ ಅರುಣಕುಮಾರ ಪೂಜಾರ, ಪೌರಾಯುಕ್ತ ಡಾ.ಎನ್‌.ಮಹಾಂತೇಶ, ಎಇಇ ಕೃಷ್ಣಮೂರ್ತಿ, ಶಂಕರ, ವಾಣಿಶ್ರೀ, ಮಧು ಸಾತೇನಹಳ್ಳಿಸೇರಿದಂತೆ ಸರ್ವ ಸದಸ್ಯರು ಮತ್ತು ನಾಮನಿರ್ದೇಶಿತ ಸದಸ್ಯರು, ಸಿಬ್ಬಂದಿ ಮತ್ತಿತರರು ಇದ್ದರು. ಬಜೆಟ್‌ ಕುರಿತು ಪರ ಹಾಗೂ ವಿರೋಧ ಪಕ್ಷದ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಭೆಗೂ ಮುನ್ನ ಸಿಸಿ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ವಿಷಯಗಳನ್ನುದೃಢೀಕರಿಸಬಾರದು. ಮುಂದಿನ ಸಭೆಗೆ ತರಬೇಕೆಂದುಪುಟ್ಟಪ್ಪ ಮರಿಯಮ್ಮನವರ, ಲಿಂಗರಾಜ ಕೋಡಿಹಳ್ಳಿ,ಶೇಖಪ್ಪ ಹೊಸಗೌಡ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಆಡಳಿತ ಪಕ್ಷದ ಪ್ರಕಾಶ ಬುರಡಿಕಟ್ಟಿ, ಪ್ರಕಾಶಪೂಜಾರ, ಮಲ್ಲಣ್ಣ ಅಂಗಡಿ ಸೇರಿದಂತೆ ಮತ್ತಿತರರು ಅಂತಹ ಪ್ರಮಾದವೇನೂ ಆಗಿಲ್ಲ. ಎಲ್ಲ ವಿಷಯಗಳು ದೃಢೀಕರಣವಾಗಲಿ ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next