Advertisement

ಬ್ರಿಟಿಷರಿಗೆ ನಡುಕ ಹುಟ್ಟಿಸಿದ್ದ ರಾಣಿ ಚನ್ನಮ್ಮ

06:26 PM Oct 24, 2020 | Suhan S |

ಬೀದರ: ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ (ಮೈಲೂರ ಕ್ರಾಸ್‌) ಶುಕ್ರವಾರ ಬಸವ ನಗರ ವಿಕಾಸ ಸಮಿತಿ, ಬಸವನಗರ ಮಹಿಳಾ ಮಂಡಳಿ, ಬಸವ ಸಮಿತಿ ಹಾಗೂಕಿತ್ತೂರು ರಾಣಿ ಚನ್ನಮ್ಮ ಬಡಾವಣೆಗಳ ಆಶ್ರಯದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸ ವಆಚರಿಸಲಾಯಿತು.

Advertisement

ಸಂಸದ ಭಗವಂತ ಖೂಬಾ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಕಿತ್ತೂರು ರಾಣಿ ಚನ್ನಮ್ಮ, ಬೆಳವಡಿ  ಮಲ್ಲಮ್ಮ, ಒನಕೆ ಓಬವ್ವ ಸೇರಿ ಅನೇಕರ ಪಾತ್ರ ಮುಖ್ಯವಾಗಿದೆ ಎಂದರು.

ಜಯಂತಿ- ವಿಜಯೋತ್ಸವ ಆಚರಿಸುವುದರಿಂದ ಪ್ರತಿಯೊಬ್ಬರಲ್ಲಿ ದೇಶ ಪ್ರೇಮ ಹಾಗೂ ಸಾಹಸ ಹೆಚ್ಚಾಗುತ್ತದೆ. ಬಸವೇಶ್ವರ ವೃತ್ತದಿಂದ ಮೈಲೂರವರೆಗಿನ ಈ ರಸ್ತೆಯನ್ನುಕಿತ್ತೂರು ರಾಣಿ ಚನ್ನಮ್ಮ ರಸ್ತೆಯೆಂದುನಾಮಕರಣ ಮಾಡಿದ ನಗರಸಭೆ ಕಾರ್ಯ ಮೆಚ್ಚಿ ಅಭಿನಂದಿಸಿದರು.

ಶಾಸಕ ಬಂಡೆಪ್ಪ ಖಾಶೆಂಪೂರ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಅಂದು ಮಾಡಿದ ತ್ಯಾಗ ಇಂದಿನ ಯುವಜನರಿಗೆ ಸ್ಫೂ ರ್ತಿ ಎಂದರು.

ವಿಕಾಸ ಸಮಿತಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜನಾದೆಮಾತನಾಡಿದರು. ಈ ವೇಳೆ ಶರಣಪ್ಪ ಹೊಸಪೇಟ, ಬಲಭೀಮ ಬೆಟ್ಟದ್‌, ರತ್ನಾ ಪಾಟೀಲ, ಬಸವರಾಜ ಪಾಟೀಲಹಾರೂರಗೇರಿ, ಓಂಕಾರ ಮಾಶಟ್ಟೆ,ಚಂದ್ರಶೇಖರ ತಾಂಡೂರೆ, ಶಿವಕುಮಾರ ಭಾಲ್ಕೆ, ಸಂತೋಷಿ ಅರುಣಕುಮಾರ ಇದ್ದರು.

Advertisement

ಚನ್ನಮ್ಮನ ಧೈರ್ಯ-ಸಾಹಸ ಎಲ್ಲರಿಗೂ ಸ್ಫೂರ್ತಿ: ಚಿಂಚೋಳಿ

ಹುಣಸಗಿ: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮನ ಧೈರ್ಯ, ಸಾಹಸ ಎಲ್ಲರಿಗೂ ಸ್ಫೂರ್ತಿ ಎಂದು ಬಿಜೆಪಿ ಮುಖಂಡ ವಿರೇಶ ಚಿಂಚೋಳಿ ಹೇಳಿದರು.

ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ 197ನೇ ವಿಜಯೋತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸ್ತ್ರೀಯರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಬಹುದು ಎಂಬುದಕ್ಕೆ ಚನ್ನಮ್ಮನೇ ಪ್ರೇರಣೆ. ಹೀಗಾಗಿ ಅವರ ಬದುಕು ಎಲ್ಲರಿಗೂ ಆದರ್ಶವಾಗಿದೆ ಎಂದರು.

ವೀರರಾಣಿ ಕಿತ್ತೂರು ಚನ್ನಮ್ಮ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಬಸವರಾಜ ಮಲಗಲದಿನ್ನಿ ಮಾತನಾಡಿ, ಚನ್ನಮ್ಮ ಕೋಮುಸೌಹಾರ್ದತೆ ಮೆರೆದರು. ಚಿಕ್ಕ ವಯಸ್ಸಿನಲ್ಲಿಯೇ ಕುದುರೆ ಸವಾರಿ, ಬಿಲ್ವಿದ್ಯೆ ಕರಗತ ಮಾಡಿಕೊಂಡಿದ್ದಳು. ಹೀಗಾಗಿ ವೈರಿಗಳನ್ನು ಸಮರ್ಥವಾಗಿ ಎದುರಿಸುವ ದಿಟ್ಟತನ ಚನ್ನಮ್ಮನಲ್ಲಿತ್ತು ಎಂದು ಸ್ಮರಿಸಿದರು.

ಈ ವೇಳೆ ಎಪಿಎಂಸಿ ಅಧ್ಯಕ್ಷ ದೇವಣ್ಣ ಮಲಗಲದಿನ್ನಿ, ಮುರುಗೆಣ್ಣ ದೇಸಾಯಿ, ಅನೀಲ್‌ ಚಂದಾ, ಮಲ್ಲು ದೇಸಾಯಿ, ಹೊನ್ನಕೇಶವ ದೇಸಾಯಿ, ಸಿದ್ದು ರೇವಡಿ, ಮುದಕಪ್ಪ ದೇಸಾಯಿ, ಎಂ.ಎಸ್‌. ಚಂದಾ, ನಂದನಗೌಡ ಬಿರಾದಾರ, ಮಲ್ಲಿಕಾರ್ಜುನ ದೇಸಾಯಿ, ಅಮರೇಶ ವಜ್ಜಲ್‌, ಅಮರಣ್ಣ ದೇಸಾಯಿ, ರಾಜು ಮಲಗಲದಿನ್ನಿ, ಗೊಲ್ಲಾಳ ಮಲಗಲದಿನ್ನಿ, ಗೌಡಪ್ಪ ಬಲಗೌಡ್ರ, ಮಲ್ಲಯ್ಯ ಸ್ವಾಮಿ, ರಾಜು ಬಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next