Advertisement

ರೈತರ ಉತ್ಪನ್ನ ನೇರ ಗ್ರಾಹಕರಿಗೆ

04:58 PM Apr 08, 2020 | Naveen |

ರಾಣಿಬೆನ್ನೂರ: ಲಾಕ್‌ಡೌನ್‌ ಸಮಯದಲ್ಲಿಯೂ ಕೃಷಿ ವಿಜ್ಞಾನ ಕೇಂದ್ರ ಬೆಂಬಲದೊಂದಿಗೆ ರೈತ ಉತ್ಪಾದಕರ ಕಂಪನಿ (ಎಫ್‌ಪಿಒ) ಜಿಲ್ಲೆಯಲ್ಲಿ ರೈತರು ಬೆಳೆದಿರುವ ತರಕಾರಿ, ಹಣ್ಣು, ಹೂಗಳನ್ನು ನೇರವಾಗಿ ರೈತರಿಂದ ಖರೀದಿಸಿ ನೇರವಾಗಿ ಗ್ರಾಹಕರ ಮನೆಗಳಿಗೆ ಮಾರಾಟ ಮಾಡಲು ಮುಂದಾಗಿವೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಅಶೋಕ ಪಿ. ಹೇಳಿದರು.

Advertisement

ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರು ಬೆಳೆದ ತರಕಾರಿ ಉತ್ಪನ್ನಗಳ ಖರೀದಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಗಣೆ ವಾಹನಗಳ ಲಭ್ಯತೆಯ ತೊಂದರೆ ಒಂದೆಡೆಯಾದರೆ, ಉತ್ತಮ ಬೆಲೆ ದೊರಕದಿರುವುದು ಕೂಡ ರೈತರಿಗೆ ತಲೆನೋವಾಗಿದೆ. ಇದರ ಮಧ್ಯೆ ರೈತರ ಒಳಿತಿಗಾಗಿ ಹಾನಗಲ್‌ನ ಶ್ರೀ ಕುಮಾರೇಶ್ವರ ರೈತ ಉತ್ಪಾದಕರ ಕಂಪನಿ, ರಟ್ಟಿಹಳ್ಳಿಯ ಕುಮದ್ವತಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ, ಹಾವೇರಿಯ ಭೂತಾಯಿ ಕಂಪನಿ ಹಾಗೂ ಚಿಕ್ಕಬಾಸೂರಿನ ಎಫ್‌ಪಿಒಗಳು ಖರೀದಿಗೆ ಮುಂದಾಗಿ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳ ಗ್ರಾಹಕರ ಮನೆ ಬಾಗಿಲಿಗೆ ಸೂಕ್ತ ದರದಲ್ಲಿ ಮಾರಾಟ ಮಾಡಲು ಶ್ರಮಿಸುತ್ತಿವೆ ಎಂದರು. ರೈತ ಉತ್ಪಾದಕರ ಸಂಘದ ಪದಾಧಿಕಾರಿಗಳು ಮತ್ತು ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next