Advertisement

ಕಟ್ಟು ನಿಟ್ಟು ಕ್ರಮದಿಂದ ಸೋಂಕು ತಡೆ

05:07 PM Apr 09, 2020 | Naveen |

ರಾಣಿಬೆನ್ನೂರ: ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಕಾರಣ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಕಂಡುಬಾರದಿರುವುದು ಸಮಾಧಾನ ತಂದಿದೆ ಎಂದು ಜಿಪಂ ಸಿಇಒ ರಮೇಶ ದೇಸಾಯಿ ಹೇಳಿದರು.

Advertisement

ತಾಪಂ ಸಭಾಭವನದಲ್ಲಿ ತಾಲೂಕಿನ ಸ್ಥಿತಿಗತಿ ಕುರಿತು ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಇನ್ನಷ್ಟು ಮುಂಜಾಗೃತಾ ಕ್ರಮವಾಗಿ ಪ್ರತಿ ತಾಲೂಕಿನಲ್ಲಿ ಯಾರಿಗೇ ಆಗಲಿ ಜ್ವರ ಕಂಡುಬಂದಲ್ಲಿ ಆರೋಗ್ಯ ತಪಾಸಣಾ ಕೇಂದ್ರವನ್ನು ತೆರೆದು ದಿನದ 24 ಗಂಟೆ ತಪಾಸಣೆ ನಡೆಸಲಾಗುವುದು ಎಂದರು. ಈಗಾಗಲೇ ಪ್ರತಿ ಗ್ರಾಮದಲ್ಲಿ ಆಶಾ ಕಾರ್ಯಕರ್ತರಿಂದ 11 ಸಾವಿರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಈ ಕಾರ್ಯ ನಿರಂತರ ಮುಂದುವರಿಯಲಿದೆ. ಜಿಲ್ಲಾಡಳಿತ ಎಂತಹ ಕಠಿಣ ಪರಿಸ್ಥಿತಿ ಎದುರಾದರೂ ಎದುರಿಸಲು ಸರ್ವ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರು ಅವಶ್ಯಕತೆ ಮೀರಿ ಮನೆಯಿಂದ ಹೊರಬರಬಾರದು ಎಂದರು.

ಅಂತ್ಯೋದಯ ಹಾಗೂ ಹಸಿರು ಪಡಿತರ ಕಾರ್ಡ್‌ದಾರರಿಗೆ 10 ಕೆಜಿ ಅಕ್ಕಿ, 4 ಕೆಜಿ ಗೋದಿ ವಿತರಿಸುತ್ತಿದ್ದು, ಹಸಿರು ಪಡಿತರ ಕಾರ್ಡ್‌ ಹೊಂದಿಲ್ಲದ ಕಡುಬಡವರಿಗೂ ಆಹಾರ ಧಾನ್ಯ ವಿತರಿಸಲಾಗುವುದು. ಅಂತವರು ತಾಲೂಕಾಡಳಿತದ ಗಮನಕ್ಕೆ ತಂದು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಸಕ ಅರುಣಕುಮಾರ ಪೂಜಾರ, ತಾಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಇಒ ಎಸ್‌.ಎಂ. ಕಾಂಬಳೆ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ತಾಪಂ ವ್ಯವಸ್ಥಾಪಕ ಬಸವರಾಜ ಶಿಡೇನೂರ, ಅಶೋಕ ನಾರಜ್ಜಿ ಇದ್ದರು. ಇದಕ್ಕೂ ಮುನ್ನ ಜಿಪಂ ಸಿಇಒ ರಮೇಶ ದೇಸಾಯಿ ಅವರು ಹಲಗೇರಿ ರಸ್ತೆಯ ಸಾರ್ವಜನಿಕ ಆಸ್ಪತ್ರೆಗೆ ಹಾಗೂ ನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next