ರಾಣಿಬೆನ್ನೂರ: ನೇಕಾರ ಸಮಾಜ ಒಗ್ಗಟ್ಟಿನಿಂದ ನಡೆದಾಗ ಮಾತ್ರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಒಕ್ಕೂಟದಿಂದ ಸಮಾಜವನ್ನು ಬಲಾಡ್ಯಗೊಳಿಸುವಲ್ಲಿ ಶ್ರಮಿಸಲಾಗುವುದು ಎಂದು ನೇಕಾರ ಸಮುದಾಯಗಳ ಒಕ್ಕೂಟ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಹೇಳಿದರು.
Advertisement
ನಗರದ ಯರೇಕುಪ್ಪಿ ರಸ್ತೆಯ ಶ್ರೀನೀಲಕಂಠೇಶ್ವರ ದೇವಸ್ಥಾನ ಆವರಣದ ಗಣೇಶೋತ್ಸವ ಮಂಟಪದಲ್ಲಿ ಸೋಮವಾರ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಎಲ್ಲಾ ಪಂಗಡಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದವರು ನನ್ನ ಮೇಲೆ ನಂಬಿಕೆ ಇಟ್ಟು ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ, ಶಿಸ್ತುನಿಂದ ನಿರ್ವಹಿಸುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅತೀ ಮುಖ್ಯವಾಗಿದೆ. ಆದ್ದರಿಂದ ಮುಂದಿನ ಸಭೆಗಳಲ್ಲಿ ಸಮಾಜ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಸೇರುವ ಮೂಲಕ ಸಮಾಜದ ಅಭಿವೃದ್ಧಿ ನಾಂದಿ ಹಾಡಬೇಕು ಎಂದರು.
ತೊಡಗಿದ್ದು, ಇತ್ತೀಚಿಗೆ ಆರ್ಥಿಕವಾಗಿ ಸಬಲರಾಗಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿಕೊಂಡು ಹೋದರೆ ಸಮಾಜದ ಏಳ್ಗೆ
ಸಾಧ್ಯವಾಗುತ್ತದೆ. ಬೇರೆ ಸಮಾಜದ ಅಭಿವೃದ್ಧಿ ನಿಗಮಗಳಿವೆ. ಈ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ನೇಕಾರ ನಿಗಮ ಸ್ಥಾಪನೆ ಮಾಡಿದರೂ ಇಲ್ಲಿಯವರಿಗೂ ಅಧ್ಯಕ್ಷರು ಹಾಗೂ ಪದಾಧಿ ಕಾರಿಗಳನ್ನು ನೇಮಿಸಿಲ್ಲ. ಈ ನಿಟ್ಟನಲ್ಲಿ ನೇಕಾರ ಒಕ್ಕೂಟ ಬಲಪಡಿಸುವ ದೃಷ್ಟಿ ಹೊಂದಲಾಗಿದೆ. ಹಂತ, ಹಂತವಾಗಿ ಸಮಾಜವನ್ನು ಬಲಪಡಿಸುವ ಕೆಲಸ ಮಾಡೋಣ. ಒಕ್ಕೂಟ ಬಲಾಡ್ಯವಾದರೆ ಯಾವುದೇ ಪಕ್ಷದ ಸರ್ಕಾರ ಇರಲಿ ನಿಗಮದ ಅಧ್ಯಕ್ಷರನ್ನು ಮಾಡಲು ಆಗ್ರಹಿಸಬಹುದು. ಆದ್ದರಿಂದ ಸಮಾಜದ ಒಗ್ಗಟ್ಟಿಗೆ ಶ್ರಮಿಸಬೇಕು ಎಂದರು. ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಸಂಕಪ್ಪ ಮಾರನಾಳ ಮಾತನಾಡಿ, ಸಮಾಜದ ಜನ ಎಚ್ಚೆತ್ತುಕೊಂಡು ಒಕ್ಕೂಟದ ಸಭೆಗಳಲ್ಲಿ ಭಾಗವಹಿಸಿ ಸಲಹೆ, ಸೂಚನೆ ನೀಡಬೇಕು. ಒಕ್ಕೂಟದ ಎಲ್ಲಾ ಪಂಗಡದವರು ಆಗಮಿಸಬೇಕು. ಸಮಾಜದ ಕೆಲಸಗಳನ್ನು ಅಚ್ಚುಕಟ್ಟು ಮಾಡುವರನ್ನು ಆಯ್ಕೆ ಮಾಡಬೇಕು. ಆಗ ಮಾತ್ರ ಸಮಾಜದ
ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
Related Articles
Advertisement
ನಗರಸಭೆ ಸದಸ್ಯೆ ರೂಪಾ ಚಿನ್ನಿಕಟ್ಟಿ ಮಾತನಾಡಿ, ನಮ್ಮಲ್ಲಿ ಸಂಘಟನೆಯ ಕೊರತೆ ಇದೆ. ಪ್ರತಿಯೊಂದು ಮನೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂದರು. ಬಸವರಾಜ ಲಕ್ಷ್ಮೇಶ್ವರ, ಕರಬಸಪ್ಪ ನೀಲಗುಂದ, ರಮೇಶ ಗುತ್ತಲ, ಹನುಮಂತಪ್ಪ ಅಮಾಸಿ, ನಾಗರಾಜ ಅಗಡಿ, ಮಂಜುನಾಥ ಹೊಸಪೇಟೆ, ಪಾಂಡಪ್ಪ ಪೂಜಾರ, ಶಂಕರಣ್ಣ ನ್ಯಾಮಾತಿ, ಪ್ರಭು ಚಿನ್ನಿಕಟ್ಟಿ, ರಾಘವೇಂದ್ರ ಚಿನ್ನಿಕಟ್ಟಿ, ಸಂಕಪ್ಪ ಮಾರನಾಳ, ಶೋಭಾ ಹೊಸಪೇಟೆ, ಲಕ್ಷ್ಮೀ ಅಡಕಿ ಸೇರಿ ಮತ್ತಿತರು ಇದ್ದರು.